ಗಾಯಕ ಎಪಿ ಧಿಲ್ಲೋನ್ ಮನೆ ಹೊರಗೆ ಗುಂಡಿನ ದಾಳಿ: ವಾಹನಕ್ಕೆ ಬೆಂಕಿ ಹಚ್ಚುವ, 14 ಬಾರಿ ಗುಂಡು ಹಾರಿಸಿದ ವಿಡಿಯೊ ವೈರಲ್

|

Updated on: Sep 03, 2024 | 3:34 PM

ಜಾಗತಿಕ ತಾರೆಯಾಗಿರುವ ಧಿಲ್ಲೋನ್ ಅವರು ಸೋಮವಾರ ರಾತ್ರಿ ಶೂಟಿಂಗ್ ಘಟನೆಯ ನಂತರ ತಮ್ಮ Instagram ಸ್ಟೋರೀಸ್‌ನಲ್ಲಿ ಸಂದೇಶವನ್ನು ಹಂಚಿಕೊಂಡಿದ್ದು ತಾನು ಮತ್ತು ತನ್ನ ಜತೆಗಿರುವವರು ಸುರಕ್ಷಿತರಾಗಿರುವುದಾಗಿ ಹೇಳಿದ್ದಾರೆ.ಭಾರತ ಸಂಜಾತ ಕೆನಡಾದ ಕಲಾವಿದ ತಮ್ಮ ಅಭಿಮಾನಿಗಳ ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.

ಗಾಯಕ ಎಪಿ ಧಿಲ್ಲೋನ್ ಮನೆ ಹೊರಗೆ ಗುಂಡಿನ ದಾಳಿ: ವಾಹನಕ್ಕೆ ಬೆಂಕಿ ಹಚ್ಚುವ, 14 ಬಾರಿ ಗುಂಡು ಹಾರಿಸಿದ ವಿಡಿಯೊ ವೈರಲ್
Follow us on

ವ್ಯಾಂಕೋವರ್ ಸೆಪ್ಟೆಂಬರ್ 03: ಕೆನಡಾದ (Canada) ವ್ಯಾಂಕೋವರ್‌ನಲ್ಲಿರುವ ಪಂಜಾಬಿ ಗಾಯಕ ಎಪಿ ಧಿಲ್ಲೋನ್ (AP Dhillon) ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದ ಒಂದು ದಿನದ ನಂತರ, ಘಟನೆಯ ಹೊಸ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ವಿಡಿಯೊದಲ್ಲಿ, ಆರೋಪಿಗಳು ಕಪ್ಪು ಟ್ರಕ್ ಮತ್ತು ಸಣ್ಣ ವಾಹನಕ್ಕೆ ಬೆಂಕಿ ಹಚ್ಚುತ್ತಿರುವುದನ್ನು ಕಾಣಬಹುದು. ನಂತರ ಕಾರಿನಲ್ಲಿ ಪರಾರಿಯಾಗುವ ಮೊದಲು ಮನೆಯ ಹೊರಗೆ ಕನಿಷ್ಠ 14 ಬಾರಿ ಗುಂಡು ಹಾರಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ರೋಹಿತ್ ಗೋಡಾರಾ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಪ್ರಕಾರ ಬಿಷ್ಣೋಯ್-ಗೋಡಾರಾ ಗ್ಯಾಂಗ್, ಕೆನಡಾದ ವಿಕ್ಟೋರಿಯಾ ದ್ವೀಪ ಮತ್ತು ಟೊರೊಂಟೊದ ವುಡ್‌ಬ್ರಿಡ್ಜ್‌ನಲ್ಲಿ ಗುಂಡಿನ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.

ಘಟನೆಯ ನಂತರ ಪ್ರತಿಕ್ರಿಯಿಸಿದ ಎಪಿ ಧಿಲ್ಲೋನ್

ಜಾಗತಿಕ ತಾರೆಯಾಗಿರುವ ಧಿಲ್ಲೋನ್ ಅವರು ಸೋಮವಾರ ರಾತ್ರಿ ಶೂಟಿಂಗ್ ಘಟನೆಯ ನಂತರ ತಮ್ಮ Instagram ಸ್ಟೋರೀಸ್‌ನಲ್ಲಿ ಸಂದೇಶವನ್ನು ಹಂಚಿಕೊಂಡಿದ್ದು ತಾನು ಮತ್ತು ತನ್ನ ಜತೆಗಿರುವವರು ಸುರಕ್ಷಿತರಾಗಿರುವುದಾಗಿ ಹೇಳಿದ್ದಾರೆ.ಭಾರತ ಸಂಜಾತ ಕೆನಡಾದ ಕಲಾವಿದ ತಮ್ಮ ಅಭಿಮಾನಿಗಳ ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ.

“ನಾನು ಸುರಕ್ಷಿತವಾಗಿದ್ದೇನೆ. ನನ್ನ ಜನರು ಸುರಕ್ಷಿತವಾಗಿದ್ದಾರೆ. ಸಂಪರ್ಕಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಬೆಂಬಲ ಎಲ್ಲವನ್ನು ಅರ್ಥೈಸುತ್ತದೆ. ಎಲ್ಲರಿಗೂ ಶಾಂತಿ ಮತ್ತು ಪ್ರೀತಿ, ”ಎಂದು ಅವರು ಬರೆದಿದ್ದಾರೆ.

ಎಪಿ ಧಿಲ್ಲೋನ್ ಎಂದೇ ಖ್ಯಾತರಾಗಿರುವ 31 ವರ್ಷದ ಸಂಗೀತಗಾರನ ನಿಜವಾದ ಹೆಸರು ಅಮೃತಪಾಲ್ ಸಿಂಗ್ ಧಿಲ್ಲೋನ್. ಇವರು ವ್ಯಾಪಾರ ಆಡಳಿತ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಾಗಿ 2015 ರಲ್ಲಿ ಗುರುದಾಸ್‌ಪುರದಿಂದ ಕೆನಡಾಕ್ಕೆ ತೆರಳಿದ್ದರು.

ಸಲ್ಮಾನ್ ಖಾನ್ ನೊಂದಿಗೆ ನಂಟಿರುವುದೇ ಗುಂಡಿನ ದಾಳಿಗೆ ಕಾರಣ ?

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ “ಓಲ್ಡ್ ಮನಿ” ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ಧಿಲ್ಲೋನ್ ಕಾಣಿಸಿಕೊಂಡ ವಾರಗಳ ನಂತರ ಈ ಘಟನೆ ನಡೆದಿದೆ. ಏಪ್ರಿಲ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಎಂದು ಗುರುತಿಸಲಾದ ಇಬ್ಬರು ದಾಳಿಕೋರರು ಐದು ಸುತ್ತು ಗುಂಡು ಹಾರಿಸಿದ್ದರು. ಕೆನಡಾದಲ್ಲಿ ನೆಲೆಸಿರುವ ಬಿಷ್ಣೋಯ್ ಸಹೋದರ ಅನ್ಮೋಲ್ ಘಟನೆಯ ಹೊಣೆ ಹೊತ್ತುಕೊಂಡಿದ್ದರು.

ಇದನ್ನೂ ಓದಿ:ಬ್ರೂನಿ, ಸಿಂಗಾಪುರ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ

ಮುಂಬೈ ಪೊಲೀಸರು ತನ್ನ ಆರೋಪಪಟ್ಟಿಯಲ್ಲಿ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಒಂಬತ್ತು ಜನರನ್ನು ಹೆಸರಿಸಿದ್ದರು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ