Shocking News: ಬ್ರೆಜಿಲ್​ನಲ್ಲಿ ಕಪ್ಪು ವರ್ಣೀಯನಿಗೆ ಥಳಿಸಿ, ಚಿತ್ರಹಿಂಸೆ ನೀಡಿ ಕೊಂದ ಪೊಲೀಸರು; ಭುಗಿಲೆದ್ದ ಆಕ್ರೋಶ

| Updated By: ಸುಷ್ಮಾ ಚಕ್ರೆ

Updated on: May 27, 2022 | 1:54 PM

ಆ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಆತ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್ ಪೊಲೀಸರು ಜನರ ಅಕ್ರೋಶಕ್ಕೆ ಗುರಿಯಾಗಿದ್ದಾರೆ

Shocking News: ಬ್ರೆಜಿಲ್​ನಲ್ಲಿ ಕಪ್ಪು ವರ್ಣೀಯನಿಗೆ ಥಳಿಸಿ, ಚಿತ್ರಹಿಂಸೆ ನೀಡಿ ಕೊಂದ ಪೊಲೀಸರು; ಭುಗಿಲೆದ್ದ ಆಕ್ರೋಶ
ಬ್ರೆಜಿಲ್​ನಲ್ಲಿ ಕಪ್ಪು ವರ್ಣೀಯನನ್ನು ಥಳಿಸುತ್ತಿರುವ ಪೊಲೀಸರು
Follow us on

ಬ್ರೆಜಿಲ್: ಮಾನಸಿಕ ಅಸ್ವಸ್ಥನಾಗಿದ್ದ ಕಪ್ಪು ವರ್ಣದ ವ್ಯಕ್ತಿಯನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ, ಆ ಕಾರಿನೊಳಗೆ ಗ್ಯಾಸ್​ ಗ್ರೆನೇಡ್ ಬಿಡುಗಡೆ ಮಾಡಿದ್ದ ಬ್ರೆಜಿಲ್ ಪೊಲೀಸರ (Brazil Police) ಕೃತ್ಯದಿಂದ ಆ ಕಪ್ಪು ವರ್ಣೀಯ ವ್ಯಕ್ತಿ ಸಾವನ್ನಪ್ಪಿದ್ದ. ಈ ಘಟನೆಗೆ ಬ್ರೆಜಿಲಿಯನ್ನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 38 ವರ್ಷದ ಜೆನಿವಾಲ್ಡೊ ಡಿ ಜೀಸಸ್ ಸ್ಯಾಂಟೋಸ್ ಎಂಬುವವರನ್ನು ಬುಧವಾರ ಉಂಬಾಬಾ ನಗರದಲ್ಲಿ ಫೆಡರಲ್ ಹೆದ್ದಾರಿ ಪೊಲೀಸರು ತಡೆದಿದ್ದರು. ಈ ಘಟನೆಯ ವೀಡಿಯೋದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಹೆಲ್ಮೆಟ್ ಧರಿಸಿ ಕಾರಿನ ಡಿಕ್ಕಿಯಲ್ಲಿ ಆತನನ್ನು ಹಾಕಿ ಥಳಿಸುತ್ತಿರುವುದನ್ನು ನೋಡಬಹುದು. ನಂತರ ಕಾರಿನ ಡಿಕ್ಕಿಯನ್ನು ಮುಚ್ಚಲಾಗಿದ್ದು, ಕಾರಿನ ಡಿಕ್ಕಿಯಿಂದ ಹೊಗೆ ಬರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.

ಆ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಆತ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಬ್ರೆಜಿಲ್ ಪೊಲೀಸರು ಜನರ ಅಕ್ರೋಶಕ್ಕೆ ಗುರಿಯಾಗಿದ್ದಾರೆ. ಮೃತಪಟ್ಟ ಸ್ಯಾಂಟೋಸ್​ ಅವರ ಕುಟುಂಬದ ಪ್ರಕಾರ, ಸ್ಯಾಂಟೋಸ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು. ಅದಕ್ಕಾಗಿ ಅವರು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಘಟನೆಗೆ ಸಾಕ್ಷಿಯಾದ ಸ್ಯಾಂಟೋಸ್ ಅವರ ಸೋದರಳಿಯ ಅಲಿಸನ್ ಡಿ ಜೀಸಸ್ ಈ ಕುರಿತು ಮಾಹಿತಿ ನೀಡಿದ್ದು, ಅಶ್ರುವಾಯು ಗ್ರೆನೇಡ್ ಅನ್ನು ಬಿಡುಗಡೆ ಮಾಡುವ ಮೊದಲು ಅವರು ಅಸ್ವಸ್ಥರಾಗಿದ್ದಾರೆ, ಹಾಗೆಲ್ಲ ಮಾಡಬೇಡಿ ಎಂದು ನಾವು ಪೊಲೀಸರಿಗೆ ಎಚ್ಚರಿಕೆ ನೀಡಿದ್ದೆವು. ಆದರೂ ಆತನಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Shocking Video: ಬಾತ್​ರೂಂನೊಳಗೆ ನುಗ್ಗಿ ಟಾಯ್ಲೆಟ್ ಪೇಪರ್ ಸುತ್ತಿಕೊಂಡ ಕಾಳಿಂಗ ಸರ್ಪ; ಶಾಕಿಂಗ್ ವಿಡಿಯೋ ಇಲ್ಲಿದೆ

ಈ ಭಯಾನಕ ಸಾವು ಬ್ರೆಜಿಲ್‌ನಲ್ಲಿ ಆಘಾತವನ್ನು ಉಂಟುಮಾಡಿದೆ. ಬ್ರೆಜಿಲ್​ನಲ್ಲಿ ಮಾರಣಾಂತಿಕ ಪೊಲೀಸ್ ಹಿಂಸಾಚಾರವು ಸಾಮಾನ್ಯವಾಗಿದೆ. ದೇಶದ ಕಪ್ಪು ವರ್ಣದ ಜನಸಂಖ್ಯೆಯ ಮೇಲೆ ಇದು ಬಹಳ ಪರಿಣಾಮ ಬೀರುತ್ತಿದೆ. ಬ್ರೆಜಿಲಿಯನ್ ಫೋರಂ ಆಫ್ ಪಬ್ಲಿಕ್ ಸೆಕ್ಯುರಿಟಿ ಪ್ರಕಾರ, ಪೊಲೀಸರು 2020ರಲ್ಲಿ ಬ್ರೆಜಿಲ್‌ನಲ್ಲಿ 6,416 ಜನರನ್ನು ಕೊಂದಿದ್ದಾರೆ. ಈ ರೀತಿ ಸಾವಿಗೀಡಾದವರಲ್ಲಿ ಶೇ.80ರಷ್ಟು ಕರಿಯರಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:53 pm, Fri, 27 May 22