Pakistan: ಕರಾಚಿಯಲ್ಲಿ ಉಚಿತ ಪಡಿತರ ವಿತರಣಾ ಅಭಿಯಾನದ ವೇಳೆ ಕಾಲ್ತುಳಿತ;11 ಸಾವು

|

Updated on: Mar 31, 2023 | 8:49 PM

ವರದಿಗಳ ಪ್ರಕಾರ, ಈ ಘಟನೆಯು ಕರಾಚಿಯ SITE (ಸಿಂಧ್ ಇಂಡಸ್ಟ್ರಿಯಲ್ ಟ್ರೇಡಿಂಗ್ ಎಸ್ಟೇಟ್) ಪ್ರದೇಶದಲ್ಲಿ ನಡೆದಿದೆ. ಇಂದಿನ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಲ್ಲಿ ಎಂಟು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

Pakistan: ಕರಾಚಿಯಲ್ಲಿ ಉಚಿತ ಪಡಿತರ ವಿತರಣಾ ಅಭಿಯಾನದ ವೇಳೆ ಕಾಲ್ತುಳಿತ;11 ಸಾವು
ಕಾಲ್ತುಳಿತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ
Follow us on

ಶುಕ್ರವಾರ ದಕ್ಷಿಣ ಪಾಕಿಸ್ತಾನದ (Pakistan) ಕರಾಚಿ (Karachi) ನಗರದಲ್ಲಿ ಉಚಿತ ಪಡಿತರ ವಿತರಣಾ ಅಭಿಯಾನದ (free ration distribution) ವೇಳೆ ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 11 ಜನರು ಸಾವಿಗೀಡಾಗಿದ್ದು ಹಲವರು ಗಾಯಗೊಂಡಿದ್ದಾರೆ. ಪಡಿತರ ವಿತರಣಾ ಕೇಂದ್ರದಲ್ಲಿ ಕಾಲ್ತುಳಿತದ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಜನರು ಪ್ರಜ್ಞಾಹೀನರಾಗಿದ್ದಾರೆ ಎಂದು ಪಾಕಿಸ್ತಾನದ ಎಕ್ಸ್‌ಪ್ರೆಸ್ ನ್ಯೂಸ್ ವರದಿ ಮಾಡಿದೆ. ವರದಿಗಳ ಪ್ರಕಾರ, ಈ ಘಟನೆಯು ಕರಾಚಿಯ SITE (ಸಿಂಧ್ ಇಂಡಸ್ಟ್ರಿಯಲ್ ಟ್ರೇಡಿಂಗ್ ಎಸ್ಟೇಟ್) ಪ್ರದೇಶದಲ್ಲಿ ನಡೆದಿದೆ. ಇಂದಿನ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರಲ್ಲಿ ಎಂಟು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಪಡಿತರವನ್ನು ಸಂಗ್ರಹಿಸಲು ಹಲವಾರು ಜನರು ಕಾರ್ಖಾನೆಗೆ ಮುಗಿಬಿದ್ದ ನಂತರ ಸಾವುಗಳು ವರದಿಯಾಗಿದೆ. ರಂಜಾನ್ ಮಾಸ ಪ್ರಯುಕ್ತ ಪಡಿತರ ವಿತರಣೆ ನಡೆದಿತ್ತು. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಕರಾಚಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸರ್ಕಾರವು ಸ್ಥಾಪಿಸಿದ ಉಚಿತ ಹಿಟ್ಟು ವಿತರಣೆ ವೇಳೆ  ಉಂಟಾದ ಕಾಲ್ತುಳಿತದಲ್ಲಿ ನಾಲ್ಕು ವೃದ್ಧರು ಪ್ರಾಣ ಕಳೆದುಕೊಂಡ ಕೆಲವು ದಿನಗಳ ನಂತರ ಇತ್ತೀಚಿನ ದುರಂತವು ಬಂದಿದೆ.

ಇದನ್ನೂ ಓದಿಅಮೃತಪಾಲ್ ಸಿಂಗ್ ವಿರುದ್ಧದ ಕಾರ್ಯಾಚರಣೆ ಮಾನವ ಹಕ್ಕುಗಳ ಉಲ್ಲಂಘನೆ ಎಂದ ಟೈಮ್ ಲೇಖನ; ಟ್ವೀಟಿಗರ ಆಕ್ರೋಶ

ಶನಿವಾರದ ಘಟನೆಯನ್ನು ಹೊರತುಪಡಿಸಿ, ಪಾಕಿಸ್ತಾನದ ಇತರ ಪ್ರಾಂತ್ಯಗಳಲ್ಲಿನ ಸೈಟ್‌ಗಳಲ್ಲಿ ಇತ್ತೀಚಿನ ವಾರಗಳಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಟ್ರಕ್‌ಗಳು ಮತ್ತು ವಿತರಣಾ ಕೇಂದ್ರಗಳಿಂದ ಸಾವಿರಾರು ಚೀಲಗಳ ಹಿಟ್ಟನ್ನು ಲೂಟಿ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Fri, 31 March 23