AP Dhillon: ಕೆನಡಾದಲ್ಲಿ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಮನೆಯ ಹೊರಗೆ ಗುಂಡಿನ ದಾಳಿ: ವರದಿ

ವರದಿಯ ಪ್ರಕಾರ, ನಗರದ ವಿಕ್ಟೋರಿಯಾ ದ್ವೀಪ ಪ್ರದೇಶದ ಧಿಲ್ಲೋನ್ ಅವರ ಮನೆಯ ಬಳಿ ಗುಂಡಿನ ಸದ್ದು ಕೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಪ್ರಕಾರ ಬಿಷ್ಣೋಯ್-ಗೋದಾರ ಗ್ಯಾಂಗ್ ಕೆನಡಾದ ವಿಕ್ಟೋರಿಯಾ ದ್ವೀಪ ಮತ್ತು ಟೊರೊಂಟೊದ ವುಡ್‌ಬ್ರಿಡ್ಜ್‌ನಲ್ಲಿ ಗುಂಡಿನ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.

AP Dhillon: ಕೆನಡಾದಲ್ಲಿ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಮನೆಯ ಹೊರಗೆ ಗುಂಡಿನ ದಾಳಿ: ವರದಿ
ಎಪಿ ಧಿಲ್ಲೋನ್
Follow us
ರಶ್ಮಿ ಕಲ್ಲಕಟ್ಟ
|

Updated on:Sep 02, 2024 | 6:23 PM

ವ್ಯಾಂಕೋವರ್‌ ಸೆಪ್ಟೆಂಬರ್ 02: ಕೆನಡಾದ (Canada) ವ್ಯಾಂಕೋವರ್‌ನಲ್ಲಿರುವ ಪಂಜಾಬಿ ಗಾಯಕ ಎಪಿ ಧಿಲ್ಲೋನ್ (AP Dhillon) ಅವರ ಮನೆಯ ಹೊರಗೆ ಸೋಮವಾರ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಮತ್ತು ಗ್ಯಾಂಗ್​​ಸ್ಟರ್  ರೋಹಿತ್ ಗೋಡಾರಾ  ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.  ವರದಿಯ ಪ್ರಕಾರ, ನಗರದ ವಿಕ್ಟೋರಿಯಾ ದ್ವೀಪ ಪ್ರದೇಶದ ಧಿಲ್ಲೋನ್ ಅವರ ಮನೆಯ ಬಳಿ ಗುಂಡಿನ ಸದ್ದು ಕೇಳಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಪ್ರಕಾರ ಬಿಷ್ಣೋಯ್-ಗೋದಾರ ಗ್ಯಾಂಗ್ ಕೆನಡಾದ ವಿಕ್ಟೋರಿಯಾ ದ್ವೀಪ ಮತ್ತು ಟೊರೊಂಟೊದ ವುಡ್‌ಬ್ರಿಡ್ಜ್‌ನಲ್ಲಿ ಗುಂಡಿನ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ.

ನಟ ಸಲ್ಮಾನ್ ಖಾನ್‌ ಜತೆ ಧಿಲ್ಲೋನ್ ಸಂಪರ್ಕ ಹೊಂದಿದ್ದಾರೆ ಎಂದು ಗ್ಯಾಂಗ್​​ಸ್ಟರ್​​ಗಳು “ನೀವು ನಿಮ್ಮ ಮಿತಿಯಲ್ಲಿ ಇರಿ, ಇಲ್ಲದಿದ್ದರೆ ನಾಯಿಯಂತೆ ಸಾಯಿಸಲಾಗುತ್ತದೆ ” ಎಂದು ಎಚ್ಚರಿಸಿದ್ದಾರೆ ಎಂದು ವರದಿ ಹೇಳಿದೆ.

ಇತ್ತೀಚೆಗೆ, ಸಲ್ಮಾನ್ ಖಾನ್ ನಟ ಸಂಜಯ್ ದತ್ ಜೊತೆಗೆ ಧಿಲ್ಲೋನ್ ಅವರ ಹೊಸ ಟ್ರ್ಯಾಕ್ ‘ಓಲ್ಡ್ ಮನಿ’ ನಲ್ಲಿ ಕಾಣಿಸಿಕೊಂಡರು. ಆಕ್ಷನ್ ಫಿಲ್ಮ್‌ನಂತೆ ಚಿತ್ರೀಕರಿಸಲಾದ ವಿಡಿಯೊ ಹಾಡಿನಲ್ಲಿ, ಪಂಜಾಬಿ ಗಾಯಕ ಮತ್ತು ಅವನ ಸ್ನೇಹಿತರು ಈ ಬಾರಿ ಅವರನ್ನು ರಕ್ಷಿಸಲು ಬರಬಾರದು ಎಂದು ಖಾನ್‌ನ ಭಾಯ್ ಅವರಿಗೆ ಎಚ್ಚರಿಕೆ ನೀಡಿದಾಗ ಮಿಷನ್‌ಗೆ ಹೊರಟಿರುವುದನ್ನು ತೋರಿಸಿದೆ.  ವಿಡಿಯೊದಲ್ಲಿ, ಸಂಜಯ್ ದತ್ ಧಿಲ್ಲೋನ್ ಅವರಿಗೆ ಬೆದರಿಕೆ ಹಾಕಲು ಡಯಲ್ ಮಾಡುತ್ತಾರೆ ಆದರೆ ಅವರು ಸಲ್ಮಾನ್ ಖಾನ್ ಅವರ ಆಶ್ರಿತರು ಎಂದು ತಿಳಿದಾಗ ಗಾಯಕನನ್ನು ಹೋಗಲು ಬಿಡುತ್ತಾರೆ.

ಏಪ್ರಿಲ್ 14: ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ

ಈ ವರ್ಷದ ಏಪ್ರಿಲ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಐದು ಸುತ್ತು ಗುಂಡು ಹಾರಿಸಿದ್ದರು. ಮುಂಬೈ ಪೊಲೀಸರು ತನ್ನ ಆರೋಪಪಟ್ಟಿಯಲ್ಲಿ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಒಂಬತ್ತು ಜನರನ್ನು ಹೆಸರಿಸಿದ್ದರು. ಕೆನಡಾದಲ್ಲಿ ನೆಲೆಸಿರುವ ಬಿಷ್ಣೋಯ್ ಸಹೋದರ ಅನ್ಮೋಲ್ ಘಟನೆಯ ಹೊಣೆ ಹೊತ್ತುಕೊಂಡಿದ್ದ.

ಇದನ್ನೂ ಓದಿ: ಅಮೆರಿಕ ಚುನಾವಣೆಯಲ್ಲಿ ಜೆಡಿ ವ್ಯಾನ್ಸ್​​ಗೆ ಸಹಕಾರಿಯಾಗಬಹುದೇ ಪತ್ನಿ ಉಷಾ ಚಿಲುಕುರಿ ಅವರ ಭಾರತೀಯ ಮೂಲ?

ಆಗಸ್ಟ್ 13 ರಂದು, ಮುಂಬೈ ಪೊಲೀಸರು ಫೈರಿಂಗ್‌ನಲ್ಲಿ ಭಾಗಿಯಾಗಿರುವ ಆಪಾದಿತ ಶೂಟರ್‌ಗಳಲ್ಲಿ ಒಬ್ಬರಾದ ವಿಕ್ಕಿ ಗುಪ್ತಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದ್ದು ಅವ ಮತ್ತು ಸಹಚರರು ಬಾಲಿವುಡ್ ನಟನನ್ನು ಕೊಲ್ಲುವ ಉದ್ದೇಶ ಹೊಂದಿದ್ದರು ಎಂದಿದ್ದಾರೆ. ಗುಪ್ತಾ ಮತ್ತು ಸಹ ಆರೋಪಿ ಸಾಗರ್ ಪಾಲ್ ಮೋಟಾರ್ ಸೈಕಲ್‌ನಲ್ಲಿ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ ಹೋಗಿ “ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಉದ್ದೇಶದಿಂದ ನೇರವಾಗಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Mon, 2 September 24