ದಕ್ಷಿಣ ಕೊರಿಯಾದ ಯುಟ್ಯೂಬರ್​​ಗೆ ಕಿರುಕುಳ; ಭಾರತವನ್ನು ತೋರಿಸುವ ನನ್ನ ಪ್ಯಾಷನ್ ಮುಂದುವರಿಸುವೆ ಎಂದ ಹ್ಯೊಜಿಯೊಂಗ್ ಪಾರ್ಕ್

ಭಾರತವನ್ನು ಇತರ ದೇಶಗಳಿಗೆ ತೋರಿಸಲು ಮತ್ತು ದೇಶದಲ್ಲಿ ಪ್ರಯಾಣಿಸುವ ತನ್ನ ಉತ್ಸಾಹವನ್ನು ಮುಂದುವರಿಸುತ್ತೇನೆ ಎಂದು ಪಾರ್ಕ್ ಹೇಳಿದ್ದಾರೆ.ಈ ಒಂದು ಕೆಟ್ಟ ಘಟನೆಯು ನನ್ನ ಸಂಪೂರ್ಣ ಪ್ರಯಾಣವನ್ನು ಹಾಳುಮಾಡಲು ಮತ್ತು ಅದ್ಭುತವಾದ ಭಾರತವನ್ನು ಇತರ ದೇಶಗಳಿಗೆ ತೋರಿಸಲು ನನ್ನ ಉತ್ಸಾಹಕ್ಕೆ ಅಡ್ಡಿಯಾಗುವುದಿಲ್ಲ ಎಂದು ಆಕೆ ಹೇಳಿದ್ದಾರೆ.

ದಕ್ಷಿಣ ಕೊರಿಯಾದ ಯುಟ್ಯೂಬರ್​​ಗೆ ಕಿರುಕುಳ; ಭಾರತವನ್ನು ತೋರಿಸುವ ನನ್ನ ಪ್ಯಾಷನ್ ಮುಂದುವರಿಸುವೆ ಎಂದ ಹ್ಯೊಜಿಯೊಂಗ್ ಪಾರ್ಕ್
ದಕ್ಷಿಣ ಕೊರಿಯಾದ ಯೂಟ್ಯೂಬರ್ ಹ್ಯೊಜಿಯೊಂಗ್ ಪಾರ್ಕ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 01, 2022 | 6:42 PM

ದಕ್ಷಿಣ ಕೊರಿಯಾದ ಯೂಟ್ಯೂಬರ್(South Korean YouTuber), ಹ್ಯೊಜಿಯೊಂಗ್ ಪಾರ್ಕ್ (Hyojeong Park)  “ಅದ್ಭುತ ಭಾರತ” ವನ್ನು ತೋರಿಸುವ ತನ್ನ ಪ್ಯಾಷನ್ ಮುಂದುವರೆಸುವುದಾಗಿ ಹೇಳಿದ್ದಾರೆ. ಒಂದು ಕೆಟ್ಟ ಘಟನೆಯು ನನ್ನ ಉತ್ಸಾಹವನ್ನು ಹಾಳು ಮಾಡುವುದಿಲ್ಲ. ಪೊಲೀಸರನ್ನು ಕರೆಯಲು ಕೂಡಾ ಸಾಧ್ಯವಾಗದ ಮತ್ತೊಂದು ದೇಶದಂತೆ ಅಲ್ಲ, ಇಲ್ಲಿ ಆಡಳಿತ ತಕ್ಕ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.ನನಗೆ ಇಂಥದ್ದೇ ಅನುಭವ ಬೇರೆ ದೇಶದಲ್ಲಿಯೂ ಸಂಭವಿಸಿದೆ.  ಆದರೆ ಆ ಸಮಯದಲ್ಲಿ ನಾನು ಪೊಲೀಸರಿಗೆ ಕರೆ ಮಾಡಲು ಕೂಡಾ ಸಾಧ್ಯವಾಗಲಿಲ್ಲ. ಭಾರತದಲ್ಲಿ, ಈ ಕ್ರಮವನ್ನು ತ್ವರಿತವಾಗಿ ತೆಗೆದುಕೊಳ್ಳಲಾಗುತ್ತಿದೆ. ನಾನು ಮೂರು ವಾರಗಳಿಗೂ ಹೆಚ್ಚು ಕಾಲ ಮುಂಬೈನಲ್ಲಿದ್ದೇನೆ, ಹೆಚ್ಚು ಕಾಲ ಉಳಿಯಲು ಯೋಚಿಸುತ್ತಿದ್ದೇನೆ ಎಂದು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಯೂಟ್ಯೂಬರ್ ಹೇಳಿದ್ದಾರೆ.ಪಾರ್ಕ್, ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದಾಗ ಮುಂಬೈ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ವರದಿಯಾಗಿದೆ. ಆದಿತ್ಯ ಎಂಬ ಬಳಕೆದಾರರು ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ಘಟನೆಯ ವಿಡಿಯೊ ವೈರಲ್ ಆಗಿದೆ.

ಒಂದು ನಿಮಿಷದ ಅವಧಿಯ ದಿನಾಂಕವಿಲ್ಲದ ವಿಡಿಯೊದಲ್ಲಿ ಯುವಕನೊಬ್ಬ ಆಕೆ ಆಕ್ಷೇಪಿಸಿದರೂ ಆಕೆಯ ಕೈಯನ್ನು ಹಿಡಿದುಕೊಂಡು ಲಿಫ್ಟ್ ನೀಡುತ್ತೇನೆ ಎಂದು ಹೇಳುತ್ತಿರುವಂತೆ ಕಾಣಿಸುತ್ತದೆ. ಅವನು ಅವಳ ಹತ್ತಿರ ಬರಲು ಪ್ರಯತ್ನಿಸಿದಾಗಲೂ ಪಾರ್ಕ್ ಅವನಿಂದ ದೂರ ಹೋಗಲು ವಿನಂತಿಸುತ್ತಾಳೆ. ಆಕೆ ಆತನನ್ನು ದೂಡಿ ಮನೆಗೆ ಹೋಗುವ ಸಮಯ ಎಂದು ಅಲ್ಲಿಂದ ಹೊರಡುತ್ತಾಳೆ. ಶೀಘ್ರದಲ್ಲೇ ಆ ವ್ಯಕ್ತಿ, ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ಅವಳನ್ನು ಹಿಂಬಾಲಿಸಿ ಮತ್ತೆ ಲಿಫ್ಟ್ ನೀಡುವುದಾಗಿ ಹೇಳುತ್ತಾನೆ. ಬನ್ನಿ, ಈ ಸೀಟ್ ಎಂದು ಆತ ಹರುಕುಮುರುಕು ಇಂಗ್ಲಿಷ್‌ನಲ್ಲಿ ಹೇಳುತ್ತಾನೆ, ಅದಕ್ಕೆ ಅವಳು ತನ್ನ ವಾಹನವು ಹತ್ತಿರದಲ್ಲಿ ನಿಂತಿದೆ ಎಂದು ಉತ್ತರಿಸುತ್ತಾಳೆ.

ಇದನ್ನೂ ಓದಿ
Image
Twitter Followers ನಿಮ್ಮ ಟ್ವಿಟ್ಟರ್​ ಫಾಲೋವರ್ಸ್​ ಸಂಖ್ಯೆ ಕುಸಿಯಬಹುದು: ಎಲಾನ್ ಮಸ್ಕ್ ಎಚ್ಚರಿಕೆ
Image
Shocking News: ನೀರೆಂದು ಭಾವಿಸಿ ಬಾಟಲಿಯಲ್ಲಿದ್ದ ಡೀಸೆಲ್ ಕುಡಿದ ಒಂದೂವರೆ ವರ್ಷದ ಮಗು ಸಾವು
Image
Shashi Tharoor: ಶಶಿ ತರೂರ್​​ಗೆ ಹೊಸ ಸಂಕಷ್ಟ; ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್​ನಿಂದ ನೋಟಿಸ್ ಜಾರಿ

ಭಾರತವನ್ನು ಇತರ ದೇಶಗಳಿಗೆ ತೋರಿಸಲು ಮತ್ತು ದೇಶದಲ್ಲಿ ಪ್ರಯಾಣಿಸುವ ತನ್ನ ಉತ್ಸಾಹವನ್ನು ಮುಂದುವರಿಸುತ್ತೇನೆ ಎಂದು ಪಾರ್ಕ್ ಹೇಳಿದ್ದಾರೆ.ಈ ಒಂದು ಕೆಟ್ಟ ಘಟನೆಯು ನನ್ನ ಸಂಪೂರ್ಣ ಪ್ರಯಾಣವನ್ನು ಹಾಳುಮಾಡಲು ಮತ್ತು ಅದ್ಭುತವಾದ ಭಾರತವನ್ನು ಇತರ ದೇಶಗಳಿಗೆ ತೋರಿಸಲು ನನ್ನ ಉತ್ಸಾಹಕ್ಕೆ ಅಡ್ಡಿಯಾಗುವುದಿಲ್ಲ ಎಂದು ಆಕೆ ಹೇಳಿದ್ದಾರೆ.

ಮುಂಬೈ ಪೊಲೀಸರು ಮೊಬೀನ್ ಚಂದ್ ಮೊಹಮ್ಮದ್ ಶೇಖ್ ಮತ್ತು ಮೊಹಮ್ಮದ್ ನಕೀಬ್ ಸದ್ರೇಲಂ ಅನ್ಸಾರಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇವರಿಬ್ಬರನ್ನೂ ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಮುಂಬೈ ಪೋಲೀಸ್‌ನ ಖಾರ್ ಪೊಲೀಸ್ ಠಾಣೆಯು ಖಾರ್ ವೆಸ್ಟ್‌ನ ನ್ಯಾಯವ್ಯಾಪ್ತಿಯಲ್ಲಿ ಕೊರಿಯನ್ ಮಹಿಳೆಯೊಂದಿಗೆ (ವಿದೇಶಿ) ಸಂಭವಿಸಿದ ಘಟನೆಯಲ್ಲಿ ಸುಮೋಟೋ ಕ್ರಮವನ್ನು ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ, ಇಬ್ಬರೂ ಆರೋಪಿಗಳನ್ನು ಬಂಧಿಸಿ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Thu, 1 December 22