ಕೋಸ್ಟರಿಕಾ: 6 ಜನರಿದ್ದ ವಿಮಾನ ಪತನ, ಪ್ರಯಾಣಿಕರಿಗಾಗಿ ಶೋಧ

|

Updated on: Nov 26, 2024 | 9:17 AM

ಮಧ್ಯ ಅಮೆರಿಕದ ಕೋಸ್ಟರಿಕಾದಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದೆ. ಸದ್ಯ ವಿಮಾನದಲ್ಲಿದ್ದವರ ಗುರುತು ಪತ್ತೆಯಾಗಿಲ್ಲ. ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್‌ನ ಆಗ್ನೇಯಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ನವೆಂಬರ್ 25 ರಂದು ಮಧ್ಯಾಹ್ನದ ನಂತರ ಮೌಂಟ್ ಪಿಕೊ ಬ್ಲಾಂಕೊ ಬಳಿ ಅಪ್ಪಳಿಸಿತು.

ಕೋಸ್ಟರಿಕಾ: 6 ಜನರಿದ್ದ ವಿಮಾನ ಪತನ, ಪ್ರಯಾಣಿಕರಿಗಾಗಿ ಶೋಧ
ವಿಮಾನ-ಸಾಂದರ್ಭಿಕ ಚಿತ್ರ
Follow us on

ಮಧ್ಯ ಅಮೆರಿಕದ ಕೋಸ್ಟರಿಕಾದಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನಗೊಂಡಿದೆ. ಸದ್ಯ ವಿಮಾನದಲ್ಲಿದ್ದವರ ಗುರುತು ಪತ್ತೆಯಾಗಿಲ್ಲ. ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್‌ನ ಆಗ್ನೇಯಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ನವೆಂಬರ್ 25 ರಂದು ಮಧ್ಯಾಹ್ನದ ನಂತರ ಮೌಂಟ್ ಪಿಕೊ ಬ್ಲಾಂಕೊ ಬಳಿ ಅಪ್ಪಳಿಸಿತು.

ಶೋಧ ಮತ್ತು ರಕ್ಷಣಾ ಅಧಿಕಾರಿಗಳು ಬೆಟ್ಟದ ಮೇಲೆ ಅವಶೇಷಗಳನ್ನು ಕಂಡುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವನ್ನು ಪರ್ವತದ ತುದಿಯಲ್ಲಿ ಗುರುತಿಸಲಾಗಿದೆ. ಕೋಸ್ಟರಿಕಾದ ಉತ್ತರ ಕೆರಿಬಿಯನ್ ಕರಾವಳಿಯಲ್ಲಿರುವ ಟೋರ್ಟುಗುರೊದಿಂದ ವಿಮಾನವು ಟೇಕ್ ಆಫ್ ಆಗಿದ್ದು ಸ್ಯಾನ್ ಜೋಸ್‌ಗೆ ಹೋಗುತ್ತಿತ್ತು ಎಂದು ವರದಿಯಾಗಿದೆ.

ನಾಗರಿಕ ವಿಮಾನಯಾನ ಉಪನಿರ್ದೇಶಕ ಲೂಯಿಸ್ ಮಿರಾಂಡಾ ಕೂಡ ಇದನ್ನು ಖಚಿತಪಡಿಸಿದ್ದಾರೆ. ಆದರೆ ಪ್ರಯಾಣಿಕರ ಸ್ಥಿತಿ ಅಥವಾ ಅವರ ಗುರುತಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಂದಿಲ್ಲ. ಈ ವಿಚಾರದಲ್ಲಿ ಕೋಸ್ಟರಿಕಾದ ರೆಡ್‌ಕ್ರಾಸ್ ಸಂಸ್ಥೆಯು ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಮಾನ ಪತ್ತೆಯಾಗಿದೆ ಎಂದು ತಿಳಿಸಿದೆ.

ಮತ್ತಷ್ಟು ಓದಿ: ಬ್ರೆಜಿಲ್ ವಿಮಾನ ಪತನ : ಜನವಸತಿ ಪ್ರದೇಶದಲ್ಲೇ ಅಪಘಾತ, 62 ಸಾವು

ಸೆಸ್ನಾ 206 8.6 ಮೀಟರ್ ಉದ್ದ ಮತ್ತು 11 ಮೀಟರ್ ರೆಕ್ಕೆಗಳನ್ನು ಹೊಂದಿರುವ ಲಘು ವಿಮಾನವಾಗಿದೆ ಎಂದು ಹೇಳಲಾಗುತ್ತದೆ.
ಇದನ್ನು ಸಾಮಾನ್ಯವಾಗಿ ಕಡಿಮೆ ದೂರದ ಪ್ರಯಾಣಕ್ಕೆ ಬಳಸಲಾಗುತ್ತದೆ.

ನೇಪಾಳ ವಿಮಾನ ಅಪಘಾತದಲ್ಲಿ 18 ಮಂದಿ ಸಾವು
ಇತ್ತೀಚೆಗೆ, ನೇಪಾಳದ ರಾಜಧಾನಿಯಲ್ಲಿ ದೊಡ್ಡ ವಿಮಾನ ಅಪಘಾತ ನಡೆದಿತ್ತು. ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವ ವೇಳೆ ವಿಮಾನ ಪತನಗೊಂಡಿದೆ. ಈ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ಹೋಗುತ್ತಿತ್ತು. ಈ ಸೌರ್ಯ ಏರ್‌ಲೈನ್ಸ್ ವಿಮಾನದಲ್ಲಿ 19 ಮಂದಿ ಇದ್ದರು. ಇದರಲ್ಲಿ 17 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸೇರಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ