Shocking News: ನೀರೆಂದು ಭಾವಿಸಿ ಬಾಟಲಿಯಲ್ಲಿದ್ದ ಡೀಸೆಲ್ ಕುಡಿದ ಒಂದೂವರೆ ವರ್ಷದ ಮಗು ಸಾವು

ಮನೆಯಲ್ಲಿ ಆಟವಾಡುತ್ತಿದ್ದ ಮಗು ಅಪ್ಪನ ವಾಹನವನ್ನು ರಿಪೇರಿ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದು, ಬಾಯಾರಿಕೆ ಆಗಿದ್ದರಿಂದ ನೀರು ಎಂದುಕೊಂಡು ಡೀಸೆಲ್ ಅನ್ನು ಕುಡಿದಿದೆ.

Shocking News: ನೀರೆಂದು ಭಾವಿಸಿ ಬಾಟಲಿಯಲ್ಲಿದ್ದ ಡೀಸೆಲ್ ಕುಡಿದ ಒಂದೂವರೆ ವರ್ಷದ ಮಗು ಸಾವು
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 01, 2022 | 4:16 PM

ಒಡಿಶಾ: ಮನೆಯಲ್ಲಿ ತನ್ನ ತಂದೆ ಬಾಟಲಿಯಲ್ಲಿ ಹಾಕಿಟ್ಟಿದ್ದ ಡೀಸೆಲ್ ಅನ್ನು ಆಕಸ್ಮಿಕವಾಗಿ ಕುಡಿದ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಆಘಾತಕಾರಿ ಘಟನೆ (Shocking News) ಒಡಿಶಾದ (Odisha) ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ ಆ ಮಗುವಿನ ತಂದೆ ತನ್ನ ವಾಹನವನ್ನು ರಿಪೇರಿ ಮಾಡುತ್ತಿದ್ದಾಗ ಡೀಸೆಲ್ (Diesel) ಅನ್ನು ಬಾಟಲಿಯಲ್ಲಿ ಇಟ್ಟುಕೊಂಡಿದ್ದ. ಆಗ ಅಪ್ಪನ ಗಮನಕ್ಕೆ ಬಾರದಂತೆ ಆ ಮಗು ಡೀಸೆಲ್ ಕುಡಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಆಟವಾಡುತ್ತಿದ್ದ ಮಗು ಅಪ್ಪನ ವಾಹನವನ್ನು ರಿಪೇರಿ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದು, ಬಾಯಾರಿಕೆ ಆಗಿದ್ದರಿಂದ ನೀರು ಎಂದುಕೊಂಡು ಡೀಸೆಲ್ ಅನ್ನು ಕುಡಿದಿದೆ. ಅದಾದ ಕೆಲವು ನಿಮಿಷಗಳ ನಂತರ ಆ ಮಗು ವಾಂತಿ ಮಾಡಲು ಪ್ರಾರಂಭಿಸಿದೆ. ಉಸಿರಾಡಲು ಸಾಧ್ಯವಾಗದೆ ನರಳತೊಡಗಿದೆ. ಇದರಿಂದ ಗಾಬರಿಯಾದ ಆ ಮಗುವಿನ ಪೋಷಕರು ತಕ್ಷಣ ಮಗುವನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: Shocking News: 3 ವರ್ಷದಿಂದ ಬೆಡ್ ರೂಂನಲ್ಲಿ ಪ್ಲಾಸ್ಟಿಕ್ ಬಾಟಲಿಯಲ್ಲಿತ್ತು ಮಗುವಿನ ಶವ!

ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಮಗುವನ್ನು ಭುವನೇಶ್ವರದ ಏಮ್ಸ್‌ಗೆ ದಾಖಲಿಸಲಾಯಿತು. ಆದರೆ, ಆ ಮಗುವಿನ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಕಾರಣ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ