ಟಿಯಾಂಜಿನ್, ಸೆಪ್ಟೆಂಬರ್ 1: ಚೀನಾದ ಟಿಯಾಂಜಿನ್ನಲ್ಲಿ ನಡೆಯುತ್ತಿರುವ ಎಸ್ಸಿಒ ಶೃಂಗಸಭೆಯು (SCO summt) ಹಲವು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗಿವೆ. ಭಾರತ, ಚೀನಾ, ರಷ್ಯಾ ಈ ತ್ರಿಶಕ್ತಿಗಳ ಸಮಾಗಮಕ್ಕೆ ಈ ಸಭೆ ವೇದಿಕೆಯಾಗಿದೆ. ಹಲವು ವರ್ಷಗಳ ಬಳಿಕ ನರೇಂದ್ರ ಮೋದಿ (Narendra Modi) ಅವರು ಚೀನಾಗೆ ಭೇಟಿ ನೀಡಿದ್ದಾರೆ. ಅಮೆರಿಕದ ಟ್ಯಾರಿಫ್ ನೀತಿಗೆ ಪ್ರತಿರೋಧ ತೋರುತ್ತಿರುವ ಭಾರತವನ್ನು ತನ್ನೆಡೆ ಸೆಳೆಯಲು ಚೀನಾ ಮಾಡುತ್ತಿರುವ ಪ್ರಯತ್ನ ಸ್ಪಷ್ಟವಾಗಿದೆ. ಇದೇ ವೇಳೆ, ಎಸ್ಸಿಒ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಆಪ್ತತೆ ಬಹಳ ಸ್ಪಷ್ಟವಾಗಿ ಗೋಚರವಾಯಿತು.
ವ್ಲಾದಿಮಿರ್ ಪುಟಿನ್ ಮತ್ತು ನರೇಂದ್ರ ಮೋದಿ ಮಾತನಾಡುತ್ತಾ ಹೋಗುವುದನ್ನು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ನಿಂತು ನೋಡುತ್ತಿದ್ದ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಂಚಿಕೆ ಆಗುತ್ತಿದೆ. ಭಾರತ, ಚೀನಾ, ರಷ್ಯಾ ಮುಖ್ಯಸ್ಥರು ಒಂದೆಡೆ ಗುಂಪುಗೂಡಿ ಹರಟೆ ಹೊಡೆಯುತ್ತಿರುವ ದೃಶ್ಯವೂ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಎಸ್ಸಿಒ ಸಮಿಟ್ನಲ್ಲಿ ಭಯೋತ್ಪಾದನೆ ವಿರುದ್ಧ ವ್ಯಕ್ತವಾದ ಖಂಡನೆ; ಭಾರತದ ನಿಲುವಿಗೆ ಬೆಂಬಲ, ಪಾಕಿಸ್ತಾನಕ್ಕೆ ಪರೋಕ್ಷ ಮುಖಭಂಗ
ಪ್ರಧಾನಿ ನರೇಂದ್ರ ಮೋದಿ ಅವರು ತಾವು ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡುವುದು ಖುಷಿ ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ ಅವರ ಎಕ್ಸ್ ಪೋಸ್ಟ್
Always a delight to meet President Putin! pic.twitter.com/XtDSyWEmtw
— Narendra Modi (@narendramodi) September 1, 2025
ಈ ಶಂಗಸಭೆಯ ಜೊತೆ ಜೊತೆಯಲ್ಲೇ ಭಾರತವು ಚೀನಾದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ. ನರೇಂದ್ರ ಮೋದಿ ಮತ್ತು ಷಿ ಜಿನ್ಪಿಂಗ್ ಮಧ್ಯೆ ಮಾತುಕತೆ ನಡೆಯಿತು. ಇವತ್ತು ಎಸ್ಸಿಒ ಸಮಿಟ್ ಬಳಿಕ ನರೇಂದ್ರ ಮೋದಿ ಮತ್ತು ಪುಟಿನ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಸಭೆ ಬಳಿಕ ಈ ಮಾತುಕತೆಗೆ ಇಬ್ಬರೂ ಒಂದೇ ಕಾರಿನಲ್ಲಿ ಒಟ್ಟಿಗೆ ತೆರಳಿದರು.
ಇದನ್ನೂ ಓದಿ: ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದಿಂದ ಭಯೋತ್ಪಾದನೆ ವಿಚಾರ; ಚೀನಾದಿಂದಲೂ ಬೆಂಬಲ
ಈ ಎಸ್ಸಿಒ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆಯನ್ನು ಬಲವಾಗಿ ಖಂಡಿಸಿದರು. ಪಹಲ್ಗಾಂ ಉಗ್ರ ದಾಳಿ ಘಟನೆಯನ್ನು ಉಲ್ಲೇಖಿಸಿ, ಭಯೋತ್ಪಾದನೆ ವಿಚಾರದಲ್ಲಿ ವಿವಿಧ ರಾಷ್ಟ್ರಗಳ ದ್ವಂದ್ವ ನಿಲುವನ್ನು ಪ್ರಶ್ನಿಸಿದರು. ಈ ಸಮಿಟ್ನಲ್ಲಿ ಭಾರತದ ಅಭಿಪ್ರಾಯಕ್ಕೆ ಸದಸ್ಯ ರಾಷ್ಟ್ರಗಳು ಬೆಂಬಲ ನೀಡಿವೆ. ಟಿಯಾಂಜಿನ್ ಡಿಕ್ಲರೇಶನ್ನಲ್ಲಿ ಪಹಲ್ಗಾಂ ದಾಳಿ ಘಟನೆಯನ್ನು ಖಂಡಿಸಲಾಗಿದೆ. ಈ ದಾಳಿಗೆ ಬೆಂಬಲ ನೀಡಿದವರಿಗೆ ಶಾಸ್ತಿಯಾಗಬೇಕೆಂದು ಆಗ್ರಹಿಸಲಾಗಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Mon, 1 September 25