AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ನೀರು ಕೇಳಿದ್ದಕ್ಕೆ ಕೋಕ ಕೋಲಾದ 29 ಸಾವಿರ ಕೋಟಿಗೂ ಹೆಚ್ಚು ಮೌಲ್ಯ ಖಲಾಸ್

ಪೋರ್ಚುಗೀಸ್​ನ ಫುಟ್​ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ನೀರು ಕೇಳಿದ ಕಾರಣಕ್ಕೆ ಕೋಕ ಕೋಲ ಕಂಪೆನಿಯ ಬ್ರ್ಯಾಂಡ್​ ಮೌಲ್ಯಕ್ಕೆ ಬೆಂಕಿ ಕಿಡಿ ತಾಗಿದೆ. 29 ಸಾವಿರ ಕೋಟಿ ರೂ. ನಷ್ಟವಾಗಿದೆ. ಏನಿದೆಲ್ಲ ಎಂದು ವಿವರಿಸುವ ಲೇಖನ ಇಲ್ಲಿದೆ.

Cristiano Ronaldo: ಕ್ರಿಸ್ಟಿಯಾನೋ ರೊನಾಲ್ಡೊ ನೀರು ಕೇಳಿದ್ದಕ್ಕೆ ಕೋಕ ಕೋಲಾದ 29 ಸಾವಿರ ಕೋಟಿಗೂ ಹೆಚ್ಚು ಮೌಲ್ಯ ಖಲಾಸ್
ಪತ್ರಿಕಾಗೋಷ್ಠಿ ವೇಳೆ ಕ್ರಿಸ್ಟಿಯಾನೋ ರೊನಾಲ್ಡೊ
TV9 Web
| Edited By: |

Updated on: Jun 16, 2021 | 9:14 PM

Share

ಸ್ಟಾರ್​ಡಮ್ ಅಥವಾ ತಾರಾಪಟ್ಟ ಅಂತ ಏನು ಕರೆಯಲಾಗುತ್ತೆ ಅದರ ಬಗ್ಗೆ ಈ ವರದಿಯಲ್ಲಿ ನಿಮಗೆ ಗೊತ್ತಾಗುತ್ತದೆ. ಫುಟ್​ಬಾಲ್ ಸ್ಟಾರ್​ ಕ್ರಿಸ್ಟಿಯಾನೋ ರೊನಾಲ್ಡೊ ಮಾಡಿದ ಇದೊಂದು ಕೆಲಸಕ್ಕೆ ಆ ಬ್ರ್ಯಾಂಡ್​ನ ಮೌಲ್ಯಕ್ಕೇ ಪೆಟ್ಟು ಬಿದ್ದಿದೆ. ಅಸಲಿಗೆ ಆಗಿದ್ದೇನು ಗೊತ್ತಾ? ಪೋರ್ಚುಗೀಸ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಯುರೋ 2020 ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅವರ ಮುಂಭಾಗ ಕೋಕ ಕೋಲಾ ಬಾಟಲಿಗಳನ್ನು ಇಡಲಾಗಿತ್ತು. ಕಾರ್ಬೊನೇಟೆಡ್ ಸಾಫ್ಟ್​ ಡ್ರಿಂಕ್ಸ್​ಗಳನ್ನು ಇಷ್ಟಪಡದ ರೊನಾಲ್ಡೊ, ಆ ಎರಡು ಬಾಟಲಿಗಳನ್ನು ಅಲ್ಲಿಂದ ತೆಗೆಸಿ, ಅದರ ಬದಲಿಗೆ ನೀರು ಕುಡಿಯಿರಿ ಎಂದು ಜನರನ್ನು ಉತ್ತೇಜಿಸಿದರು. ಗ್ರೂಪ್ ಎಫ್​ ವಿಭಾಗದ ತಮ್ಮ ಉದ್ಘಾಟನಾ ಪಂದ್ಯವನ್ನು ಹಂಗೇರಿ ವಿರುದ್ಧ ಆಡುವ ಮುನ್ನ ಮಾಧ್ಯಮಗಳ ಎದುರು ಅವರು ಮಾತನಾಡಿದರು. ಹಾಗೆ ಮಾಡುವ ಮೊದಲಿಗೆ ತಮ್ಮ ಎದುರಿಗೆ ಇದ್ದ ಕೋಕ ಕೋಲಾ ಬಾಟಲಿಗಳನ್ನು ತೆಗೆಸಿದ್ದರಿಂದ ಈಗ ಆ ಬ್ರ್ಯಾಂಡ್​ಗೆ ದೊಡ್ಡ ನಷ್ಟವಾಗಿದೆ. ನೀರಿನ ಬಾಟಲಿಯನ್ನು ಕೈಲಿ ಹಿಡಿದು, ಪೋರ್ಚುಗೀಸ್​ನಲ್ಲಿ Agua! ಎಂದು ಕೂಗಿದ್ದಾರೆ.

ಅಸಲಿಗೆ CR7 ನಿರ್ಬಂಧವು ಕೋಕ ಕೋಲಾದ ಮೇಲೆ ನಿಜವಾದ ಪ್ರಭಾವ ಬೀರಿತು. ಆ ಕಂಪೆನಿಯ ಷೇರು ಶೇ 1.6ರಷ್ಟು ಇಳಿಕೆ ಕಾಣಲು ಕಾರಣವಾಯಿತು. ಆ ಮೂಲಕ ಕಂಪೆನಿಯ ಮೌಲ್ಯ 242 ಬಿಲಿಯನ್​ ಯುಎಸ್​ಡಿಯಿಂದ 238 ಬಿಲಿಯನ್ ಯುಎಸ್​ಡಿಗೆ ಕುಸಿಯಿತು. ಆ ಮೂಲಕ 400 ಕೋಟಿ ಅಮೆರಿಕನ್ ಡಾಲರ್ ನಷ್ಟ ಆಯಿತು. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 29,200 ಕೋಟಿಗೂ ಹೆಚ್ಚು.

36 ವರ್ಷದ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ದಾಖಲೆಗಳನ್ನು ವಿಸ್ತರಿಸಿಕೊಂಡಿದ್ದಾರೆ. ಐದು ಪ್ರತ್ಯೇಕ ಯುರೋ ಫೈನಲ್​ಗಳಲ್ಲಿ ಅಂಕ ಪಡೆದ ದಾಖಲೆ ಅವರ ಹೆಸರಲ್ಲಿದೆ. ಜತೆಗೆ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ದಾಖಲೆ, 2004ರ ಆರಂಭದಿಂದ ಹಂಗೇರಿ ಎದುರಿನ ತನಕ 22 ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಪತರಗುಟ್ಟಿದ ಅದಾನಿ ಕಂಪನಿಯ ಷೇರು ಬೆಲೆ; ಮೂರು ಗಂಟೆಯಲ್ಲಿ 92 ಸಾವಿರ ಕೋಟಿ ರೂ ಗಂಟು ನಷ್ಟ

(Football player Cristiano Ronaldo removed Coca- Cola bottle during press meet. After that company share value down by 4 billion USD)

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್