ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದಿಂದ ಭಯೋತ್ಪಾದನೆ ವಿಚಾರ; ಚೀನಾದಿಂದಲೂ ಬೆಂಬಲ
Narendra Modi raises cross border terrorism issue with China: ಚೀನಾದೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಭಯೋತ್ಪಾದನೆ ವಿಚಾರ ಎತ್ತಿದ್ದಾರೆ. ಟಿಯಾಂಜಿನ್ನಲ್ಲಿ ನಡೆಯುತ್ತಿರುವ ಎಸ್ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಚೀನಾಗೆ ಭೇಟಿ ನೀಡಿದ್ದಾರೆ. ಅಂತಾರಾಷ್ಟ್ರೀಯ ಭಯೋತ್ಪಾದನೆಯಿಂದ ಎರಡೂ ದೇಶಗಳು ಹೇಗೆ ಬಾಧಿತವಾಗಿವೆ ಎಂಬುದನ್ನು ಷಿ ಜಿಂಪಿಂಗ್ ಅವರಿಗೆ ಮೋದಿ ಮನವರಿಕೆ ಮಾಡಿದ್ದಾರೆ.

ಬೀಜಿಂಗ್, ಆಗಸ್ಟ್ 31: ಚೀನಾದೊಂದಿಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತವು ಅಂತಾರಾಷ್ಟ್ರೀಯ ಭಯೋತ್ಪಾದನೆ ವಿಚಾರವನ್ನು (cross-border terrorism issue) ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಟಿಯಾಂಜಿನ್ನಲ್ಲಿ ಎಸ್ಸಿಒ ಶೃಂಗಸಭೆಯ (SCO summit) ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ದ್ವಿಪಕ್ಷೀಯ ಮಾತುಕತೆಯಲ್ಲಿ ನರೇಂದ್ರ ಮೋದಿ (Narendra Modi) ಅವರಿಂದ ಪ್ರಸ್ತಾಪವಾದ ಕೆಲ ಸಂಗತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಾತುಕತೆ ವೇಳೆ, ಅಂತಾರಾಷ್ಟ್ರೀಯ ಭಯೋತ್ಪಾದನೆಯು ಭಾರತಕ್ಕೆ ಬಹಳ ಆತಂಕಕಾರಿ ಎನಿಸಿರುವ ಸಂಗತಿಯಾಗಿದೆ. ಇಂಥ ಭಯೋತ್ಪಾದನೆಯು ಭಾರತ ಹಾಗೂ ಚೀನಾ ಎರಡೂ ದೇಶಗಳಿಗೂ ಪರಿಣಾಮ ಬೀರುವಂಥದ್ದು ಎಂಬುದನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು ಎಂದು ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
‘ಈ ಅಂತರರಾಷ್ಟ್ರೀಯ ಭಯೋತ್ಪಾದನೆಯ ಭಾರತ ಹಾಗೂ ಚೀನಾ ಈ ಎರಡಕ್ಕೂ ಪರಿಣಾಮ ಬೀರುವಂಥದ್ದು. ಎರಡೂ ದೇಶಗಳು ಪರಸ್ಪರ ಸಹಕಾರ ಹಾಗೂ ಅರಿವಿನಿಂದ ಈ ಸಮಸ್ಯೆ ವಿರುದ್ಧ ಹೋರಾಡುವುದು ಬಹಳ ಮುಖ್ಯ’ ಎಂದು ಪತ್ರಿಕಾಗೋಷ್ಠಿಯಲ್ಲಿ ವಿಕ್ರಮ್ ಮಿಸ್ರಿ ಹೇಳಿದ್ದಾರೆ. ಈ ವಿಚಾರದ ಬಗ್ಗೆ ಚೀನೀ ಮುಖ್ಯಸ್ಥರೂ ಸಹಮತ ವ್ಯಕ್ತಪಡಿಸಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಪರಸ್ಪರ ನಂಬಿಕೆ, ಗೌರವದ ಮೇಲೆ ನಮ್ಮ ಸಂಬಂಧ ಮುಂದುವರೆಸಲು ಬದ್ಧ: ಜಿನ್ಪಿಂಗ್ಗೆ ಮೋದಿ ಸಂದೇಶ
ಚೀನಾ ಮುಖ್ಯಸ್ಥ ಷಿ ಜಿಂಪಿಂಗ್ ಜೊತೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇನ್ನೂ ಕೆಲ ಮಹತ್ವ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಚೀನಾದೊಂದಿಗಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಬೇಕಾದರೆ ಗಡಿ ಭಾಗಗಳಲ್ಲಿ ಶಾಂತಿ ಪರಿಸ್ಥಿತಿ ನೆಲಸಿರುವುದು ಮುಖ್ಯ ಎಂಬುದನ್ನು ಚೀನಾಗೆ ಮನವರಿಕೆ ಮಾಡಲು ಮೋದಿ ಯತ್ನಿಸಿದರೆಂದು ಭಾರತದ ವಿದೇಶಾಂಗ ಕಾರ್ಯದರ್ಶಿಗಳು ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಏಳು ವರ್ಷಗಳ ಬಳಿಕ ಚೀನಾಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಚೀನಾ ಟಿಯಾಂಜಿನ್ನಲ್ಲಿ ಶಾಂಗೈ ಕೋಆಪರೇಶನ್ ಆರ್ಗನೈಸೇಶನ್ನ (ಎಸ್ಸಿಒ) ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರನ್ನು ಕಳೆದ ಒಂದು ವರ್ಷದಿಂದ ಎರಡನೇ ಬಾರಿ ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆಗೆ ಜಗ್ಗದ ಮೋದಿ, ಚೀನಾದಲ್ಲಿ ಷಿ ಜಿನ್ಪಿಂಗ್, ಪುಟಿನ್ ಜತೆ ಮಾತುಕತೆ
ಈ ಎಸ್ಸಿಒ ಸಭೆಯು ಜಾಗತಿಕ ರಾಜಕೀಯ ವಲಯದಲ್ಲಿ ಹೊಸ ಸಂದೇಶ ರವಾನಿಸಿದೆ. ಭಾರತ, ಚೀನಾ ಮತ್ತು ರಷ್ಯಾ ಶಕ್ತಿಗಳು ಒಗ್ಗೂಡಿರುವ ಸಂದೇಶ ಎಲ್ಲೆಡೆ ಸಿಕ್ಕಿದೆ. ಹಾಗೆಯೇ, ಅನೇಕ ಅಭಿವೃದ್ಧಿಶೀಲ ದೇಶಗಳ ಮುಖಂಡರು ಈ ಸಮಿಟ್ನಲ್ಲಿ ಪಾಲ್ಗೊಂಡಿದ್ದಾರೆ. ಇದರೊಂದಿಗೆ ಜಾಗತಿಕ ರಾಜಕೀಯದಲ್ಲಿ ಹೊಸ ಸಮೀಕರಣ ರಚನೆಯಾಗುತ್ತಿರುವಂತೆ ಮೇಲ್ನೋಟಕ್ಕೆ ಭಾಸವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




