ಮಕ್ಕಳನ್ನು ಹೆರಲು ದಕ್ಷಿಣ ಕೊರಿಯಾ ಮಹಿಳೆಯರು ನಿರಾಕರಿಸುತ್ತಿದ್ದು, ಜನ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದ್ದು, ಸರ್ಕಾರ ಕಂಗಾಲಾಗಿದೆ.
ದಕ್ಷಿಣ ಕೊರಿಯಾದ ಮಹಿಳೆಯರಿಗೆ ಮಕ್ಕಳನ್ನು ಹೊಂದಲು ಮನವೊಲಿಸಲು ಒಂದು ವರ್ಷಗಳಿಗೂ ಹೆಚ್ಚು ಕಾಲ ಪ್ರಯತ್ನಿಸಿ ಸೋತಿದ್ದಾರೆ. ದಕ್ಷಿಣ ಕೊರಿಯಾವು ತಂತ್ರಜ್ಞಾನದ ವಿಷಯದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದರೂ, ವಯಸ್ಸಾದ ಜನಸಂಖ್ಯೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. 2020 ರಲ್ಲಿ, ಈ ದೇಶದಲ್ಲಿ ಜನನಗಳಿಗಿಂತ ಹೆಚ್ಚು ಸಾವುಗಳು ಸಂಭವಿಸಿವೆ. ಅಂದಿನಿಂದ ಅಲ್ಲಿನ ಸರ್ಕಾರ ಎಚ್ಚೆತ್ತುಕೊಂಡಿದೆ. ಆದರೆ ಮಹಿಳೆಯರನ್ನು ಮಕ್ಕಳನ್ನು ಹೆರುವ ಯಂತ್ರದಂತೆ ನೋಡಲಾಗುತ್ತಿದೆ ಎಂಬುದು ಕಳೆದ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಕೂಗಾಗಿದೆ.
2020ರಲ್ಲಿ 275,800 ಮಕ್ಕಳು ಜನಿಸಿದ್ದರೆ, 307,764 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಫಲವತ್ತತೆ ದರವು ಕಡಿಮೆ ಇದೆ.
2015 ಮತ್ತು 2019 ರ ನಡುವೆ ಸುಮಾರು 1 ಮಿಲಿಯನ್ ಜನರು ವಿವಾಹವಾಗಿದ್ದಾರೆ. ಈ ದಂಪತಿಗಳಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ದಂಪತಿಗೆ ಮಕ್ಕಳಿಲ್ಲ.
ಸಮೀಕ್ಷೆಯೊಂದರಲ್ಲಿ ಮಕ್ಕಳ ಶಿಕ್ಷಣದ ವೆಚ್ಚವನ್ನು ತಿಳಿಯಲು ಪ್ರಯತ್ನಿಸಲಾಯಿತು. ಅದರ ಅಂಕಿಅಂಶಗಳ ಪ್ರಕಾರ, ಶಿಕ್ಷಣದ ಮೊದಲ 6 ವರ್ಷಗಳ ಅವಧಿಯಲ್ಲಿ ಮಾತ್ರ, ಮಗುವಿಗೆ ಸುಮಾರು 61.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತದೆ. ಈ ಹಣವನ್ನು ಸಂಗ್ರಹಿಸುವುದು ಅಷ್ಟು ಸುಲಭದ ಮಾತಲ್ಲ, ವೆಚ್ಚವೂ ತುಂಬಾ ಹೆಚ್ಚಾಗಿದೆ. ಹೀಗಾಗಿ ಮಕ್ಕಳ ವೆಚ್ಚವನ್ನು ಭರಿಸುತ್ತಾ ಮನೆಯನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ ಹೀಗಾಗಿ ಮಕ್ಕಳಾಗದಂತೆ ಎಚ್ಚರವಹಿಸುತ್ತಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಓದಿ: 800 ಕೋಟಿ ದಾಟಿದ ವಿಶ್ವ ಜನಸಂಖ್ಯೆ, ಜಾಗತಿಕ ಜನಸಂಖ್ಯೆಗೆ ಭಾರತದ ಕೊಡುಗೆ 17.7 ಕೋಟಿ
ದುಡಿಯುವ ಮಹಿಳೆಯರು ಮನೆಯನ್ನು ನೋಡಿಕೊಳ್ಳುವುದರ ಜೊತೆಗೆ ಹೊರಗಿನ ಕೆಲಸವನ್ನೂ ಮಾಡಬೇಕಾಗಿದೆ. ಇದರ ನಡುವಿನ ಸಮತೋಲನವು ಸಾಮಾನ್ಯವಾಗಿ ತುಂಬಾ ಕಷ್ಟಕರವಾಗುತ್ತದೆ, ತಮ್ಮ ತಾಯಿಯ ಪರಿಸ್ಥಿತಿಯನ್ನು ನೋಡಿದ ಮಹಿಳೆಯರು ಮಕ್ಕಳನ್ನು ಹೊಂದಲು ಹಿಂದೇಟು ಹಾಕುತ್ತಿದ್ದಾರೆ.
ತಮ್ಮ ತಾಯಿಯನ್ನು ಕೆಟ್ಟ ಸ್ಥಿತಿಯಲ್ಲಿ ನೋಡಿದ ಯುವ ಪೀಳಿಗೆಯ ಹುಡುಗಿಯರು ಮಕ್ಕಳನ್ನು ಹೊಂದುವ ಬಗ್ಗೆ ಕಡಿಮೆ ಯೋಚಿಸಲು ಪ್ರಾರಂಭಿಸುತ್ತಾರೆ.
2022ರ ವರದಿ ಏನು ಹೇಳುತ್ತೆ?
2022 ರ ಸಮೀಕ್ಷೆಯು ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಮಕ್ಕಳನ್ನು ಬಯಸುವುದಿಲ್ಲ ಎನ್ನುವುದನ್ನು ಪತ್ತೆ ಮಾಡಿದ್ದಾರೆ.
ಮಕ್ಕಳಾಗುವುದನ್ನು ತಡೆಯಲು ನಾಲ್ಕು ಮಂತ್ರ
ನೋ ಟು ಡೇಟಿಂಗ್
ನೋ ಟು ಸೆಕ್ಸ್
ನೋ ಟು ಮ್ಯಾರೇಜ್
ನೋ ಟು ಚಿಲ್ಡ್ರನ್
ದಕ್ಷಿಣ ಕೊರಿಯಾದ ಅಂಕಿಅಂಶಗಳ ಏಜೆನ್ಸಿಯಿಂದ ಇತ್ತೀಚಿನ ಲಭ್ಯವಿರುವ ಡೇಟಾವು 2021 ಕ್ಕೆ ಫಲವತ್ತತೆಯ ದರವನ್ನು 0.81 ನಲ್ಲಿ ಇರಿಸಿದೆ, 2022 ರ ಮೂರನೇ ತ್ರೈಮಾಸಿಕದ ವೇಳೆಗೆ ಇದು 0.79 ಆಗಿತ್ತು
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:42 am, Tue, 7 February 23