AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಗ್ಯಾಂಬಿಯಾ – ಲಂಡನ್​ ವಿಮಾನದ ಚಕ್ರದ ಸಂಧಿಯಲ್ಲಿತ್ತು ಮೃತದೇಹ; ನಿಗೂಢತೆ ಬೇಧಿಸಲು ಪೊಲೀಸರ ಹರಸಾಹಸ

ಆಘಾತಕಾರಿ ವಿದ್ಯಮಾನವೊಂದರಲ್ಲಿ ಗ್ಯಾಂಬಿಯಾದಿಂದ ಬ್ರಿಟನ್​ಗೆ ಬಂದ ವಿಮಾನವೊಂದರ ಚಕ್ರದ ಸಂಧಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯ ಗುರುತುಪತ್ತೆ ಈಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಿಮಿಸಿದೆ.

Shocking News: ಗ್ಯಾಂಬಿಯಾ - ಲಂಡನ್​ ವಿಮಾನದ ಚಕ್ರದ ಸಂಧಿಯಲ್ಲಿತ್ತು ಮೃತದೇಹ; ನಿಗೂಢತೆ ಬೇಧಿಸಲು ಪೊಲೀಸರ ಹರಸಾಹಸ
ಸಾಂದರ್ಭಿಕ ಚಿತ್ರImage Credit source: BBC
TV9 Web
| Edited By: |

Updated on:Dec 24, 2022 | 5:57 PM

Share

ಲಂಡನ್: ಆಘಾತಕಾರಿ ವಿದ್ಯಮಾನವೊಂದರಲ್ಲಿ ಗ್ಯಾಂಬಿಯಾದಿಂದ (Gambia) ಬ್ರಿಟನ್​ಗೆ (Britain) ಬಂದ ವಿಮಾನವೊಂದರ ಚಕ್ರದ ಸಂಧಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ (Dead Body) ಪತ್ತೆಯಾಗಿದೆ. ವ್ಯಕ್ತಿಯ ಗುರುತುಪತ್ತೆ ಈಗ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಿಮಿಸಿದೆ. ಗ್ಯಾಂಬಿಯಾ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ರಾಜಧಾನಿ ಬಂಜುಲ್​ನಿಂದ (Banjul) ಲಂಡನ್​ನ ಗ್ಯಾಟ್​​ವಿಕ್ ವಿಮಾನ ನಿಲ್ದಾಣಕ್ಕೆ (Gatwick airport) ತೆರಳಿದ್ದ ಟಿಯುಐ ಏರ್​ವೇಸ್​ನ ವಿಮಾನದ ಚಕ್ರದ ಸಂಧಿಯಲ್ಲಿ ಅಪರಿಚಿತ ಕಪ್ಪು ವರ್ಣೀಯ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

‘ಬ್ರಿಟನ್​ನ ಸಸೆಕ್ಸ್ ಮೆಟ್ರೋಪಾಲಿಟನ್ ಪೊಲೀಸರಿಂದ ನಮಗೆ ತೀವ್ರ ದುಃಖಕರವಾದ ಮತ್ತು ಆಘಾತಕರವಾದ ಮಾಹಿತಿ ದೊರೆತಿದೆ. ಟಿಯುಐ ಏರ್​ವೇಸ್​ನ ವಿಮಾನದ ಚಕ್ರದ ಸಂಧಿಯಲ್ಲಿ ಡಿಸೆಂಬರ್​ 5ರಂದು ವ್ಯಕ್ತಿಯ ಮೃತದೇಹ ಪತ್ತೆಯಾಗಿರುವುದಾಗಿ ಅವರು ತಿಳಿಸಿದ್ದಾರೆ’ ಎಂದು ಗ್ಯಾಂಬಿಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಮೃತ ವ್ಯಕ್ತಿ ಕಪ್ಪು ವರ್ಣೀಯನಾಗಿದ್ದು, ಚಕ್ರದ ಸಂಧಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅದರ ಜತೆ ಗುರುತಿನ ಯಾವುದೇ ದಾಖಲೆಗಳಾಗಲೀ, ಹೆಸರು, ವಯಸ್ಸು, ರಾಷ್ಟ್ರೀಯತೆ ಇತ್ಯಾದಿ ವಿವರಗಳನ್ನು ತಿಳಿಯುವುದಕ್ಕೆ ಸಂಬಂಧಿಸಿದ ಯಾವುದೇ ಕುರುಹು ಇರಲಿಲ್ಲ. ಮೃತ ವ್ಯಕ್ತಿ ಗ್ಯಾಂಬಿಯಾ ಪ್ರಜೆಯೇ ಅಥವಾ ಬೇರೆ ದೇಶದವರೇ ಎಂಬ ವಿಚಾರದಲ್ಲಿ ಸ್ಪಷ್ಟತೆ ಇಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನಿಯನ್ ಮಹಿಳೆಯರನ್ನು ಅತ್ಯಾಚಾರ ಮಾಡುವಂತೆ ರಷ್ಯಾದ ಯೋಧನಿಗೆ ಹೇಳಿದ ಪತ್ನಿಗೆ ಜೈಲು, ವಾಂಟೆಡ್ ಲಿಸ್ಟ್​​ಗೆ ಸೇರ್ಪಡೆ

ಅಪರಿಚಿತ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗ್ಯಾಂಬಿಯಾ ಅಧಿಕಾರಿಗಳು ಬ್ರಿಟಿಷ್ ಪೊಲೀಸರ ಜತೆ ಸಂಪರ್ಕದಲ್ಲಿದ್ದಾರೆ. ಗುರುತು ಪತ್ತೆಗಾಗಿ ಮೃತದೇಹದ ಡಿಎನ್​ಎ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಗ್ಯಾಂಬಿಯಾ ಸರ್ಕಾರದ ವಕ್ತಾರ ಎಬ್ರಿಮಾ ಜಿ. ಸಂಕರೆ ತಿಳಿಸಿದ್ದಾರೆ. ಬ್ರಿಟನ್​ ಪೊಲೀಸರ ಜತೆ ಸಂಪರ್ಕದಲ್ಲಿರುವುದರೊಂದಿಗೆ ಗ್ಯಾಂಬಿಯಾ ಪೊಲೀಸರೂ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ದುರದೃಷ್ಟಕರ ಘಟನೆ ಬಗ್ಗೆ ಸಾರ್ವಜನಿಕರಿಗೆ ಶೀಘ್ರದಲ್ಲೇ ವಿವರಗಳನ್ನು ಒದಗಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಆಫ್ರಿಕಾ ದೇಶಗಳಿಂದ ಯುರೋಪ್​ ದೇಶಗಳಿಗೆ ಬಂದ ವಿಮಾನಗಳಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆಗಳು ಈ ಹಿಂದೆಯೂ ವರದಿಯಾಗಿದ್ದವು. ಈ ವರ್ಷದ ಆರಂಭದಲ್ಲಿ ಕೀನ್ಯಾದಿಂದ ಆ್ಯಮ್​ಸಟರ್​ಡ್ಯಾಂಗೆ ಬಂದ ಸರಕು ಸಾಗಣೆ ವಿಮಾನದ ಮುಂಭಾಗದ ಚಕ್ರದ ಸಂಧಿಯಲ್ಲಿ ಮೃತದೇಹ ಪತ್ತೆಯಾಗಿತ್ತು. 2019ರಲ್ಲಿಯೂ ಇಂಥದ್ದೇ ಪ್ರಕರಣವೊಂದು ವರದಿಯಾಗಿತ್ತು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Sat, 24 December 22

Follow Us
Web contact
Web contact

TV9 Kannada

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ