ಕೊರೊನಾ ತಡೆ ವಿಫಲ: ಸ್ಪೇನ್​ನಲ್ಲಿ ನಾಯಿಗೆ ರಾಷ್ಟ್ರಧ್ವಜ ತೊಡಿಸಿ ಪ್ರತಿಭಟನೆ!

ಸಾಧು ಶ್ರೀನಾಥ್​

|

Updated on:May 15, 2020 | 1:58 PM

ಸ್ಪೇನ್​ನಲ್ಲಿ ಕೊರೊನಾ ವೈರಸ್ ಇನ್ನಿಲ್ಲದಂತೆ ಕಾಡ್ತಿದ್ದು, ಈ ವರೆಗೂ 27 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದ್ರಿಂದ ರೊಚ್ಚಿಗೆದ್ದ ಸ್ಪೇನ್​ನ ಜನತೆ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ರು. ಸೋಂಕು ತಡೆಯುವಲ್ಲಿ ವಿಫಲ ಹಾಗೂ ಲಾಕ್​ಡೌನ್​ನಲ್ಲಿನ ನ್ಯೂನತೆಗಳ ವಿರುದ್ಧ ಸಿಡಿದೆದ್ದ ಜನತೆ ಭಿತ್ತಿಪತ್ರಗಳನ್ನಿಡಿದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಾಯಿಗೆ ರಾಷ್ಟ್ರಧ್ವಜನ್ನ ತೊಡಿಸಿ ಕಿಡಿಕಾರಿದ್ರು. ಕೊರೊನಾಗೆ ಕಂದಮ್ಮ ಬಲಿ: ಕೊರೊನಾ ವೈರಸ್​ ವಯಸ್ಸಿನ ಅಂತರವಿಲ್ಲದೇ ಎಲ್ಲರಿಗೂ ವಕ್ಕರಿಸಿಕೊಳ್ತಿದೆ. ಬ್ರೆಜಿಲ್​ನಲ್ಲಿ ಒಂದು ವರ್ಷದ […]

ಕೊರೊನಾ ತಡೆ ವಿಫಲ: ಸ್ಪೇನ್​ನಲ್ಲಿ ನಾಯಿಗೆ ರಾಷ್ಟ್ರಧ್ವಜ ತೊಡಿಸಿ ಪ್ರತಿಭಟನೆ!

ಸ್ಪೇನ್​ನಲ್ಲಿ ಕೊರೊನಾ ವೈರಸ್ ಇನ್ನಿಲ್ಲದಂತೆ ಕಾಡ್ತಿದ್ದು, ಈ ವರೆಗೂ 27 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದ್ರಿಂದ ರೊಚ್ಚಿಗೆದ್ದ ಸ್ಪೇನ್​ನ ಜನತೆ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ರು. ಸೋಂಕು ತಡೆಯುವಲ್ಲಿ ವಿಫಲ ಹಾಗೂ ಲಾಕ್​ಡೌನ್​ನಲ್ಲಿನ ನ್ಯೂನತೆಗಳ ವಿರುದ್ಧ ಸಿಡಿದೆದ್ದ ಜನತೆ ಭಿತ್ತಿಪತ್ರಗಳನ್ನಿಡಿದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ನಾಯಿಗೆ ರಾಷ್ಟ್ರಧ್ವಜನ್ನ ತೊಡಿಸಿ ಕಿಡಿಕಾರಿದ್ರು.

ಕೊರೊನಾಗೆ ಕಂದಮ್ಮ ಬಲಿ:

ಕೊರೊನಾ ವೈರಸ್​ ವಯಸ್ಸಿನ ಅಂತರವಿಲ್ಲದೇ ಎಲ್ಲರಿಗೂ ವಕ್ಕರಿಸಿಕೊಳ್ತಿದೆ. ಬ್ರೆಜಿಲ್​ನಲ್ಲಿ ಒಂದು ವರ್ಷದ ಮಗುವಿಗೂ ಸೋಂಕು ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಮುದ್ದು ಮಗು ಕಳೆದುಕೊಂಡು ಹೆತ್ತವರು ಕಣ್ಣೀರಾಕಿದ್ದಾರೆ. ಸ್ಮಶಾನದಲ್ಲಿ ಭಾವುಕರಾದ ಅಪ್ಪ ಅಮ್ಮ ಮನೆಗೆ ಬಂದ ಮೇಲೂ ಮಗುವಿನ ಫೋಟೋ ನೋಡಿ ಕಣ್ಣೀರಿಟ್ಟಿದ್ದಾರೆ. ಸದ್ಯ ಬ್ರೆಜಿಲ್​ನಲ್ಲಿ ಕೊರೊನಾ ವೈರಸ್​ಗೆ 13 ಸಾವಿರ 900ಕ್ಕೂ ಹೆಚ್ಚು ಜನರನ್ನ ಬಲಿಯಾಗಿದ್ದಾರೆ.

ಅತ್ತ ಕೊರೊನಾ.. ಇತ್ತ ಮಾರುತ..!

ಫಿಲಿಪೈನ್ಸ್​​ ಪಾಲಿಗೆ ಅತ್ತ ಧರಿ ಇತ್ತ ಪುಲಿ ಅಂತಾಗಿದೆ. ಒಂದೆಡೆ ಕೊರೊನಾ ವೈರಸ್ ತನ್ನ ಕಬಂಧ ಬಾಹು ಚಾಚ್ತಿದ್ರೆ. ಮತ್ತೊಂದ್ಕಡೆ ಚಂಡಮಾರುತ ರಣಕೇಕೆ ಹಾಕ್ತಿದೆ.. ಪಶ್ಚಿಮ ಪಿಲಿಪ್ಪೈನ್ಸ್​ಗೆ ನಿನ್ನೆ ಚಂಡಮಾರುತ ಅಪ್ಪಳಿಸಿದ್ದು, ಮನೆಮಠ ಕಳೆದುಕೊಂಡಿದ್ದಾರೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಮನೆಗಳು ಕೊಚ್ಚಿಹೋಗಿದ್ದು, ತಾತ್ಕಾಲಿಕವಾಗಿ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದ್ರೆ, ಹೆಚ್ಚು ಜನ ಒಂದೆಡೆ ಸೇರಿರೋದ್ರಿಂದ ಕೊರೊನಾ ಸೋಂಕು ಹರಡುವ ಭೀತಿಯೂ ಶುರುವಾಗಿದೆ.

ಕೊರೊನಾ ಔಷಧಿ ಜಾಹೀರಾತಿಗೆ ದಂಡ..!

ಕೊರೊನಾ ವೈರಸ್​ಗೆ ಇನ್ನೂ ಔಷಧಿಯೇ ಸಿಕ್ಕಿಲ್ಲ. ಜಗತ್ತಿನ ಹಲವು ದೇಶಗಳಲ್ಲಿ ಸಂಶೋಧನೆ ನಡೆಸ್ತಿದ್ರೂ ವೈರಸ್​ ನಿಗ್ರಹ ಮಾಡೋದೇ ಕಷ್ಟವಾಗ್ತಿದೆ. ಆದ್ರೆ, ಆಸ್ಟ್ರೇಲಿಯಾದ ಔಷಧ ಕಂಪನಿಯೊಂದು ಕೊರೊನಾಗೆ ಔಷಧಿ ಅಂತಾ ಹೇಳಿ ಎಡವಟ್ಟು ಮಾಡ್ಕೊಂಡಿದೆ. ಹೀಲಿಂಗ್ ಚರ್ಚ್​ನವರು ಕೈಗಾರಿಕೆಗೆ ಬಳಸುವ ಬ್ಲೀಚ್​ ಬಳಿಸಿದ್ರೆ ಡೆಡ್ಲಿ ಕೊರೊನಾ ವೈರಸ್ ಗುಣವಾಗುತ್ತೆ ಅಂತಾ ಹೇಳಿದ್ರು, ಹೀಗಾಗಿ, ಈ ರೀತಿ ಜಾಹಿರಾತು ಕೊಟ್ಟಿದ್ದಕ್ಕೆ ಮಿರಾಕಲ್ ಮಿನರಲ್ ಸಲ್ಯೂಷನ್ ಕಂಪನಿಗೆ 1 ಲಕ್ಷದ 50 ಸಾವಿರ ಡಾಲರ್ ದಂಡ ವಿಧಿಸಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada