ಪ್ರವಾಸಿ ಕಳೆದುಕೊಂಡಿದ್ದ ಗಡಿಯಾರ ವಾಪಸ್ ಮಾಡಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ
Dubai Tourist Police: ಬಾಲಕನ ನಡವಳಿಕೆಯು ಯುಎಇಯಲ್ಲಿ ಪ್ರಚಲಿತದಲ್ಲಿರುವ ಉನ್ನತ ನೈತಿಕ ಮಾನದಂಡಗಳು ಮತ್ತು ಭದ್ರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬ್ರಿಗೇಡಿಯರ್ ಅಲ್ ಜಲ್ಲಾಫ್ ಉಲ್ಲೇಖಿಸಿದ್ದಾರೆ. ಯೂನಿಸ್ ಅವರ ಪ್ರಾಮಾಣಿಕತೆಯ ಉದಾಹರಣೆಯಿಂದ ಸ್ಫೂರ್ತಿ ಪಡೆಯಲು ಅವರು ಇತರ ಜನರನ್ನು ಪ್ರೋತ್ಸಾಹಿಸಿದ್ದಾರೆ.
ದುಬೈನಲ್ಲಿ ನೆಲೆಸಿರುವ ಭಾರತೀಯ ಹುಡುಗನೊಬ್ಬ (Indian boy) ಪ್ರವಾಸಿಗರೊಬ್ಬರು ಕಳೆದುಕೊಂಡಿದ್ದ ಗಡಿಯಾರವನ್ನು ಅಧಿಕಾರಿಗಳಿಗೆ ಹಿಂದಿರುಗಿಸಿದ್ದಾನೆ. ಆತನ ಬಾಲ ಪ್ರಾಮಾಣಿಕತೆ ಕಂಡು (Honesty) ನಂತರ ನಗರದ ಪೊಲೀಸರು ಪ್ರಶಂಸಿಸಿದ್ದಾರೆ ಎಂದು ದುಬೈ ಪೊಲೀಸ್ (Dubai Police) ವೆಬ್‌ಸೈಟ್‌ನಲ್ಲಿ ವರದಿಯಾಗಿದೆ. ಮುಹಮ್ಮದ್ ಅಯಾನ್ ಯೂನಿಸ್ ತನ್ನ ತಂದೆಯೊಂದಿಗೆ ಪ್ರವಾಸಿ ಪ್ರದೇಶದಲ್ಲಿ ತಿರುಗಾಡುತ್ತಿದ್ದಾಗ ಅನಾಥವಾಗಿ ಬಿದ್ದಿದ್ದ ಗಡಿಯಾರವನ್ನು ನೊಡಿದ್ದಾನೆ. ತಕ್ಷಣ ಅದನ್ನು ಕೊಂಡೊಯ್ದು ಪೊಲೀಸರಿಗೆ ಒಪ್ಪಿಸಿದ್ದಾನೆ. ತನ್ಮೂಲಕ ಅದು ಅದರ ನಿಜವಾದ ಮಾಲೀಕರಿಗೆ ಮತ್ತೆ ದಕ್ಕಿದೆ. ದುಬೈ ಪ್ರವಾಸಿ ಪೊಲೀಸ್ ಇಲಾಖೆಯು ಬಾಲಕ ಯೂನಿಸ್ನ ಪ್ರಾಮಾಣಿಕತೆಗೆ ಪ್ರಮಾಣಪತ್ರವನ್ನು (certificate for honesty) ನೀಡಿ ಗೌರವಿಸಿದೆ. ಪೊಲೀಸ್ ಇಲಾಖೆಯು ತನ್ನ ಅಧಿಕೃತ ಎಕ್ಸ್ ಖಾತೆ ಹ್ಯಾಂಡಲ್‌ನಿಂದ ಹುಡುಗನ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
“ಪ್ರವಾಸಿಗರು ಕಳೆದುಕೊಂಡಿದ್ದ ಗಡಿಯಾರವನ್ನು ಬಾಲಕ ಹಿಂದಿರುಗಿಸಿದ್ದಾನೆ. ಆತನ ಪ್ರಾಮಾಣಿಕತೆಗಾಗಿ ದುಬೈ ಪೊಲೀಸರು ಮಗುವನ್ನು ಗೌರವಿಸಿದ್ದಾರೆ” ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಪ್ರವಾಸಿ ಪೊಲೀಸ್ ಇಲಾಖೆಯ ನಿರ್ದೇಶಕ ಬ್ರಿಗೇಡಿಯರ್ ಖಾಲ್ಫಾನ್ ಒಬೈದ್ ಅಲ್ ಜಲ್ಲಾಫ್ ಅವರ ಡೆಪ್ಯುಟಿ ಲೆಫ್ಟಿನೆಂಟ್ ಕರ್ನಲ್ ಮುಹಮ್ಮದ್ ಅಬ್ದುಲ್ ರಹಮಾನ್ ಮತ್ತು ಟೂರಿಸ್ಟ್ ಹ್ಯಾಪಿನೆಸ್ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಶಹಾಬ್ ಅಲ್ ಸಾದಿ ಅವರು ಚಿತ್ರದಲ್ಲಿದ್ದಾರೆ. ಅವರು ಯೂನಿಸ್‌ಗೆ ಪ್ರಮಾಣಪತ್ರ ನೀಡುತ್ತಿರುವುದು ಕಂಡುಬಂದಿದೆ.
ಮತ್ತಷ್ಟು ಓದಿ: ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ
ಈ ಗಡಿಯಾರವು ಪ್ರವಾಸಿಗರಿಗೆ ಸೇರಿದ್ದು ಎಂದು ದುಬೈ ಪೊಲೀಸರು ಪರಿಶೀಲಿಸಿದ್ದಾರೆ, ಸಂತ್ರಸ್ತ ಪ್ರವಾಸಿ ತಾವು ವಾಚ್ ಕಳೆದುಕೊಂಡಿರುವ ಬಗ್ಗೆ ಈ ಹಿಂದೆ ವರದಿ ಮಾಡಿದ್ದರು. ಆದರೆ ನಂತರ ಅವರ ತಾಯ್ನಾಡಿಗೆ ಮರಳಿದ್ದರು.ಇದೀಗ ನಮ್ಮ ಪೊಲೀಸರು ಆ ಪ್ರವಾಸಿಗರನ್ನು ಸಂಪರ್ಕಿಸಿದ್ದು, ಗಡಿಯಾರವನ್ನು ಯಶಸ್ವಿಯಾಗಿ ಹಿಂದಿರುಗಿಸಲಾಗಿದೆ. ಅದರಿ ಟೂರಿಸ್ಟ್ “ದುಬೈನಲ್ಲಿನ ಉನ್ನತ ಮಟ್ಟದ ಭದ್ರತೆ ಮತ್ತು ಸಮಗ್ರತೆಯ ಬಗ್ಗೆ ಅಪಾರ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
#News | Dubai Police Honours Child for Honesty After Returning Tourist’s Lost Watch
Details:https://t.co/6dFnBky55r#YourSecurityOurHappiness#SmartSecureTogether pic.twitter.com/bVccqxabP5
— Dubai Policeشرطة دبي (@DubaiPoliceHQ) May 12, 2024
ಬಾಲಕನ ನಡವಳಿಕೆಯು ಯುಎಇಯಲ್ಲಿ ಪ್ರಚಲಿತದಲ್ಲಿರುವ ಉನ್ನತ ನೈತಿಕ ಮಾನದಂಡಗಳು ಮತ್ತು ಭದ್ರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬ್ರಿಗೇಡಿಯರ್ ಅಲ್ ಜಲ್ಲಾಫ್ ಉಲ್ಲೇಖಿಸಿದ್ದಾರೆ. ಯೂನಿಸ್ ಅವರ ಪ್ರಾಮಾಣಿಕತೆಯ ಉದಾಹರಣೆಯಿಂದ ಸ್ಫೂರ್ತಿ ಪಡೆಯಲು ಅವರು ಇತರ ಜನರನ್ನು ಪ್ರೋತ್ಸಾಹಿಸಿದ್ದಾರೆ. ಕಳೆದುಹೋದ ವಸ್ತುಗಳನ್ನು ಹಿಂದಿರುಗಿಸಲು ಸ್ಮಾರ್ಟ್ ಪೊಲೀಸ್ ಠಾಣೆಗಳಲ್ಲಿ (Smart Police Stations -SPS- ಎಸ್‌ಪಿಎಸ್) ಸುಲಭವಾಗಿ ಲಭ್ಯವಿರುವ ಸ್ಮಾರ್ಟ್ ಕಳೆದುಹೋದ ಮತ್ತು ಪತ್ತೆಯಾದ ವಸ್ತುಗಳ ಮಾಹಿತಿ ಸೇವೆಗಳನ್ನು ಬಳಸಿಕೊಳ್ಳುವಂತೆ ಅವರು ಸೂಚಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ