2019ರಲ್ಲಿ ಯಾವ ದೇಶದಿಂದ ಅತಿ ಶ್ರೀಮಂತರು ಹೆಚ್ಚು ಆಚೆ ಹೋಗಿದ್ದಾರೆ ಗೊತ್ತಾ? ಇಲ್ಲಿದೆ ಟಾಪ್ 10 ಪಟ್ಟಿ
High Net Worth Individuals: 2019ರಲ್ಲಿ ಯಾವ ದೇಶಗಳಿಂದ ಅತಿ ಸಿರಿವಂತರು ಹೆಚ್ಚಿನ ಸಂಖ್ಯೆಯಲ್ಲಿ ಹೊರಹೋಗಿದ್ದಾರೆ? ಆ ಬಗ್ಗೆ ಈ ವರದಿಯಲ್ಲಿದೆ ಆಸಕ್ತಿಕರವಾದ ಅಂಕಿ- ಅಂಶ.
ವಿಶ್ವದ ಯಾವ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅತಿ ಸಿರಿವಂತರು (High Net Worth Individuals) 2019ರಲ್ಲಿ ಬೇರೆ ಕಡೆಗೆ ಶಾಶ್ವತವಾಗಿ ವಲಸೆ ಹೋಗಿದ್ದಾರೆ ಗೊತ್ತಾ? ಆ ಬಗ್ಗೆ ಆಸಕ್ತಿಕರವಾದ ಅಂಕಿ- ಅಂಶಗಳು ಇಲ್ಲಿವೆ. ಯಾವ ಉದ್ದೇಶದಿಂದ ಆ ದೇಶಗಳಿಂದ ಹೊರ ಹೋಗಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಇಲ್ಲ. ಆದರೆ ಆ ದೇಶದ ಒಟ್ಟಾರೆ ಅತಿ ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿರುವ ಸಂಖ್ಯೆಯನ್ನು ಆಧರಿಸಿ, ಶೇಕಡಾವಾರು ಲೆಕ್ಕಾಚಾರವನ್ನೂ ನಿಮ್ಮ ಮುಂದಿಡಲಾಗಿದೆ. ವಿಶ್ವದ ಟಾಪ್ ಟೆನ್ ದೇಶಗಳನ್ನು ಇಲ್ಲಿ ಹೆಸರಿಸಲಾಗಿದೆ.
1. ಚೀನಾ: 16,000 -2% 2. ಭಾರತ: 7,000 -2% 3. ರಷ್ಯಾ: 5,500 -6% 4. ಹಾಂಕಾಂಗ್: 4,200 -3% 5. ಟರ್ಕಿ: 2,100 -8% 6. ಯು.ಕೆ: 2,000 +/-0% 7. ಫ್ರಾನ್ಸ್: 1,800 -1% 8. ಬ್ರೆಜಿಲ್: 1,400 -1% 9. ಸೌದಿ ಅರೇಬಿಯಾ: 1,200 -3% 10. ಇಂಡೋನೇಷ್ಯಾ: 1,000 -3%
High Net Worth Individuals ಅಂದರೆ ಯಾರು, ಅದಕ್ಕೆ ಏನಾದರೂ ಮಾನದಂಡಗಳು ಇವೆಯಾ? ಈ ಬಗ್ಗೆ ಆರ್ಥಿಕ ಜಗತ್ತು ಏನು ಹೇಳುತ್ತದೆ ಅಂತ ನೋಡಿದರೆ ಅದಕ್ಕೆ ಉತ್ತರ ದೊರೆಯುತ್ತದೆ. ಮೊದಲಿಗೆ ನೆಟ್ವರ್ತ್ ಅಂದರೆ ನಿವ್ವಳ ಮೌಲ್ಯ, ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಅಂತ ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯ ಆಸ್ತಿ ಮೌಲ್ಯದಿಂದ, ಸಾಲದ ಮೊತ್ತವನ್ನು ಕಳೆದರೆ ಉಳಿಯುವುದೇ ನಿವ್ವಳ ಮೌಲ್ಯ ಅಥವಾ ನೆಟ್ವರ್ತ್. High Net Worth Individuals ಅನ್ನು ಅಳೆಯುವುದು ಒಬ್ಬ ವ್ಯಕ್ತಿಯ ಬಳಿಯ ಎಷ್ಟು ಲಿಕ್ವಿಡ್ ಅಸೆಟ್ ಇದೆ ಎಂಬುದರ ಮೇಲೆ ಮಾತ್ರ. ಆ ವ್ಯಕ್ತಿಗೆ ಬ್ಯಾಂಕ್ ಖಾತೆಯಲ್ಲಿ ಅಥವಾ ಬ್ರೋಕರೇಜ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದು ಮುಖ್ಯವಾಗುತ್ತದೆ. ಇದರಲ್ಲಿ ಮನೆಯಾಗಲೀ ಮತ್ಯಾವುದಾದರೂ ಆಸ್ತಿ- ಪಾಸ್ತಿ, ವಸ್ತುಗಳಾಗಲೀ ಗಣನೆಗೆ ತೆಗೆದುಕೊಳ್ಳಲ್ಲ.
ಯಾರ ಬಳಿ ಹೀಗೆ ಹೂಡಿಕೆ ಮಾಡಬಹುದಾದ ನಗದು 1 ಮಿಲಿಯನ್ ಯುಎಸ್ಡಿಯಿಂದ 5 ಮಿಲಿಯನ್ ಯುಎಸ್ಡಿ ಇರುತ್ತದೋ ಅಂಥವರು High Net Worth Individuals (HNWIs).
ಯಾರ ಬಳಿ ಲಿಕ್ವಿಡ್ ಅಸೆಟ್ಸ್ 5 ಮಿಲಿಯನ್ ಯುಎಸ್ಡಿಯಿಂದ 30 ಮಿಲಿಯನ್ ಯುಎಸ್ಡಿ ಮಧ್ಯೆ ಇರುತ್ತದೋ ಅಂಥವರು Very High Net Worth Individuals (VHNWIs).
ಇನ್ನು ಯಾರ ಬಳಿ 30 ಮಿಲಿಯನ್ ಡಾಲರ್ಗೂ ಹೆಚ್ಚು ನಗದು ಇರುತ್ತದೋ ಅಂಥವರು Ultra High Net Worth Individuals (UHNWIs).
ಭಾರತದ ಲೆಕ್ಕಾಚಾರದಲ್ಲಿ ನಿಮಗೆ ಸರಳವಾಗಿ ವಿವರಿಸುವ ಪ್ರಯತ್ನ ಮಾಡುವುದಾದರೆ, ಯಾವ ವ್ಯಕ್ತಿಗೆ ಇವತ್ತಿಗೆ ತನ್ನ ಸಾಲವನ್ನು ತೀರಿಸಿದ ಮೇಲೂ ಮನೆ, ಆಸ್ತಿ- ಪಾಸ್ತಿ, ವಸ್ತು, ವಾಹನಗಳನ್ನು ಹೊರತಪಡಿಸಿದಂತೆ ಇವತ್ತಿಗೆ ಕನಿಷ್ಠ 7,33,78,500 (7.34 ಕೋಟಿ) ರೂಪಾಯಿ ನಗದು ಇರುತ್ತದೋ ಅವರು High Net Worth Individuals.
ಇದನ್ನೂ ಓದಿ: Bernard Arnault: ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್
ಇದನ್ನೂ ಓದಿ: Forbes Richest Billionaires List: ಸತತ ನಾಲ್ಕನೇ ವರ್ಷ ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ಬೆಜೋಸ್ ನಂಬರ್ 1 ಶ್ರೀಮಂತ
(Here is the list of top 10 countries or territories from where highest number of High Net Worth Individuals (HNWIs) emigrate in 2019)
Published On - 1:00 pm, Wed, 16 June 21