Hanuman Statue: 54 ಅಡಿ ಎತ್ತರದ ಹನುಮಂತನ ಪ್ರತಿಮೆ ಅನಾವರಣಗೊಳಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್ನಲ್ಲಿ 54 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಇಂದು ನಾಡಿನಾದ್ಯಂತ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಗುಜರಾತ್ನಲ್ಲಿ 54 ಅಡಿ ಎತ್ತರದ ಹನುಮಂತನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಇಂದು ನಾಡಿನಾದ್ಯಂತ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್‌ನ ಬೊಟಾಡ್ ಜಿಲ್ಲೆಯ ಸಾರಂಗ್‌ಪುರ ದೇವಸ್ಥಾನದಲ್ಲಿ 54 ಅಡಿ ಎತ್ತರದ ಹನುಮಾನ್ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದಲ್ಲದೇ ಏಳು ಎಕರೆಯಲ್ಲಿ ನಿರ್ಮಿಸಿರುವ ದೇವಸ್ಥಾನದ ನೂತನ ರೆಸ್ಟೋರೆಂಟ್‌ಗೂ ಅಮಿತ್ ಶಾ ಚಾಲನೆ ನೀಡಿದರು. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಜನರು ಶನಿದೇವನ ಕೋಪದಿಂದ ಮುಕ್ತರಾಗುತ್ತಾರೆ ಎನ್ನುವ ಪ್ರತೀತಿ ಇದೆ.
ಮಾಹಿತಿ ಪ್ರಕಾರ, ಪಂಚಧಾತುಗಳಿಂದ ತಯಾರಿಸಿದ 30 ಸಾವಿರ ಕೆಜಿ ತೂಕದ ಈ ವಿಗ್ರಹವನ್ನು ಏಳು ಕಿ.ಮೀ ದೂರದಿಂದಲೂ ನೋಡಬಹುದಾಗಿದೆ. ಇದಲ್ಲದೇ ಈ ಪ್ರತಿಮೆಯ ವೆಚ್ಚ ಆರು ಕೋಟಿ ರೂಪಾಯಿ. ಕಷ್ಟಭಂಜನ ಹನುಮಾನ್ ದೇವಾಲಯವನ್ನು ವಿಕ್ರಮ್ ಸಂವತ್ 1905 ರಲ್ಲಿ ಸ್ಥಾಪಿಸಲಾಯಿತು.
ಮತ್ತಷ್ಟು ಓದಿ: Hanuman Jayanti 2023: ಹನುಮನಿಗೆ ಈ ಸಿಹಿ ಪ್ರಸಾದ ಅರ್ಪಿಸಿ
ಇದನ್ನು ನಿರ್ಮಿಸಿದವರು ಸದ್ಗುರು ಗೋಪಾಲಾನಂದ ಸ್ವಾಮಿಗಳು. ಗುಜರಾತಿನ ಬೋಟಾಡ್ ಜಿಲ್ಲೆಯ ಸಾರಂಗ್‌ಪುರದಲ್ಲಿ ಮಾಡಿದ ಕಷ್ಟಭಂಜನ ಹನುಮಂತ ಇಲ್ಲಿ ಹನುಮಾನ್ ದಾದಾ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಬಹಳ ಹಿಂದೆಯೇ ಇಲ್ಲಿನ ಜನರು ಶನಿದೇವನ ಕೋಪಕ್ಕೆ ಗುರಿಯಾಗುತ್ತಿದ್ದರು ಎಂದು ಹೇಳಲಾಗುತ್ತದೆ, ಆಗ ಭಕ್ತರು ಹನುಮಂತನನ್ನು ಪೂಜಿಸುತ್ತಾರೆ. ಆಗ ಹನುಮಂತ ಶನಿದೇವರ ಕೋಪವನ್ನು ಕಡಿಮೆ ಮಾಡಿದನು ಎಂದು ಹೇಳಲಾಗುತ್ತದೆ.
ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು, ಹಬ್ಬದ ಸಮಯದಲ್ಲಿ ಶಾಂತಿ ಕಾಪಾಡಬೇಕು ಮತ್ತು ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಎಲ್ಲಾ ರೀತಿಯ ಶಕ್ತಿಗಳ ಮೇಲೆ ನಿಗಾ ಇಡಬೇಕು ಎಂದು ಗೃಹ ಸಚಿವಾಲಯ ಟ್ವೀಟ್ ಮಾಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ