ಅಮರಾವತಿ: ಅಮೆರಿಕದಲ್ಲಿ (US) ಸ್ನಾತಕೋತ್ತರ ಪದವಿ ವ್ಯಾಸಾಂಗ ಮಾಡುತ್ತಿದ್ದ 24ರ ಹರೆಯದ ಆಂಧ್ರ ಪ್ರದೇಶ (Andhra Pradesh)ಮೂಲದ ಯುವಕ ಗುಂಡಿಗೆ ಬಲಿಯಾಗಿದ್ದಾನೆ. ಆತ ಗ್ಯಾಸ್ ಸ್ಟೇಷನ್ನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಅಮೆರಿಕದ ಒಹಾಯೊದ ಪೊಲೀಸರು ಹೇಳಿದ್ದಾರೆ. ಮೃತ ವಿದ್ಯಾರ್ಥಿಯನ್ನು (Student) ಸಯೇಶ್ ವೀರಾ ಎಂದು ಗುರುತಿಸಲಾಗಿದೆ. ಗುರುವಾರ ರಾಜ್ಯದ ಕೊಲಂಬಸ್ ವಿಭಾಗದಲ್ಲಿ ಈ ಘಟನೆ ನಡೆದಿದೆ. ಮಾಧ್ಯಮಗಳ ವರದಿ ಪ್ರಕಾರ ವೀರಾ ಆಂಧ್ರ ಪ್ರದೇಶದ ವ್ಯಕ್ತಿಯಾಗಿದ್ದಾರೆ. 2023 ಏಪ್ರಿಲ್ 20ರಂದು ಮಧ್ಯರಾತ್ರಿ 12:50ಕ್ಕೆ ವರದಿಯಾದ ಶೂಟಿಂಗ್‌ನಲ್ಲಿ ಕೊಲಂಬಸ್ ಪೊಲೀಸ್ ಅಧಿಕಾರಿಗಳನ್ನು W. ಬ್ರಾಡ್ ಸೇಂಟ್‌ನ 1000 ಬ್ಲಾಕ್‌ಗೆ ಕಳುಹಿಸಲಾಯಿತು. ಅವರು ಗುಂಡೇಟಿನಿಂದ ಬಳಲುತ್ತಿರುವ ಸಯೇಶ್ ವೀರಾ, M/O/24 ಎಂದು ಗುರುತಿಸಲಾದ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಿದೆ.
ಕೊಲಂಬಸ್ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಸಂತ್ರಸ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಣ ಉಳಿಸಲು ಚಿಕಿತ್ಸೆ ನೀಡಿದ್ದರೂ ಅದು ಫಲಕಾರಿಯಾಗದೆ ವೀರಾ, 1.27ರ ಹೊತ್ತಿಗೆ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.ವಿಷಯವನ್ನು ಆತನ ಕುಟುಂಬಕ್ಕೆ ತಿಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡ ಶಂಕಿತ ವ್ಯಕ್ತಿಯ ಪೋಟೊವನ್ನು ಕೊಲಂಬಂಸ್ ಡಿವಿಷನ್ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ವೀರಾ ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸುವುದಕ್ಕಾಗಿ ಆನ್ಲೈನ್ ಫಂಡ್ ರೈಸರ್ ಪ್ರೋಗ್ರಾಂ ಮೇಲ್ವಿಚಾರಣೆ ಮಾಡುತ್ತಿರುವ ರೋಹಿತ್ ಯಾಲಮಂಚಿ ಪ್ರಕಾರ, ವೀರಾ ಅವರು ಮಾಸ್ಟರ್ಸ್ ಡಿಗ್ರಿ ಮಾಡುತ್ತಿದ್ದು H-1B ವೀಸಾ ಹೊಂದಿದ್ದರು. ಇನ್ನು 10 ದಿನಗಳಲ್ಲಿ ಅವರ ವ್ಯಾಸಾಂಗ ಮುಗಿಯುವುದರಲ್ಲಿತ್ತು ಎಂದಿದ್ದಾರೆ.
ಇದನ್ನೂ ಓದಿ:Dominic Raab Resigns: ಯುಕೆ ಉಪ ಪ್ರಧಾನಿ ಡೊಮಿನಿಕ್ ರಾಬ್ ರಾಜೀನಾಮೆ
ಗ್ಯಾಸ್ ಸ್ಟೇಷನ್ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಆತ ಕೆಲವೇ ವಾರಗಳಲ್ಲಿ ಆ ಕೆಲಸ ಬಿಡುವವವನಿದ್ದ. ಆತನ ಕುಟುಂಬದಿಂದ ಅಮೆರಿಕಕ್ಕೆ ಬಂದ ಮೊದಲ ವ್ಯಕ್ತಿಯಾಗಿದ್ದ ವೀರಾ ಹೆಗಲ ಮೇಲೆ ಕುಟುಂಬದ ಜವಾಬ್ದಾರಿ ಇತ್ತು. ಎರಡು ವರ್ಷಗಳ ಹಿಂದೆ ಅವರ ಅಪ್ಪ ಸಾವಿಗೀಡಾಗಿದ್ದರು.
ಆತ ಯಾವುದೇ ಪರಿಸ್ಥಿತಿಯಲ್ಲಿ ಸಹಾಯಕ್ಕೆ ನಿಲ್ಲುತ್ತಿದ್ದ ವ್ಯಕ್ತಿಯಾಗಿದ್ದು, ಕ್ರಿಕೆಟ್ ಆಟಗಾರನಾಗಿದ್ದ. ಕೊಲಂಬಸ್ ಪ್ರದೇಶದಲ್ಲಿ ಕ್ರಿಕೆಟ್ ಆಡುವವರಿಗೆ ಅವ ಎಂಥಾ ಪ್ರತಿಭಾನ್ವಿತ ಕ್ರಿಕೆಟಿಗ ಎಂಬುದು ಗೊತ್ತಿದೆ, ಸಯೇಶ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರೋಹಿತ್ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ