Disease X ಬರುತಿದೆ ಎಚ್ಚರವಿರಲಿ.. ಎಬೊಲಾದಷ್ಟೇ ಮಾರಣಾಂತಿಕ, ಪ್ರಸರಣದಲ್ಲಿ ಕೊರೊನಾಕ್ಕಿಂತಲೂ ವೇಗ

| Updated By: ಸಾಧು ಶ್ರೀನಾಥ್​

Updated on: Jan 04, 2021 | 4:38 PM

ಡಿಸೀಸ್​ ಎಕ್ಸ್​ನ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಡೇಲಿ ಮೇಲ್​ ಮಾಧ್ಯಮ ವರದಿ ಮಾಡಿದೆ. ವ್ಯಕ್ತಿಯೋರ್ವನಿಗೆ ಜ್ವರ ಮತ್ತು ರಕ್ತಸ್ರಾವ ಆಗುತ್ತಿತ್ತು. ಇದು ಎಬೋಲಾ ಲಕ್ಷಣವೇ ಆಗಿದ್ದರಿಂದ ಎಬೋಲಾ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ವರದಿ ನೆಗೆಟಿವ್​ ಬಂದಿದೆ.

Disease X ಬರುತಿದೆ ಎಚ್ಚರವಿರಲಿ.. ಎಬೊಲಾದಷ್ಟೇ ಮಾರಣಾಂತಿಕ, ಪ್ರಸರಣದಲ್ಲಿ ಕೊರೊನಾಕ್ಕಿಂತಲೂ ವೇಗ
ಎಬೊಲಾ ಪತ್ತೆ ಹಚ್ಚಿದ್ದ ವೈದ್ಯ..
Follow us on

ನವದೆಹಲಿ: ಕೊರೊನಾ ವೈರಸ್​ನಿಂದ ಜಗತ್ತು ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಹಲವು ಲಸಿಕೆಗಳು ಹೊರಬರುತ್ತಿದ್ದು, ತುರ್ತು ಬಳಕೆಗೆ ಆಯಾ ದೇಶಗಳ ಔಷಧ ನಿಯಂತ್ರಣಾ ಪ್ರಾಧಿಕಾರಗಳಿಂದ ಅನುಮೋದನೆಯನ್ನೂ ಪಡೆಯುತ್ತಿವೆ. ಈ ಮಧ್ಯೆ ಕೊರೊನಾ ರೂಪಾಂತರಿ ವೈರಸ್​ ಕೂಡ ಲಗ್ಗೆಯಿಟ್ಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಆದರೆ ಇಷ್ಟಕ್ಕೇ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಭವಿಷ್ಯದಲ್ಲಿ ಇನ್ನೂ ಮಾರಕ ವೈರಸ್​ಗಳು ಮನುಕುಲಕ್ಕೆ ಕಂಟಕವಾಗಲಿರುವ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ Disease X (ಡಿಸೀಸ್​ ಎಕ್ಸ್​) ಎಂಬ ಮಾರಣಾಂತಿಕ ವೈರಸ್ ಶೀಘ್ರದಲ್ಲೇ ಜಗತ್ತಿಗೆ ದಾಂಗುಡಿ ಇಡಲಿದ್ದು, ಇದು ಕೊರೊನಾಕ್ಕಿಂತಲೂ ವೇಗವಾಗಿ ಪ್ರಸರಣವಾಗಲಿದೆ. ಎಬೊಲಾದಷ್ಟೇ ಮಾರಣಾಂತಿಕವಾದ ವೈರಸ್​ ಎಂದು ವಿಜ್ಞಾನಿ, ವೈದ್ಯ ಪ್ರೊಫೆಸರ್ ಜೀನ್-ಜಾಕ್ವೆಸ್ ಮುಯೆಂಬೆ ಟಾಮ್‌ಫಮ್ ತಿಳಿಸಿದ್ದಾರೆ.

ಈ ಜೀನ್​ ಜಾಕ್ವೆಸ್ ಬೇರೆ ಯಾರೂ ಅಲ್ಲ, 1976ರಲ್ಲಿ ಎಬೊಲಾ ವೈರಸ್ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೈದ್ಯ. ಮುಂಬರುವ ದಿನಗಳಲ್ಲಿ ಮನುಕುಲ ಡಿಸೀಸ್ ಎಕ್ಸ್​ ನಂತಹ ಹಲವು ಅಪಾಯಕಾರಿ ವೈರಸ್​ಗಳನ್ನು ಎದುರಿಸಬೇಕಾಗುತ್ತದೆ. ಸದ್ಯ Disease X ಎಂಬುದು ಒಂದು ಕಾಲ್ಪನಿಕ ರೋಗವಾಗಿರಬಹುದು. ಆದರೆ ಒಮ್ಮೆ ಇದು ಕಾಣಿಸಿಕೊಂಡರೆ ಜಗತ್ತಿಗೇ ಮಾರಕವಾಗಲಿದೆ. ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳಿಂದ ಹೊಸ ಮತ್ತು ಮಾರಣಾಂತಿಕ ವೈರಸ್​ಗಳು ಉಗಮಗೊಳ್ಳುತ್ತಿವೆ ಎಂದು ಜಾಕ್ವೆಸ್ ಹೇಳಿದ್ದಾರೆ.

ಮೊದಲ ಪ್ರಕರಣ
ಡಿಸೀಸ್​ ಎಕ್ಸ್​ನ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು ಡೇಲಿ ಮೇಲ್​ ಮಾಧ್ಯಮ ವರದಿ ಮಾಡಿದೆ. ವ್ಯಕ್ತಿಯೋರ್ವನಿಗೆ ಜ್ವರ ಮತ್ತು ರಕ್ತಸ್ರಾವ ಆಗುತ್ತಿತ್ತು. ಇದು ಎಬೋಲಾ ಲಕ್ಷಣವೇ ಆಗಿದ್ದರಿಂದ ಎಬೋಲಾ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ವರದಿ ನೆಗೆಟಿವ್​ ಬಂದಿದೆ. ಹೀಗಾಗಿ ಇದನ್ನು ಡಿಸೀಸ್​ ಎಕ್ಸ್ ಎಂದು ಗುರುತಿಸಿರುವ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಕೊವಿಡ್​-19 ಸಾಂಕ್ರಾಮಿಕ ರೋಗಕ್ಕಿಂತಲೂ ಭೀಕರ, ಅಪಾಯಕಾರಿ ಎಂದು ಹೇಳಿದ್ದಾರೆ.

ಕೊರೊನಾ ಲಸಿಕೆಯೊಂದಿಗೆ ರಾಜಕೀಯ ಬೆರಕೆ.. ಒಬ್ಬೊಬ್ಬರದ್ದೂ ಒಂದೊಂದು ರಾಗ: ಆರೋಗ್ಯ ಸಚಿವರು ಹೇಳಿದ್ದೇನು?