ಬ್ರೆಜಿಲ್ ವಿಮಾನ ಪತನ : ಜನವಸತಿ ಪ್ರದೇಶದಲ್ಲೇ ಅಪಘಾತ, 62 ಸಾವು

ಬ್ರೆಜಿಲ್​​ನ ಸಾವೊ ಪಾಲೊ ನಗರದ ಜನವಸತಿ ಪ್ರದೇಶದಲ್ಲೇ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ 62 ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಸಾವೊ ಪಾಲೊದ ರಾಜ್ಯ ಅಗ್ನಿಶಾಮಕ ದಳದ ಏಳು ತಂಡ ತೆರಳಿ ಬೆಂಕಿ ನಂದಿಸಿದೆ.

ಬ್ರೆಜಿಲ್ ವಿಮಾನ ಪತನ : ಜನವಸತಿ ಪ್ರದೇಶದಲ್ಲೇ ಅಪಘಾತ, 62 ಸಾವು
ವಿಮಾನ ಅಪಘಾತ
Follow us
ವಿವೇಕ ಬಿರಾದಾರ
|

Updated on:Aug 10, 2024 | 9:16 AM

ಬ್ರೆಜಿಲ್​​ನಲ್ಲಿ (Brezil) ಭಾರಿ ವಿಮಾನ ಅಪಘಾತ (Plane crash) ಸಂಭವಿಸಿದ್ದು ಅದರಲ್ಲಿದ್ದ 62 ಜನರೆಲ್ಲರೂ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಏರ್​​ಲೈನ್​ ವೊಪಾಸ್​ ಲಿನ್ಹಾಸ್​ ಏರಿಯಾಸ್​ ನಿರ್ವಹಿಸುತ್ತಿದ್ದ ATR-72 ಟರ್ಬೊಪ್ರೊಪ್​ ವಿಮಾನವು ಪರಾನಾ ರಾಜ್ಯದ ಕ್ಯಾಸ್ಕಾವೆಲ್​ನಿಂದ ಸಾವೊ ಪಾಲೊದಲ್ಲಿನ ಗೌರುಲ್ಹೋಸ್​ಗೆ ತೆರಳುತ್ತಿತ್ತು. ಆದರೆ, ಮಾರ್ಗ ಮಧ್ಯೆ ಸಾವೊ ಪಾಲೊ ನಗರದ ಜನವಸತಿ ಪ್ರದೇಶದಲ್ಲೇ ಪತನಗೊಂಡಿದೆ. ಅದರಲ್ಲಿದ್ದ 62 ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಸಾವೊ ಪಾಲೊದ ರಾಜ್ಯ ಅಗ್ನಿಶಾಮಕ ದಳದ ಏಳು ತಂಡ ತೆರಳಿ ಬೆಂಕಿ ನಂದಿಸಿದೆ. 58 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ದು ಸಾವೊ ಪಾಲೊದ ಗೌರುಲ್ಹೋಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ. ಎಂದು ಏರಲೈನ್​ ವೊಪಾಸ್​ ತಿಳಿಸಿದೆ. ಆದರೆ, ಅಪಘಾತಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

ಸಮೀಪದ ಕಾಂಡೋಮಿನಿಯಂ ಕಾಂಪ್ಲೆಕ್ಸ್‌ನಲ್ಲಿರುವ ಒಂದು ಮನೆಗೆ ಮಾತ್ರ ಹಾನಿಯಾಗಿದೆ. ನಿವಾಸಿಗಳಿಗೆ ಯಾವುದೆ ಗಾಯವಾಗಿಲ್ಲ. ವಿಮಾನ ಅಪಘಾತದ ದೃಶ್ಯ ಸ್ಥಳೀಯರ ಮೊಬೈಲ್​ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಮಾನವು ಆಕಾದಲ್ಲಿ ತಿರುಗುತ್ತ ನೆಲಕ್ಕೆ ಅಪ್ಪಳಿಸಿದೆ. ವಿಮಾನ ಭೂಮಿಗೆ ಬಿದ್ದ ಕೂಡಲೆ ಹೊತ್ತಿ ಉರಿದಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:49 am, Sat, 10 August 24

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್