Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer: ನಮ್ಮ ಮೂಲ ಯಾವುದು? ಚೀನಾದಲ್ಲಿ ಸಿಕ್ಕ ಹಳೇ ತಲೆಬುರುಡೆ ಹೇಳಿದ ಹೊಸ ಪಾಠಗಳಿವು

ಮನುಕುಲ ವಿಕಾಸದ ಸುದೀರ್ಘ ಇತಿಹಾಸದಲ್ಲಿ ತಪ್ಪಿಹೋಗಿರುವ ತಂತು ಅಥವಾ ಕೊಂಡಿಯನ್ನು ಪುನಃ ಬೆಸೆಯುವ ಸಾಧ್ಯತೆಯೊಂದು ಇದೀಗ ಚೀನಾದಲ್ಲಿ ಪತ್ತೆಯಾಗಿದೆ.

Explainer: ನಮ್ಮ ಮೂಲ ಯಾವುದು? ಚೀನಾದಲ್ಲಿ ಸಿಕ್ಕ ಹಳೇ ತಲೆಬುರುಡೆ ಹೇಳಿದ ಹೊಸ ಪಾಠಗಳಿವು
ಚೀನಾದಲ್ಲಿ ಸಿಕ್ಕ ಡ್ರ್ಯಾಗನ್ ಮ್ಯಾನ್ ತಲೆಬುರುಡೆ ಮತ್ತು ಕಲಾವಿದನ ಕಲ್ಪನೆಯಲ್ಲಿ ಡ್ರ್ಯಾಗನ್ ಮ್ಯಾನ್ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jun 27, 2021 | 7:26 PM

ಮಾನವ ಕುಲದ ಹಲವು ತಳಿಗಳ ಬಗ್ಗೆ ಜೀವವಿಕಾಸಶಾಸ್ತ್ರಜ್ಞರು ಈಗಾಗಲೇ ಸಾಕಷ್ಟು ವಿವರವಾಗಿ ಮಾಹಿತಿ ದಾಖಲಿಸಿದ್ದಾರೆ. ಇಂಥ ದಾಖಲಾತಿಗಳಿಗೂ ಸಾವಿರಾರು ವರ್ಷಗಳ ಇತಿಹಾಸವಿದೆ. ಮನುಕುಲದ ವಲಸೆಗಳು, ನಿರ್ದಿಷ್ಟ ಮಾನಮ ಜನಾಂಗಗಳು ನಿರ್ದಿಷ್ಟ ಭೂ ಪ್ರದೇಶದಲ್ಲಿ ನೆಲೆ ನಿಲ್ಲಲು ಕಾರಣವಾದ ಆಂಶಗಳ ಬಗ್ಗೆಯೂ ವಿಸ್ತೃತ ದಾಖಲಾತಿ ಲಭ್ಯವಿದೆ. ಆದರೆ ಮನುಕುಲ ವಿಕಾಸದ ಸುದೀರ್ಘ ಇತಿಹಾಸದಲ್ಲಿ ತಪ್ಪಿಹೋಗಿರುವ ತಂತು ಅಥವಾ ಕೊಂಡಿಯನ್ನು ಪುನಃ ಬೆಸೆಯುವ ಸಾಧ್ಯತೆಯೊಂದು ಇದೀಗ ಚೀನಾದಲ್ಲಿ ಪತ್ತೆಯಾಗಿದೆ. ಚೀನಾದಲ್ಲಿ ಪತ್ತೆಯಾದ ಪುರಾತನ ಮಾನವ ಕುಲಕ್ಕೆ ಸೇರಿದ ಮಾನವನ ತಲೆಬುರುಡೆಯು ಮನುಷ್ಯ ಚರಿತ್ರೆಯಲ್ಲಿ ನಿರ್ದಿಷ್ಟವಾಗಿ ಯಾವ ಗುಂಪಿಗೆ ಸೇರುತ್ತದೆ ಎಂಬ ಬಗ್ಗೆ ವಾದ-ಪ್ರತಿವಾದಗಳು ಹುಟ್ಟಿಕೊಂಡಿವೆ.

ಈ ತಲೆಬುರುಡೆಯು ಸುಮಾರು 1.46 ಲಕ್ಷ ವರ್ಷಗಳಷ್ಟು ಹಳೆಯದು ಎಂದು ‘ದಿ ಇನ್ನೊವೇಶನ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ಬರಹ ಹೇಳಿದೆ. ಈಶಾನ್ಯ ಚೀನಾದ ಹಾರ್ಬಿನ್ ನಗರದ ಸಮೀಪವಿರುವ ಸೊಂಘುವ ನದಿಯಲ್ಲಿ ಈ ತಲೆಬುರುಡೆ ಪತ್ತೆಯಾಗಿದೆ.

ಅತ್ತ ಇದೇ ಹೊತ್ತಿಗೆ ಇಸ್ರೇಲ್​ ಸಂಶೋಧಕರು ಇಂಥದ್ದೇ ಮತ್ತೊಂದು ಸುದ್ದಿಯನ್ನು ಪ್ರಕಟಿಸಿದ್ದಾರೆ. ಈ ಮೊದಲು ಜಗತ್ತಿಗೆ ತಿಳಿದಿರದ ನೆಶೆರ್ ರಮ್ಲಾ ಹೊಮೊ ಎನ್ನುವ ಪುರಾತನಾ ಮಾನವ ತಳಿಯನ್ನು ಗುರುತಿಸಿರುವುದಾಗಿ ಅವರು ಘೋಷಿಸಿದ್ದಾರೆ. ನೆಶೆರ್ ರಮ್ಲಾ ಹೊಮೆ ಎನ್ನುವ ಈ ಮಾನವ ತಳಿಯು ಸುಮಾರು 1 ಲಕ್ಷ ವರ್ಷಗಳ ಹಿಂದೆ ಹೊಮೊ ಸೆಪಿಯನ್ ತಳಿಯ ಮನುಷ್ಯನ ಜೊತೆಗೆ ವಾಸಿಸುತ್ತಿತ್ತು ಎನ್ನಲಾಗಿದೆ. ಆ ಕಾಲಘಟ್ಟದಲ್ಲಿ ಏಷ್ಯಾ, ಯೂರೋಪ್ ಮತ್ತು ಆಫ್ರಿಕಾ ಖಂಡಗಳ ಹಲವು ದೇಶಗಳಲ್ಲಿ ಹೊಮೊ ಸೇಪಿಯನ್ಸ್​, ನಿಯಾಂಡರ್ತಲ್ಸ್ ಮತ್ತು ಡೆನಿಸೊವಾನ್ಸ್​ ಮಾನವ ತಳಿಗಳಿದ್ದವು. ಹಲವೆಡೆ ಪರಸ್ಪರ ಸಹಬಾಳ್ವೆಯೂ ಕಂಡು ಬರುತ್ತಿತ್ತು ಎಂದು ಹಲವು ಸಂಶೋಧಕರು ಪ್ರತಿಪಾದಿಸಿದ್ದಾರೆ.

ಇಂದು ಜಗತ್ತಿನಲ್ಲೆಡೆ ಹರಡಿರುವ ಮನುಕುಲವು ಸುಮಾರು 3 ಲಕ್ಷ ವರ್ಷಗಳ ಹಿಂದೆ ವಿಕಸನಗೊಂಡ ಹೊಮೊ ಸೇಪಿಯನ್ಸ್​ ತಳಿಯ ಮುಂದುವರಿಕೆ ಎಂದೇ ತಳಿವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. ಈ ತಳಿಯ ವಿಕಸನಕ್ಕೆ ಆ ಕಾಲಘಟದಲ್ಲಿ ಆಫ್ರಿಕಾದಲ್ಲಿ ಆದ ಕೆಲ ನಾಟಕೀಯ ಹವಾಮಾನ ಬದಲಾವಣೆಗಳೇ ಕಾರಣ ಎಂದು ವಿಶ್ಲೇಷಿಸಲಾಗಿದೆ. ಜಗತ್ತಿನಿಂದ ಕಣ್ಮರೆಯಾದ ಮಾನವತಳಿಗಳ ಪೈಕಿ ಅತ್ಯಂತ ಈಚಿನದ್ದು ನಿಯಾಂಡರ್ತಲ್ಸ್​ (ಹೊಮೊ ನಿಯಾಂಡರ್ತಲ್ಸ್​) ಎನ್ನಲಾಗಿದೆ. ಸುಮಾರು 4 ಲಕ್ಷದಿಂದ 40 ಸಾವಿರ ವರ್ಷಗಳಷ್ಟು ಹಿಂದೆ ಯೂರೋಪ್ ಮತ್ತು ಮಧ್ಯ ಏಷ್ಯಾದಲ್ಲಿ ಈ ತಳಿಯ ಮಾನವರು ಕಂಡುಬರುತ್ತಿದ್ದರು. ಇಸ್ರೇಲ್​ನಲ್ಲಿ ಪತ್ತೆಯಾಗಿರುವ ಮಾನವ ತಳಿಯು 1.4 ಲಕ್ಷದಿಂದ 1.2 ಲಕ್ಷದಷ್ಟು ಹಿಂದಿನದ್ದು ಎಂದು ಸೈನ್ಸ್ ನಿಯತಕಾಲಿಕೆಯ ಲೇಖನ ಹೇಳುತ್ತದೆ.

ಹೊಮೊ ಸೆಪಿಯನ್ಸ್​ ಅಥವಾ ನಿಯಂಡರ್ತಲ್ಸ್​ಗೆ ಮಾತ್ರ ತಿಳಿದಿತ್ತು ಎಂದು ಈವರೆಗೆ ಭಾವಿಸಿದ್ದ ತಂತ್ರಜ್ಞಾನಗಳನ್ನೂ ಈ ನೆಶೆರ್ ರಮ್ಲಾ ಹೊಮೆ ತಳಿಯ ಮಾನವರು ಅಳವಡಿಸಿಕೊಂಡಿದ್ದರು. ದೊಡ್ಡ ಮತ್ತು ಸಣ್ಣ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡುತ್ತಿದ್ದರು. ಇಂಧನಕ್ಕಾಗಿ ಮರಮುಟ್ಟು ಬಳಸುತ್ತಿದ್ದರು. ಮಾಂಸವನ್ನು ಸುಟ್ಟು ಅಥವಾ ಹುರಿದು ತಿನ್ನುತ್ತಿದ್ದರು. ಚಳಿಯಿಂದ ರಕ್ಷಣೆಗೆ ಬೆಂಕಿ ಉಪಯೋಗಿಸುತ್ತಿದ್ದರು ಸಂಶೋಧನಾ ವರದಿಯು ಬೆಳಕು ಚೆಲ್ಲಿದೆ. ವಿವಿಧ ಮಾನವ ಕುಲಗಳ ನಡುವೆ ಸಾಂಸ್ಕೃತಿಕ ಮತ್ತು ತಂತ್ರಜ್ಞಾನದ ವಿನಿಮಯಗಳು ಇದ್ದವು ಎಂದು ಈ ಸಂಶೋಧನೆಗಳು ಸಾಬೀತುಪಡಿಸುತ್ತವೆ. ಈ ಕಾರಣಕ್ಕಾಗಿಯೂ ಈ ಎರಡೂ ಸಂಶೋಧನೆಗಳು ಮಹತ್ವ ಪಡೆದಿವೆ.

ಇದನ್ನೂ ಓದಿ: ಮೂವರು ಗಗನಯಾತ್ರಿಗಳನ್ನು ಹೊತ್ತು ಆಕಾಶಕ್ಕೆ ಹಾರಿದ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ

Dragon-Man-skull-China

ಚೀನಾದಲ್ಲಿ ಪತ್ತೆಯಾದ ತಲೆಬುರುಡೆ

ಮಾನವ ತಳಿ ಸಂಶೋಧನೆಯಲ್ಲಿ ಚೀನಾದ ಡ್ರ್ಯಾಗನ್​ ಮ್ಯಾನ್ ಸ್ಥಾನಮಾನವೇನು? ಚೀನಾದಲ್ಲಿ ಪತ್ತೆಯಾದ ತಲೆಬುರುಡೆಯ ಮೂಲ ಪುರುಷನನ್ನು ಡ್ರ್ಯಾಗನ್​ ಮ್ಯಾನ್ ಅಥವಾ ಹೊಮೊ ಲೊಂಗಿ ಎಂದು ಕರೆಯಲಾಗಿದೆ. ಚೀನಾದ ಹೈಲಾಂಗ್​ಜಿಯಾಂಗ್​ ಪ್ರಾಂತ್ಯದ ಲಾಂಗ್ ಜಿಯಾಂಗ್ ಅಥವಾ ಡ್ರ್ಯಾಗನ್​ ನದಿಯ ದಂಡೆಯಲ್ಲಿ ಪತ್ತೆಯಾದ ಕಾರಣಕ್ಕೆ ಈ ಹೆಸರು ನೀಡಲಾಯಿತು.

ಈ ತಳಿಯ ತಲೆಬುರುಡೆಯು ಮೊದಲ ಸಲ 1933ರಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ. ಸೊಂಘುವಾ ನದಿಗೆ ಸೇತುವೆ ಕಟ್ಟುವ ಪ್ರಯತ್ನದ ಸಂದರ್ಭದಲ್ಲಿ ಈ ಮಿದುಳು ಪತ್ತೆಯಾಗಿತ್ತು. ಅದಕ್ಕೂ ಮೊದಲು ಸಾವಿರಾರು ವರ್ಷಗಳವರೆಗೆ ಈ ತಲೆಬುರುಡೆಯು ನದಿಯ ಹೂಳಿನಲ್ಲಿ ಮುಚ್ಚಿಹೋಗಿತ್ತು. ವಿಶಿಷ್ಟ ಗಾತ್ರದ ಕಾರಣಕ್ಕೆ ಇದು ಹಲವರ ಗಮನ ಸೆಳೆದಿತ್ತು. ಪತ್ತೆಯಾದ ತಲೆಬುರುಡೆಯು ಪೂರ್ಣ ಪ್ರಮಾಣದಲ್ಲಿತ್ತು. ಇದನ್ನು ಗಮನಿಸಿದ್ದ ಬ್ರಿಟನ್​ನ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯದ (ನೇಚರ್ ಹಿಸ್ಟರಿ ಮ್ಯೂಸಿಯಂ) ತಜ್ಞರು ಈ ತಳಿಯನ್ನು ಗೆನಸ್ ಹೊಮೊ ಎಂದು ಕರೆಯಲು ಸಲಹೆ ನೀಡಿದ್ದರು.

ಈ ತಲೆಬುರುಡೆಯ ಗಾತ್ರ ಎಲ್ಲರ ಗಮನ ಸೆಳೆದಿದೆ. ಮಿದುಳಿನ ಸಾಮರ್ಥ್ಯವನ್ನು ಹೋಲಿಸಬಹುದಾದಲ್ಲಿ ಆಧುನಿಕ ಮಾನವರು ಮತ್ತು ನಿಯಂಡರ್ತಲ್ಸ್​ ತಳಿಯ ಮಾನವಕುಲದೊಂದಿಗೆ ಈ ತಲೆಬುರುಡೆಯನ್ನು ಹೋಲಿಸಬಹುದು. ಆಧುನಿಕ ಮಾನವರು ದೊಡ್ಡ ಮಿದುಳು ಹೊಂದಿದ್ದಾರೆ. ವಿವಿಧ ಜನಾಂಗಗಳು, ಪುರುಷರು ಮತ್ತು ಮಹಿಳೆಯರ ನಡುವೆ ಮಿದುಳುಗಳ ಗಾತ್ರವೂ ವ್ಯತ್ಯಾಸವಾಗುತ್ತದೆ. ಇದೀಗ ಅಸ್ತಿತ್ವದಲ್ಲಿರುವ ಮಾನವಕುಲದ ಮಿದುಳು 1,300 ಕ್ಯೂಬಿಕ್ ಸೆಂಟಿಮೀಟರ್​. ಸುಮಾರು 1,300ರಿಂದ 1,400 ಗ್ರಾಂ (1.3ರಿಂದ 1.4 ಕೆಜಿ) ತೂಕ ಇರುತ್ತದೆ. ಪ್ರಾಣಿ ಜಗತ್ತಿನಲ್ಲಿ ಮಿದುಳಿನ ಗಾತ್ರ ಮತ್ತು ತೂಕ ಕಡಿಮೆ. ಹೋಲಿಕೆಗೆ ಉದಾಹರಣೆ ನೀಡುವುದಾದರೆ ಬೆಕ್ಕಿನ ಮಿದುಳು ಗಮನಿಸಬಹುದು. ಬೆಕ್ಕಿನ ಮಿದುಳು ಕೇವಲ 30 ಗ್ರಾಮ್ ಇರುತ್ತದೆ.

ಈ ಸಂಶೋಧನೆಯ ಮಹತ್ವವೇನು? ಕೆಲ ಸಂಶೋಧಕರು ಇದನ್ನು ಹೊಮೊ ಸೆಪಿಯನ್​ಗಳ ವಿಕಸನದ ಮಾಹಿತಿ ದೃಷ್ಟಿಯಿಂದ ಮಹತ್ವದ್ದು ಎನ್ನುತ್ತಾರೆ. ಒಂದು ವೇಳೆ ಇದೀಗ ಪತ್ತೆಯಾಗಿರುವ ಡ್ರ್ಯಾಗನ್​ ಮ್ಯಾನ್ ತಳಿಯು ಹೊಸದು ಎಂದು ನಿರೂಪಿತವಾದರೆ, ಹೊಮೊ ಎರೆಕ್ಟಸ್ ಎನ್ನುವ ಪುರಾತನ ಮಾನವ ತಳಿಗೂ, ಇದೀಗ ಜೀವಂತ ಇರುವ ಮಾನವ ತಳಿಗೂ ನಡುವಣ ಅಂತರದಲ್ಲಿದ್ದು ನಾಪತ್ತೆಯಾದ ತಳಿಯೊಂದರ ಬಗ್ಗೆ ನಡೆಯುತ್ತಿರುವ ಹುಡುಕಾಟಕ್ಕೆ ಹೊಸ ವೇಗ ಸಿಕ್ಕಂತೆ ಆಗುತ್ತದೆ.

ವಿವಿಧ ಮಾನವ ತಳಿಗಳು ಹೇಗೆ ಸಂಬಂಧ ಹೊಂದಿದ್ದವು? ನಮಗೆ ಅತ್ಯಂತ ಹತ್ತಿರದ ಮಾನವ ತಳಿ ಯಾವುದು ಎಂಬ ಬಗ್ಗೆ ವೈಜ್ಞಾನಿಕ ಸಮುದಾಯದಲ್ಲಿ ಇನ್ನೂ ಗೊಂದಲಗಳು ಮುಂದುವರಿದಿವೆ. ಈ ನಿಟ್ಟಿನಲ್ಲಿ ಡ್ರ್ಯಾಗನ್​ ಮ್ಯಾನ್ ಹೆಸರಿನ ಮತ್ತೊಂದು ಮಾನವ ತಳಿ ಅಸ್ತಿತ್ವದಲ್ಲಿತ್ತು ಎಂದಾದರೆ ಅದಕ್ಕೆ ಸಾಕಷ್ಟು ಮಹತ್ವ ಬರುತ್ತದೆ.

ಕೆಲ ಪಳೆಯುಳಿಕೆಶಾಸ್ತ್ರಜ್ಞರು ಹೊಮೊ ಹೀಡೆಲ್​ಬರ್​ಗೆನಿಸ್ ತಳಿಯ ಮಾನವರು ನಮ್ಮ ತಕ್ಷಣದ ಪೂರ್ವಜರು ಎಂದು ಗುರುತಿಸಿರುವುದಾಗಿ ಸ್ಮಿತ್​ಸೊನಿಯನ್ ನಿಯತಕಾಲಿಕೆಯು ಬಹು ಹಿಂದೆಯೇ ದಾಖಲಿಸಿತ್ತು. ಹೊಮೊ ಹೀಡೆಲ್​ಬರ್​ಗೆನಿಸ್ ತಳಿಯ ಅಸ್ತಿತ್ವ 1908ರಲ್ಲಿ ಬೆಳಕಿಗೆ ಬಂದಿತ್ತು. ಸುಮಾರು 7ರಿಂದ 2 ಲಕ್ಷ ವರ್ಷಗಳಷ್ಟು ಹಿಂದೆ ಯೂರೋಪ್, ಆಫ್ರಿಕಾ ಮತ್ತು ಚೀನಾದಲ್ಲಿ ಇವರು ವಾಸಿಸುತ್ತಿದ್ದರು ಎಂದು ಹೇಳಲಾಗಿದೆ.

ನೆದರ್​ಲೆಂಡ್ ತಳಿ ಮತ್ತು ರೋಗ ನಿರೋಧಕ ಶಕ್ತಿ ಈ ಸಂಶೋಧನೆಯಲ್ಲಿ ಹಲವು ಉತ್ತರ ಸಿಗದ ಪ್ರಶ್ನೆಗಳೂ ಇವೆ. ವಿವಿಧ ಮಾನವ ತಳಿಗಳ ನಡುವೆ ಲೈಂಗಿಕ ಸಂಬಂಧ, ಸಂತಾನೋತ್ಪತ್ತಿ ಇತ್ತೆ ಎಂಬುದು ಇಂಥ ಪ್ರಶ್ನೆಗಳಲ್ಲಿ ಒಂದು. ಆಫ್ರಿಕನ್ ಅಲ್ಲದ ಮಾನವರ ಪೈಕಿ ನಾಲ್ವರಲ್ಲಿ ಒಬ್ಬರು ನೆದರ್​ಲೆಂಡ್​ ಮೂಲದ ವಂಶವಾಹಿ ತಂತುಗಳನ್ನು (ಡಿಎನ್​ಎ) ಹೊಂದಿವೆ.

ವಿವಿಧ ಮಾನವ ತಳಿಗಳ ನಡುವಣ ಸಂಪರ್ಕದಿಂದಲೇ ಹೊಮೊ ಸೇಪಿಯನ್ಸ್​ ಮಾವನ ತಳಿಯ ಅಸ್ವಿತ್ವ ಉಳಿಯುವ ಸಾಧ್ಯತೆ ಹೆಚ್ಚಾಯಿತು. ಇಂಥ ಕೆಲ ವಂಶವಾಹಿಗಳು ಇಂದಿನ ಮನುಷ್ಯರಲ್ಲೂ ಉಳಿದುಕೊಂಡಿವೆ. ನೆದರ್​ಲೆಂಡ್​ ಮೂಲಕ ವಂಶವಾಹಿಯಿಂದ ಮನುಷ್ಯರಲ್ಲಿ ರೋಗನಿರೋಧಕ ಶಕ್ತಿ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಜೀವ ಉಳಿಸಿಕೊಳ್ಳುವ, ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ ಬಂತು ಎಂದು ಬ್ರಿಟನ್​ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಉಲ್ಲೇಖಿಸುತ್ತದೆ.

(Dragon Man Skull Found in China Explains Human Species History in a New Angle)

ಇದನ್ನೂ ಓದಿ: ಗಾಲ್ವಾನ್ ಸಂಘರ್ಷದ ನಂತರ ಇನ್ನೂ ಸಿದ್ಧತೆ ಮತ್ತು ತರಬೇತಿ ಅಗತ್ಯವಿದೆ ಎಂದು ಚೀನಾ ಸೇನೆ ಅರಿತುಕೊಂಡಿದೆ: ಜನರಲ್ ಬಿಪಿನ್ ರಾವತ್

ಇದನ್ನೂ ಓದಿ: ಮೂವರು ಗಗನಯಾತ್ರಿಗಳನ್ನು ಹೊತ್ತು ಆಕಾಶಕ್ಕೆ ಹಾರಿದ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ

Published On - 7:18 pm, Sun, 27 June 21

ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ