India Covid Cases: ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳ, 24 ಗಂಟೆಗಳಲ್ಲಿ 3,823 ಹೊಸ ಪ್ರಕರಣಗಳು ಪತ್ತೆ
ಭಾರತದಲ್ಲಿ ಕೊರೊನಾ(Corona) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3,823 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. 18,389 ಸಕ್ರಿಯ ಪ್ರಕರಣಗಳಿವೆ

Updated on: Apr 02, 2023 | 10:26 AM
ಭಾರತದಲ್ಲಿ ಕೊರೊನಾ(Corona) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3,823 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. 18,389 ಸಕ್ರಿಯ ಪ್ರಕರಣಗಳಿವೆ, ಭಾರತದಲ್ಲಿ 2,994 ಹೊಸ ಕೋವಿಡ್ ಸೋಂಕುಗಳು ದಾಖಲಾದ ಒಂದು ದಿನದ ಬಳಿಕ ಬರೋಬ್ಬರಿ 3,823 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ಸಕ್ರಿಯ ಪ್ರಕರಣಗಳು ಶೇಕಡಾ 0.04 ರಷ್ಟಿದೆ, ಕಳೆದ 24 ಗಂಟೆಗಳಲ್ಲಿ 1,784 ಚೇತರಿಕೆಗಳು ಒಟ್ಟು ಚೇತರಿಕೆಗಳನ್ನು 4,41,73,335 ಕ್ಕೆ ಹೆಚ್ಚಿಸಿವೆ. ಪ್ರಸ್ತುತ 98.77 ರಷ್ಟು ಚೇತರಿಕೆ ದರ, ದೈನಂದಿನ ಪಾಸಿಟಿವಿಟಿ ದರ ಶೇ.2.87 ರಷ್ಟಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್ ಇಂಡಿಯಾ ಕನ್ನಡ ವೆಬ್ಸೈಟ್ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್ನಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.
Read More