ನವದೆಹಲಿ: ಇಂದು ಮಧ್ಯಾಹ್ನ ನಡೆದ ಗುಂಡಿನ ದಾಳಿಯಲ್ಲಿ ಸ್ಲೋವಾಕಿಯಾದ (Slovakia) ಪ್ರಧಾನಿ ರಾಬರ್ಟ್ ಫಿಕೊ (Robert Fico) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಕ್ಯಾಬಿನೆಟ್ ಸದಸ್ಯರ ಜೊತೆ ಸಭೆ ನಡೆಸಲು ಬಂದಿದ್ದ ವೇಳೆ ಪ್ರಧಾನಿ ಮೇಲೆ ಈ ದಾಳಿ ನಡೆಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ಪೊಲೀಸರು ಗುಂಡಿನ ದಾಳಿ ನಡೆದ ಸ್ಥಳವನ್ನು ಸೀಲ್ ಮಾಡಿದ್ದಾರೆ.
ಸ್ಲೋವಾಕಿಯನ್ ರಾಜಧಾನಿಯ ಈಶಾನ್ಯಕ್ಕೆ ಸುಮಾರು 150 ಕಿಲೋ ಮೀಟರ್ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದ ಸಂಸ್ಕೃತಿಯ ಹೌಸ್ ಹೊರಗೆ 4 ಬಾರಿ ಗುಂಡುಗಳನ್ನು ಹಾರಿಸಲಾಗಿದೆ. ಇದರಿಂದ 59 ವರ್ಷದ ರಾಬರ್ಟ್ ಫಿಕೊ ಅವರ ಹೊಟ್ಟೆಗೆ ಗುಂಡೇಟಿನಿಂದ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
SLOVAKIA
Prime Minister Robert Fico has been shot in an assassination attempt.
Fico recently said that he considers himself to be Catholic. pic.twitter.com/3wJyXzMdFp
— Catholic Arena (@CatholicArena) May 15, 2024
ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆ ಬಿಜೆಪಿಯಿಂದ ಮೋದಿ ಬದಲು ಚರ್ಚೆಗೆ ಇಳಿಯಲಿರುವ ಅಭಿನವ್ ಪ್ರಕಾಶ್ ಯಾರು?
ಹ್ಯಾಂಡ್ಲೋವಾದಲ್ಲಿ 59 ವರ್ಷದ ಪ್ರಧಾನಿಗೆ ಗುಂಡು ಹಾರಿಸಲಾಗಿದೆ ಎಂಬ ಮಾಹಿತಿ ಬಂದ ನಂತರ ಅವರಿಗಾಗಿ ಹೆಲಿಕಾಪ್ಟರ್ ಕಳುಹಿಸಲಾಗಿದೆ ಎಂದು ತುರ್ತು ಸೇವೆಗಳು ತಿಳಿಸಿವೆ. ಫಿಕೊ ಅವರನ್ನು ಹ್ಯಾಂಡ್ಲೋವಾ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಜ್ಞೆ ಇತ್ತು. ಬುಲೆಟ್ನಿಂದಾದ ಗಾಯಗಳಿಗೆ ಚಿಕಿತ್ಸೆ ನೀಡಲಾಯಿತು ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
⚡️⚡️⚡️ The first minutes after the attack on Robert #Fico – the prime minister’s security guards evacuate him to his motorcade while eyewitnesses hold the shooter
According to preliminary information from Slovak media, Fico was shot multiple times. One to the abdomen, one to the… pic.twitter.com/vhcYPPjjlg
— NEXTA (@nexta_tv) May 15, 2024
ಸ್ಲೋವಾಕಿಯಾದಲ್ಲಿ ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಗಳಿಗೆ ಕೇವಲ 3 ವಾರಗಳು ಬಾಕಿ ಇವೆ. ಈ ವೇಳೆ ಈ ಗುಂಡಿನ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜನರ ಕಷ್ಟ ಕೇಳುವುದಿಲ್ಲ, ಏನೇನೋ ಮಾತನಾಡುತ್ತಾರೆ; ಅಮೇಥಿಯಲ್ಲಿ ಪ್ರಿಯಾಂಕಾ ಗಾಂಧಿ ಟೀಕೆ
“ಇಂದು ಹ್ಯಾಂಡ್ಲೋವಾದಲ್ಲಿ ಸರ್ಕಾರದ ಸಭೆಯ ನಂತರ, ಸ್ಲೋವಾಕ್ ಗಣರಾಜ್ಯದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಹತ್ಯೆಯ ಯತ್ನ ನಡೆದಿದೆ” ಎಂದು ಸರ್ಕಾರವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಪ್ರಸ್ತುತ ಅವರನ್ನು ಹೆಲಿಕಾಪ್ಟರ್ ಮೂಲಕ ಬನ್ಸ್ಕಾ ಬೈಸ್ಟ್ರಿಕಾಗೆ ಮಾರಣಾಂತಿಕ ಸ್ಥಿತಿಯಲ್ಲಿ ಸಾಗಿಸಲಾಗುತ್ತಿದೆ. ಏಕೆಂದರೆ ಬ್ರಾಟಿಸ್ಲಾವಾಕ್ಕೆ ಹೋಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ” ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ