ಬಾಬಾಗ್ (ಫಿಲಿಪೈನ್ಸ್): ಫಿಲಿಪೈನ್ಸ್‌ನ ಬಾಬಾಗ್‌ನಲ್ಲಿ (Babag of Philippines) ಭೂಕಂಪನ (Earthquake) ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ. ಭೂಕಂಪವು ಕರಾವಳಿ ಪ್ರಾಂತ್ಯದ ದಾವಾವೊ ಡಿ ಒರೊದ ನ್ಯೂ ಬಟಾನ್ ಪಟ್ಟಣದ ಈಶಾನ್ಯಕ್ಕೆ ಸುಮಾರು 14 ಕಿಲೋಮೀಟರ್ (8.7 ಮೈಲಿ) ದೂರದಲ್ಲಿ 11 ಕಿಲೋಮೀಟರ್ (6.8 ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಫಿಲಿಪ್ಪೀನ್ಸ್ ಇನ್ಸ್ಟಿಟ್ಯೂಟ್ ಆಫ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ತಿಳಿಸಿದೆ. ಹಲವಾರು ದಕ್ಷಿಣದ ನಗರಗಳು ಮತ್ತು ಪ್ರಾಂತ್ಯಗಳು ಭೂಕಂಪದಿಂದ ತತ್ತರಿಸಿವೆ ಎಂದು ಸರ್ಕಾರಿ ಸಂಸ್ಥೆ ಹೇಳಿದೆ.
ಇದನ್ನೂ ಓದಿ: Shocking News: ತನ್ನಂತೇ ಕಾಣುವ ಯುವತಿಯನ್ನು ಕೊಂದು, ತಾನೇ ಸತ್ತಿದ್ದೇನೆಂದು ನಂಬಿಸಿದ ಮಹಿಳೆ; ಕೊನೆಗೂ ಬಯಲಾಯ್ತು ಸತ್ಯ
ಫಿಲಿಪೈನ್ಸ್ ಪೆಸಿಫಿಕ್ ‘ರಿಂಗ್ ಆಫ್ ಫೈರ್’ ಉದ್ದಕ್ಕೂ ಇದೆ, ಇದು ಪೆಸಿಫಿಕ್ ಮಹಾಸಾಗರದ ಸುತ್ತಲಿನಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಭೂಕಂಪಗಳು ಸಂಭವಿಸುತ್ತವೆ. ಇದು ಪ್ರತಿ ವರ್ಷ ಸುಮಾರು 20 ಟೈಫೂನ್‌ಗಳು ಮತ್ತು ಉಷ್ಣವಲಯದ ಬಿರುಗಾಳಿಗಳಿಂದ ಹಾನಿಗೊಳಗಾಗುತ್ತದೆ. ಇದು ವಿಶ್ವದ ಅತ್ಯಂತ ವಿಪತ್ತು ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿದೆ. 1990 ರಲ್ಲಿ ಉತ್ತರ ಫಿಲಿಪೈನ್ಸ್‌ನಲ್ಲಿ 7.7 ತೀವ್ರತೆಯ ಭೂಕಂಪವು ಸುಮಾರು 2,000 ಜನರನ್ನು ಬಲಿ ಪಡೆದಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:23 pm, Wed, 1 February 23