ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನ

|

Updated on: Jan 10, 2021 | 12:47 PM

ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಬೋಯಿಂಗ್ 737-500 ಟೇಕ್ ಆಫ್ ಆದ 4 ನಿಮಿಷದಲ್ಲೇ ಸಮುದ್ರಕ್ಕೆ ಬಿದ್ದಿದೆ.

ನಾಪತ್ತೆಯಾಗಿದ್ದ ಬೋಯಿಂಗ್ 737-500 ವಿಮಾನ ಸಮುದ್ರದಲ್ಲಿ ಪತನ
ಬೋಯಿಂಗ್ 737-500 ಟೇಕ್ ಆಫ್ ಆದ 4 ನಿಮಿಷದಲ್ಲೇ ಸಮುದ್ರಕ್ಕೆ ಬಿದ್ದಿದೆ.
Follow us on

ಇಂಡೋನೇಷ್ಯಾದಲ್ಲಿ ಮತ್ತೊಂದು ಘೋರ ದುರಂತ ಸಂಭವಿಸಿದೆ. ರಾಜಧಾನಿ ಜಕಾರ್ತದಿಂದ ಹೊರಟಿದ್ದ ಖಾಸಗಿ ವಿಮಾನ ಬೋಯಿಂಗ್ 737-500 ಟೇಕ್ ಆಫ್ ಆದ 4 ನಿಮಿಷದಲ್ಲೇ ಸಮುದ್ರಕ್ಕೆ ಬಿದ್ದಿದೆ. ಈ ವಿಮಾನದಲ್ಲಿ 62 ಜನರಿದ್ದರು.

ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿರುವ ಕುರಿತು ಇಂಡೋನೇಷಿಯಾ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸುಮಾರು 10 ಸಾವಿರ ಅಡಿ ಎತ್ತರದಿಂದ ವಿಮಾನ ಸಮುದ್ರಕ್ಕೆ ಬಿದ್ದ ಹಿನ್ನೆಲೆ 62 ಜನ ಬದುಕುಳಿಯುವುದು ಅನುಮಾನ ಎನ್ನಲಾಗುತ್ತಿದೆ.

ಏರ್ಪೋರ್ಟ್​ನಲ್ಲಿ ಕಾಯ್ತಿದ್ದ ಕುಟುಂಬದವರಿಗೆ ಶಾಕ್
ಮೀನುಗಾರರಿಗೆ ವಿಮಾನದ ಅವಶೇಷ ದೊರೆತಿದೆ.ಪ್ರಯಾಣಿಕರ ದೇಹದ ಭಾಗ, ಬಟ್ಟೆ ಚೂರುಗಳು ಪತ್ತೆಯಅಗಿವೆ. ಅಷ್ಟಕ್ಕೂ ಮಳೆ ಕಾರಣ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ವಿಮಾನ ಹೊರಟಿತ್ತು. ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪಾಂಟಿಯಾನಾಕ್​ಗೆ ತೆರಳುತ್ತಿದ್ದ ವಿಮಾನ ಮಧ್ಯಾಹ್ನ 2.40ಕ್ಕೆ ರೇಡಾರ್ ನಿಂದ ನಾಪತ್ತೆಯಾಗಿತ್ತು. ವಿಮಾನವು 26 ವರ್ಷ ಹಳೆಯದಾಗಿತ್ತು.

ಜಕಾರ್ತ ಮತ್ತು ಪಾಂಟಿಯಾನಾಕ್ ಏರ್ಪೋರ್ಟ್​ನಲ್ಲಿ ಕಾಯ್ತಿದ್ದ ಕುಟುಂಬದವರು ಮತ್ತು ಸ್ನೇಹಿತರಿಗೆ ಈ ಘಟನೆ ಶಾಕ್ ನೀಡಿದೆ. 2018ರಲ್ಲಿ ಜಕಾರ್ತದಲ್ಲಿ ಲಯನ್ ಏರ್ ಕಂಪನಿಯ ಬೋಯಿಂಗ್ 737 ಮ್ಯಾಕ್ಸ್ ವಿಮಾನ ಪತನವಾಗಿ 189 ಪ್ರಯಾಣಿಕರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮೊದಲೇ ಮತ್ತೊಂದು ಘೋರ ದುರಂತ ನಡೆದುಹೋಗಿದೆ.

ಜಕಾರ್ತದಿಂದ ಟೇಕ್​ ಆಫ್​ ಆದ ಇಂಡೋನೇಷ್ಯಾದ ವಿಮಾನ ನಾಪತ್ತೆ!

Published On - 8:10 am, Sun, 10 January 21