ಮೂವರು ಗಗನಯಾತ್ರಿಗಳನ್ನು ಹೊತ್ತು ಆಕಾಶಕ್ಕೆ ಹಾರಿದ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ

ಮೂವರು ಗಗನಯಾತ್ರಿಗಳು ಮೂರು ತಿಂಗಳುಗಳ ಕಾಲ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ ಎಂಬುದರ ಕುರಿತಾಗಿ ಸಿಎಮ್​ಎಸ್​ಎ ನಿರ್ದೇಶಕ​ ಉಡಾವಣಾ ಕೇಂದ್ರಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.

ಮೂವರು ಗಗನಯಾತ್ರಿಗಳನ್ನು ಹೊತ್ತು ಆಕಾಶಕ್ಕೆ ಹಾರಿದ ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ
Follow us
TV9 Web
| Updated By: shruti hegde

Updated on:Jun 17, 2021 | 1:35 PM

ಹೊಸದಾಗಿ ನಿರ್ಮಿಸುತ್ತಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಮೂವರು ಗಗನಯಾತ್ರಿಗಳನ್ನು ಹೊತ್ತ ಚೀನಾದ ರಾಕೆಟ್​ ಗುರುವಾರ ಬೆಳಿಗ್ಗೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಚೀನಾದ ಮೊದಲ ಮಾನವ ಸಹಿತ ಬಾಹ್ಯಾಕಾಶಕ್ಕೆ ಇಬ್ಬರು ಅನುಭವಿ ಹಾಗೂ ಮತ್ತೋರ್ವ ಹೊಸ ಗಗನಯಾತ್ರಿ ತಲುಪಿದ್ದಾರೆ. ನಿಯೆ ಹೈಶೆಂಗ್​, ಲಿಯು ಬೋಮಿಂಗ್​ ಮತ್ತು ಟ್ಯಾಂಗ್​ ಹಾಂಗ್ಬೊ ಎಂಬ ಮೂವರು ಗಗನಯಾತ್ರಿಗಳನ್ನು ಹೊತ್ತ ಶೆನ್​ಶಾವ್​-12 ಆಕಾಶನೌಕೆ​ ಗುರುವಾರ ಬೆಳಿಗ್ಗೆ ಸರಿಸುಮಾರು 9:22ರ ಸಮಯಕ್ಕೆ ಉಡಾವಣೆಗೊಂಡಿದೆ.

ಬಾಹ್ಯಾಕಾಶದಲ್ಲಿ ಹೊಸದಾದ ಮೈಲುಗಲ್ಲು ಸಾಧಿಸುವ ಉದ್ದೇಶದಿಂದಾಗಿ ಈ ಮೂವರು ಗಗನಯಾತ್ರಿಗಳನ್ನು ಕಳುಹಿಸಿಕೊಡುವುದಾಗಿ ಚೀನಾ ಮ್ಯಾನ್ಡ್​ ಸ್ಪೇಸ್​ ಏಜಿನ್ಸಿ ಈ ಹಿಂದೆ ಹೇಳಿತ್ತು. ಹಾಗೆಯೇ ಮೂವರು ಗಗನಯಾತ್ರಿಗಳ ಪರಿಚಯವನ್ನು ಕೂಡಾ ಮಾಡಿಕೊಟ್ಟಿತ್ತು. ಆ ಸಂದರ್ಭದಲ್ಲಿ ಗಗನಯಾತ್ರಿ ನಿಯೆ ಹೈಶೆಂಗ್​​ ಅವರು ಮಾತನಾಡಿ, ಈ ಯೋಜನೆಯು ಸವಾಲಿನದ್ದಾಗಿದೆ. ನಾವು ಮೂವರು ಕೂಡಿ ಸವಾಲುಗಳನ್ನು ಎದುರಿಸಿ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದರು.

2008ರಲ್ಲಿ ಸ್ಪೇಸ್​ ವಾಕ್​ ಮಾಡಿದ ಮೊದಲ ಚೀನಾದ ಗಗನಯಾತ್ರಿ ಲಿಯು ಬೋಮಿಂಗ್​ ಮಾತನಾಡಿ, ಹಲವು ಬಾರಿ ಸ್ಪೇಸ್​ ವಾಕ್​ ಮಾಡಲು ಅವಕಾಶ ಸಿಗಲಿದೆ. ಮುಂದಿನ ವರ್ಷ ಚೀನಾ ಬಾಹ್ಯಾಕಾಶ ಸಂಸ್ಥೆ ಕಳುಹಿಸಲಿರುವ ಎರಡು ಮಾಡ್ಯೂಲ್​ಗಳನ್ನು ಜೋಡಿಸುವ ಸಿದ್ಧತೆಯನ್ನು ಮಾಡಬೇಕಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದರು. ಹೊಸಬರಾದ ಟ್ಯಾಂಗ್​​ ಹಾಂಗ್ಬೊ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳಿದ್ದಾರೆ. ಕಳೆದ ಹಲವು ವರ್ಷಗಳಿಂದ ತರಬೇತಿಯನ್ನು ಪಡೆದಿದ್ದೇನೆ ನನ್ನ ತಂಡದ ಮೇಲೆ ಸಂಪೂರ್ಣವಾದ ವಿಶ್ವಾಸ ನನಗಿದೆ ಎಂದು ಮಾತನಾಡಿದ್ದರು.

ಈ ಮೂವರು ಗಗನಯಾತ್ರಿಗಳು ಮೂರು ತಿಂಗಳುಗಳ ಕಾಲ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ ಎಂಬುದರ ಕುರಿತಾಗಿ ಸಿಎಮ್​ಎಸ್​ಎ ನಿರ್ದೇಶಕ​ ಉಡಾವಣಾ ಕೇಂದ್ರಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅಮೇರಿಕ ಮತ್ತು ರಷ್ಯಾ ಬಳಿಕ ಸ್ವಂತ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳನ್ನು ಕಳುಹಿಸಿಕೊಟ್ಟ ಮೂರನೇ ದೇಶ ಚೀನಾವಾಗಿದೆ. ಈ ಹಿಂದೆ 2003ರಲ್ಲಿ ಗಗನಯಾತ್ರಿಗಳನ್ನು ಕಳುಹಿಸಿಕೊಟ್ಟಿತ್ತು.

ಇದನ್ನೂ ಓದಿ:

Jeff Bezos: ಬಾಹ್ಯಾಕಾಶಕ್ಕೆ ಸೈಟ್​ ಸೀಯಿಂಗ್​ಗೆ ಹೊರಟಿದ್ದಾರೆ ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್, ನೀವೂ ಜತೆಯಾಗಬಹುದು!

ವಿದ್ಯಾಬ್ಯಾಸಕ್ಕೆಂದು ವಿದೇಶಕ್ಕೆ ತೆರಳಿದ ಯುವಕ ಬಾಹ್ಯಾಕಾಶ ಇಂಜಿನಿಯರ್​ ಆಗಿ ವಾಪಸ್: ಭವ್ಯ ಸ್ವಾಗತ ಕೋರಿದ ಗ್ರಾಮಸ್ಥರು

Published On - 1:32 pm, Thu, 17 June 21