Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವು ಮಧುಮೇಹಿಗಳ ಮಾವಿನಹಣ್ಣುಗಳು..; ಮೂರು ವಿಧದ ಸಕ್ಕರೆ ರಹಿತ ಮಾವು ಪರಿಚಯಿಸಿದ ಪಾಕಿಸ್ತಾನ ಕೃಷಿ ತಜ್ಞ

ಈ ಸಕ್ಕರೆ ಮುಕ್ತ ಮಾವಿನಹಣ್ಣುಗಳು ದುಬಾರಿಯಲ್ಲ. ಕೈಗೆಟಕುವ ದರವನ್ನೇ ನಿಗದಿಪಡಿಸಲಾಗಿದೆ. ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಕೆಜಿಗೆ 150 ರೂ.ಪಾಕಿಸ್ತಾನ ಕರೆನ್ಸಿ ಅಂದರೆ, ಭಾರತರ ಕರೆನ್ಸಿ ಪ್ರಕಾರ ಕೆಜಿಗೆ 70 ರೂ. ಆಗಿದೆ.

ಇವು ಮಧುಮೇಹಿಗಳ ಮಾವಿನಹಣ್ಣುಗಳು..; ಮೂರು ವಿಧದ ಸಕ್ಕರೆ ರಹಿತ ಮಾವು ಪರಿಚಯಿಸಿದ ಪಾಕಿಸ್ತಾನ ಕೃಷಿ ತಜ್ಞ
ಪಾಕಿಸ್ತಾನದ ಸಕ್ಕರೆ ರಹಿತ ಮಾವಿನಹಣ್ಣು
Follow us
TV9 Web
| Updated By: Lakshmi Hegde

Updated on: Jun 27, 2021 | 3:05 PM

ಕರಾಚಿ: ಮಧುಮೇಹ ರೋಗಿಗಳಿಗಾಗಿ ಮೂರು ವಿಧದ ಮಾವಿನ ಹಣ್ಣುಗಳನ್ನು ಪಾಕಿಸ್ತಾನದ ತಜ್ಞರೊಬ್ಬರು ಪರಿಚಯಿಸಿದ್ದಾರೆ. ಈ ಮೂರೂ ವಿಧದ ಹಣ್ಣುಗಳಲ್ಲಿ ಸಕ್ಕರೆ ಅಂಶ ತುಂಬ ಕಡಿಮೆ ಅಂದರೆ ಶೇ.4-6 ರಷ್ಟು ಮಾತ್ರ ಇರುತ್ತದೆ. ಹಾಗಾಗಿ ಇದನ್ನು ಮಧುಮೇಹಿಗಳು ಧೈರ್ಯವಾಗಿ ತಿನ್ನಬಹುದಾಗಿದೆ. ಅಂದಹಾಗೆ ಇದನ್ನು ಪರಿಚಯಿಸಿದ್ದು, ಖ್ಯಾತ ಕೃಷಿ ತಜ್ಞ ಎಂ.ಎಚ್​.ಪನ್ವಾರ್​​ ಅವರ ಫಾರ್ಮ್​​ನ ಗುಲಾಮ್​ ಸರ್ವಾರ್​ ಎಂಬುವರು. ಹಣ್ಣು, ತೋಟಗಾರಿಕೆ ಬೆಳೆಗಳಲ್ಲಿ ಪರಿಣಿತಿ ಪಡೆದಿದ್ದ ಎಂ.ಎಚ್​.ಪನ್ವಾರ್​ 1964ರಲ್ಲಿ ಈ ಫಾರ್ಮ್​ ನಿರ್ಮಿಸಿದ್ದು, ಇದು ತುಂಬ ಖ್ಯಾತಿ ಪಡೆದ ಫಾರ್ಮ್ ಆಗಿದೆ.

ಸಿಂಧ್‌ನ ತಾಂಡೋ ಅಲ್ಲಾಹಾರ್‌ನ ಖಾಸಗಿ ಕೃಷಿ ಫಾರ್ಮ್‌ನಲ್ಲಿ ಮಾವಿನ ವೈಜ್ಞಾನಿಕ ಮಾರ್ಪಾಡಿನ ನಂತರ ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಈ ಸಕ್ಕರೆ ಮುಕ್ತ ಮಾವಿನ ಹಣ್ಣುಗಳನ್ನು ಪರಿಚಯಿಸಲಾಗಿದೆ. ಮೂರು ತಳಿಗಳಿಗೆ ಒಂದೊಂದು ಹೆಸರಿಡಲಾಗಿದ್ದು, ಒಂದು ಸೋನಾರೋ ಮಾವು, ಮತ್ತೊಂದು ಗ್ಲೆನ್​ ಮತ್ತು ಇನ್ನೊಂದು ಕೀಟ್ ಮಾವು.

ಈ ಹೊಸಬಗೆಯ ಮಾವಿನ ಹಣ್ಣುಗಳನ್ನು ಪರಿಚಯಿಸಿದ ಗುಲಾಮ್​ ಸರ್ವಾರ್​, ಎಂ.ಎಚ್​.ಪನ್ವಾರ್​ ಅವರ ಹತ್ತಿರದ ಸಂಬಂಧಿ. ಪನ್ವಾರ್​ ಸಾವಯವ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ್ದರು. ಹಣ್ಣು ಮತ್ತಿತರ ಬೆಳೆಗಳ ಬಗ್ಗೆ ತುಂಬ ಸಂಶೋಧನೆಯನ್ನೂ ಮಾಡಿದವರಾಗಿದ್ದರು. ಈಗ ಅದೇ ಫಾರ್ಮ್​​ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಗುಲಾಮ್ ಸಹ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಹಾಗೇ, ಸಕ್ಕರೆ ಮುಕ್ತ ಮಾವಿನ ತಳಿಯನ್ನು ಅಭಿವೃದ್ಧಿ ಪಡಿಸಲು, ಅದಕ್ಕೆ ಸಂಬಂಧಪಟ್ಟ ವೈಜ್ಞಾನಿಕ ರೂಪಾಂತರಗಳ ಮಾಡಲು 5 ವರ್ಷ ಬೇಕಾಯಿತು ಎಂದವರು ತಿಳಿಸಿದ್ದಾರೆ.

ಹಾಗಂತ ಈ ಸಕ್ಕರೆ ಮುಕ್ತ ಮಾವಿನಹಣ್ಣುಗಳು ದುಬಾರಿಯಲ್ಲ. ಕೈಗೆಟಕುವ ದರವನ್ನೇ ನಿಗದಿಪಡಿಸಲಾಗಿದೆ. ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ಕೆಜಿಗೆ 150 ರೂ.ಪಾಕಿಸ್ತಾನ ಕರೆನ್ಸಿ ಅಂದರೆ, ಭಾರತರ ಕರೆನ್ಸಿ ಪ್ರಕಾರ ಕೆಜಿಗೆ 70 ರೂ. ಆಗಿದೆ. ಗುಲಾಮ್​ ಅವರು ಈ ಮಾವಿನ ತಳಿಗಳ ಅಭಿವೃದ್ಧಿಗೆ ಸರ್ಕಾರದಿಂದ ನೆರವು ಪಡೆಯಲಿಲ್ಲ. ವೈಯಕ್ತಿಕವಾಗಿಯೇ ಖರ್ಚು ನಿಭಾಯಿಸಿದ್ದಾರೆ. ಈ ಮೂರರಲ್ಲಿ ಕೀಟ್​ ತಳಿಯ ಮಾವಿನಹಣ್ಣುಗಳಲ್ಲಿ, ಶೇ.4.7, ಸೊನಾರೊದಲ್ಲಿ ಶೇ.5.6 ಮತ್ತು ಗ್ಲೆನ್​​ನಲ್ಲಿ ಶೇ.6ರಷ್ಟು ಮಾತ್ರ ಸಕ್ಕರೆ ಅಂಶ ಇದೆ ಎಂದು ಗುಲಾಮ್ ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹೆಸರು ಬದಲಿಸುವಂತೆ ಸಿಎಂ ಯಡಿಯೂರಪ್ಪಗೆ ನಂಜಾವಧೂತ ಸ್ವಾಮೀಜಿ

Sugar free mangoes for diabetic people In Pakistan

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು