ದಕ್ಷಿಣ ಕೊರಿಯಾದ ಯುವತಿಗೆ ಮುಂಬೈನಲ್ಲಿ ಕಿರುಕುಳ; ಟ್ವಿಟ್ಟರ್​​ನಲ್ಲಿ ವಿಡಿಯೋ ವೈರಲ್

ಆತನಿಂದ ಬಿಡಿಸಿಕೊಂಡು ಅವಳು ದೂರ ಹೋಗುತ್ತಿದ್ದಂತೆ ಅವನು ಮತ್ತೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕಿನಲ್ಲಿ ಬಂದು ಅವಳಿಗೆ ಲಿಫ್ಟ್ ಕೊಡುತ್ತೇನೆ ಬಾ ಎಂದು ಹೇಳುತ್ತಾನೆ. ಅದಕ್ಕೆ ಆ ಮಹಿಳೆ ನಿರಾಕರಿಸುತ್ತಾಳೆ.

ದಕ್ಷಿಣ ಕೊರಿಯಾದ ಯುವತಿಗೆ ಮುಂಬೈನಲ್ಲಿ ಕಿರುಕುಳ; ಟ್ವಿಟ್ಟರ್​​ನಲ್ಲಿ ವಿಡಿಯೋ ವೈರಲ್
ಕೊರಿಯಾದ ಯೂಟ್ಯೂಬರ್​ಗೆ ಕಿರುಕುಳ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 01, 2022 | 12:50 PM

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ (Mumbai) ಲೈವ್ ಪರ್ಫಾರ್ಮನ್ಸ್​ ಮಾಡುತ್ತಿದ್ದ ದಕ್ಷಿಣ ಕೊರಿಯಾದ ಮಹಿಳೆಗೆ ಕಿರುಕುಳ ನೀಡಿದ ಇಬ್ಬರನ್ನು ಬಂಧಿಸಲಾಗಿದೆ. ಆನ್‌ಲೈನ್‌ನಲ್ಲಿ ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ಆರೋಪಿಗಳಲ್ಲಿ ಕೊರಿಯಾದ ಯೂಟ್ಯೂಬರ್​ (YouTuber) ಒಬ್ಬರು ಎಷ್ಟೇ ಬೇಡ ಬೇಡ ಎಂದು ಕೂಗುತ್ತಿದ್ದರೂ ಕೇಳದೆ ಆಕೆಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಬಹುದು. ನಿನ್ನೆ ರಾತ್ರಿ ಈ ಘಟನೆ ನಡೆದಿದೆ.

ಆಕೆಯ ವಿರೋಧದ ನಡುವೆಯೂ ಆ ವ್ಯಕ್ತಿ ಆ ಯೂಟ್ಯೂಬರ್ ಹತ್ತಿರ ಬಂದು ಆಕೆಯ ಕೈ ಹಿಡಿದಿರುವುದು ವಿಡಿಯೋದಲ್ಲಿದೆ. ಆತನಿಂದ ಬಿಡಿಸಿಕೊಂಡು ಅವಳು ದೂರ ಹೋಗುತ್ತಿದ್ದಂತೆ ಅವನು ಮತ್ತೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಬೈಕಿನಲ್ಲಿ ಬಂದು ಅವಳಿಗೆ ಲಿಫ್ಟ್ ಕೊಡುತ್ತೇನೆ ಬಾ ಎಂದು ಹೇಳುತ್ತಾನೆ. ಅದಕ್ಕೆ ಆ ಮಹಿಳೆ ನಿರಾಕರಿಸುತ್ತಾಳೆ. ನನ್ನ ಮನೆ ಇಲ್ಲಿಯೇ ಹತ್ತಿರದಲ್ಲಿದೆ, ನಾನೇ ಹೋಗುತ್ತೇನೆ ಎಂದು ಆಕೆ ಇಂಗ್ಲಿಷ್‌ನಲ್ಲಿ ಹೇಳುತ್ತಾಳೆ.

ಇದನ್ನೂ ಓದಿ: Viral Video: ಭತ್ತದ ಗದ್ದೆಯಿಂದ ಓಡಿಸಿದ ಜನರ ಮೇಲೆ ಕೋಪಗೊಂಡು ಅಟ್ಟಾಡಿಸಿದ ಕಾಡಾನೆ; ವಿಡಿಯೋ ವೈರಲ್

ಈ ವಿಡಿಯೋ ಇದೀಗ ವೈರಲ್ ಆಗಿದೆ. ನಿನ್ನೆ ರಾತ್ರಿ ಸ್ಟ್ರೀಮ್‌ನಲ್ಲಿ ಒಬ್ಬ ವ್ಯಕ್ತಿ ನನಗೆ ಕಿರುಕುಳ ನೀಡಿದನು. ಅವನು ತನ್ನ ಸ್ನೇಹಿತನೊಂದಿಗೆ ಇದ್ದುದರಿಂದ ನಾನು ಪರಿಸ್ಥಿತಿಯನ್ನು ನಿಯಂತ್ರಿಸಲು ನನ್ನ ಕೈಲಾದಷ್ಟು ಪ್ರಯತ್ನಿಸಿದೆ. ಇಂತಹ ಘಟನೆಗಳಿಂದಾಗಿ ರಾತ್ರಿ ಲೈವ್​ ಸ್ಟ್ರೀಮಿಂಗ್ ನೀಡಲು ಯೋಚಿಸುವಂತಾಗಿದೆ ಎಂದು ಆ ಯುವತಿ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ವಿಡಿಯೋ ಆಧರಿಸಿ ಪೊಲೀಸರು ಸ್ವಯಂ ಪ್ರೇರಿತವಾಗಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ