‘ನಮ್ಮನ್ನು ಮನೆಗೆ ಕಳುಹಿಸಿ’; ಪಾಕಿಸ್ತಾನದಲ್ಲಿ ಅಪಹರಣ, ಮತಾಂತರಕ್ಕೆ ಸಿಲುಕಿದ ಹಿಂದೂ ಸಹೋದರಿಯರ ಗೋಳಾಟ

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಅಪ್ರಾಪ್ತ ಹಿಂದೂ ಸಹೋದರಿಯರನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ವಿವಾಹ ಮಾಡಲಾಗಿರುವ ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ನ್ಯಾಯಾಲಯವು ಬಾಲಕಿಯರನ್ನು ಹೆತ್ತವರೊಂದಿಗೆ ಕಳುಹಿಸಲು ನಿರಾಕರಿಸಿದ ನಂತರ, ಇಬ್ಬರೂ ಬಾಲಕಿಯರು ಕೋರ್ಟ್ ಹೊರಗೆ "ನಮಗೆ ಮನೆಗೆ ಹೋಗಬೇಕು" ಎಂದು ಕಣ್ಣೀರಿಟ್ಟು ಗೋಳಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 13 ಮತ್ತು 14 ವರ್ಷದ ಸೀತಾ ಮತ್ತು ರೂಪೀ ಎಂಬ ಬಾಲಕಿಯರನ್ನು ಅಪಹರಿಸಿ, ಬಲವಂತದ ಮತಾಂತರದ ನಂತರ ಅಮ್ಜದ್ ಸೊಲಂಗಿ ಮತ್ತು ಮನ್ಸೂರ್ ಸೊಲಂಗಿ ಎಂಬುವರೊಂದಿಗೆ ಮದುವೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ನಮ್ಮನ್ನು ಮನೆಗೆ ಕಳುಹಿಸಿ; ಪಾಕಿಸ್ತಾನದಲ್ಲಿ ಅಪಹರಣ, ಮತಾಂತರಕ್ಕೆ ಸಿಲುಕಿದ ಹಿಂದೂ ಸಹೋದರಿಯರ ಗೋಳಾಟ
ಸೀತಾ ಮತ್ತು ರೂಪೀ
Image Credit source: x

Updated on: Sep 11, 2026 | 4:29 PM

ಕರಾಚಿ, ಸೆಪ್ಟೆಂಬರ್ 11: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಇಬ್ಬರು ಅಪ್ರಾಪ್ತ ಹಿಂದೂ ಸಹೋದರಿಯರನ್ನು ಅಪಹರಿಸಿ, ಬಲವಂತವಾಗಿ ಮತಾಂತರ ಮಾಡಿ, ವಿವಾಹ ಮಾಡಲಾಗಿರುವ ಕರಾಳ ಘಟನೆ ಬೆಳಕಿಗೆ ಬಂದಿದೆ. ಪಾಕಿಸ್ತಾನದ ನ್ಯಾಯಾಲಯವು ಆ ಬಾಲಕಿಯರನ್ನು ಹೆತ್ತವರೊಂದಿಗೆ ಕಳುಹಿಸಲು ನಿರಾಕರಿಸಿದ ನಂತರ, ಇಬ್ಬರೂ ಬಾಲಕಿಯರು ಕೋರ್ಟ್ ಹೊರಗೆ “ನಮಗೆ ಮನೆಗೆ ಹೋಗಬೇಕು” ಎಂದು ಕಣ್ಣೀರಿಟ್ಟು ಗೋಳಾಡಿದ ಹೃದಯವಿದ್ರಾವಕ ವಿಡಿಯೋ ಬಹಿರಂಗವಾಗಿದೆ.

ಕಚ್ಚಿ ಕೊಹ್ಲಿ ಸಮುದಾಯದ 13 ಮತ್ತು 14 ವರ್ಷದ ಸೀತಾ ಮತ್ತು ರೂಪೀ ಎಂಬ ಬಾಲಕಿಯರನ್ನು ಅಪಹರಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಅಮ್ಜದ್ ಸೊಲಂಗಿ ಮತ್ತು ಮನ್ಸೂರ್ ಸೊಲಂಗಿ ಎಂಬುವವರೊಂದಿಗೆ ಮದುವೆ ಮಾಡಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಿಂಧ್ ಪ್ರಾಂತ್ಯದಲ್ಲಿ ಪಾಕಿಸ್ತಾನದ ಹೆಚ್ಚಿನ ಹಿಂದೂ ಜನಸಂಖ್ಯೆಯಿದ್ದು, ಕೊಹ್ಲಿ, ಭೀಲ್ ಮತ್ತು ಮೇಘವಾಲ್ ನಂತಹ ಶೋಷಿತ ಸಮುದಾಯಗಳ ಅಪ್ರಾಪ್ತ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಈ ರೀತಿಯ ಅಪಹರಣ ಮತ್ತು ಬಲವಂತದ ಮತಾಂತರಗಳು ನಿರಂತರವಾಗಿ ನಡೆಯುತ್ತಿವೆ.

ಇದನ್ನೂ ಓದಿ: ಆಪರೇಷನ್ ಅಶ್‌ದಾರ್; ಜಮ್ಮು-ಕಾಶ್ಮೀರದ ಬದ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್ ಕಮಾಂಡರ್ ಹತ್ಯೆ

ನ್ಯಾಯಾಲಯದ ಹೊರಗೆ ಬಾಲಕಿಯರ ಗೋಳಾಟ:

ತಾಂಡೋ ಅಲ್ಲಾಯಾರ್ ಜಿಲ್ಲಾ ನ್ಯಾಯಾಲಯಕ್ಕೆ ಬಾಲಕಿಯರನ್ನು ಹಾಜರುಪಡಿಸಿದಾಗ, ಅವರು ತಮ್ಮ ಹೆತ್ತವರ ಜೊತೆ ಮನೆಗೆ ತೆರಳುತ್ತೇವೆಂದು ಬೇಡಿಕೊಂಡರು. ಆದರೆ, ಅಮೆರಿಕ ಮೂಲದ ಸಿಂಧ್ ರಿನೆಸಾನ್ಸ್ ಸಂಸ್ಥೆಯ ಪ್ರಕಾರ, ನ್ಯಾಯಾಲಯವು ಬಾಲಕಿಯರನ್ನು 2 ದಿನಗಳ ಕಾಲ ‘ಸುರಕ್ಷಿತ ಮನೆಗೆ’ ರವಾನಿಸಲು ಆದೇಶಿಸಿದೆ. ಬಾಲಕಿಯರು ಕಣ್ಣೀರು ಹಾಕುತ್ತಾ ಮನೆಗೆ ಕಳುಹಿಸುವಂತೆ ಬೇಡಿಕೊಳ್ಳುತ್ತಿರುವ ವಿಡಿಯೋವನ್ನು ಪಾಕಿಸ್ತಾನಿ ಪತ್ರಕರ್ತೆ ವೀಂಗಾಸ್ ಹಂಚಿಕೊಂಡಿದ್ದಾರೆ.

10 ದಿನಗಳಲ್ಲಿ 6 ಬಾಲಕಿಯರ ಅಪಹರಣ:

ಈ ಘಟನೆಯ ಬೆನ್ನಲ್ಲೇ ಅದೇ ತಾಂಡೋ ಅಲ್ಲಾಯಾರ್ ಜಿಲ್ಲೆಯಿಂದ ‘ಪಾನ್ಸಿ ಕೊಹ್ಲಿ’ ಎಂಬ ಮತ್ತೊಬ್ಬ 14 ವರ್ಷದ ಬಾಲಕಿಯನ್ನು ಅಪಹರಿಸಲಾಗಿದೆ. ಕಳೆದ 10 ದಿನಗಳ ಅಂತರದಲ್ಲಿ ಈ ಒಂದೇ ಜಿಲ್ಲೆಯಲ್ಲಿ ಕನಿಷ್ಠ 6 ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಮತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಫೋನ್ ನಂಬರ್ ಇದ್ದ ಪಾರಿವಾಳದ ಉಂಗುರ ಪತ್ತೆ; ಗಡಿಯಲ್ಲಿ ಹೈ ಅಲರ್ಟ್

‘ಸಿಂಧ್ ಬಾಲ ವಿವಾಹ ತಡೆ ಕಾಯ್ದೆ 2013’ರ ಪ್ರಕಾರ ಮದುವೆಗೆ 18 ವರ್ಷ ವಯಸ್ಸಾಗಿರಬೇಕು. ಈ ಕಾಯ್ದೆಯಡಿ ಅಪ್ರಾಪ್ತರ ಮದುವೆ ಮಾಡಿಸುವುದು ಜಾಮೀನು ರಹಿತ ಅಪರಾಧವಾಗಿದೆ. ಆದರೆ, ಕೊಹ್ಲಿ, ಭೀಲ್ ಮತ್ತು ಮೇಘವಾಲ್ ಸಮುದಾಯದ ಬಡ ಹಿಂದೂ ಕುಟುಂಬಗಳಿಗೆ ಕಾನೂನು ಅಥವಾ ಪೋಲೀಸ್ ನೆರವು ಸಿಗದಿರುವುದನ್ನು ಮೂಲಭೂತವಾದಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us