AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕದನ ವಿರಾಮ ಒಪ್ಪಂದದ ಬಳಿಕ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್​

ಕೆಲವು ದಿನಗಳ ಹಿಂದಷ್ಟೇ 12 ವರ್ಷಗಳ ಬೆಂಜಮಿನ್​ ನೆತನ್ಯಾಹು ಅವರ ಅಧಿಕಾರ ಕೊನೆಗೊಂಡಿತು. ಇಸ್ರೇಲ್​ನಲ್ಲಿ ನೆತನ್ಯಾಹು ಸರಕಾರದ ಬಳಿಕ ಹೊಸ ಸರ್ಕಾರ ಬಂದ ಕೂಡಲೇ ಈ ದಾಳಿ ನಡೆದಿದೆ.

ಕದನ ವಿರಾಮ ಒಪ್ಪಂದದ ಬಳಿಕ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್​
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jun 16, 2021 | 10:40 AM

Share

ಜೆರುಸಲೆಂ: ಗಾಜಾದಲ್ಲಿ ಪ್ಯಾಲೆಸ್ತೀನಿಯರು ಬೆಂಕಿ ಹಚ್ಚುವ ಆಕಾಶಬುಟ್ಟಿಗಳನ್ನು ಹಾರಿಸಿದ ಬಳಿಕ ಇಸ್ರೇಲ್​ ವಾಯುಪಡೆ ಬುಧವಾರ ಗಾಜಾ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿದೆ. ಮೇ 21ರಂದು ನಡೆದ ಕದಮ ವಿರಾಮದ ಒಪ್ಪಂದದ ಬಳಿಕ ಮೊದಲ ದಾಳಿ ಇದಾಗಿದೆ. ಕಳೆದ ಮೇ ತಿಂಗಳಿನಲ್ಲಿ ಇಸ್ರೇಲ್​ ಮತ್ತು ಪ್ಯಾಲೆಸ್ತೀನಿಯರ ನಡುವೆ 11 ದಿನಗಳ ಕಾಲ ಸಮರ ನಡೆದಿತ್ತು. ಕಾಳಗದಲ್ಲಿ ಇಸ್ರೇಲ್​ನ 13 ಮಂದಿ ಹಾಗೂ ಪ್ಯಾಲೆಸ್ತೀನಿಯರು 260 ಮಂದಿ ಸಾವಿಗೀಡಾಗಿದ್ದರು.

ಇಂದು ನಡೆದ ಕಾಳಗದಲ್ಲಿ ಇಸ್ರೇನ್​ನ ವಾಯುಪಡೆ ಗಾಜಾ ನಗರವಾದ ಖಾನ್​ ಯೂನೆಸ್​ನ ಪೂರ್ವ ಭಾಗವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ದಾಳಿಯಲ್ಲಿ, 66 ಮಕ್ಕಳು ಸೇರಿದಂತೆ 253 ಜನ ಪ್ಯಾಲೆಸ್ತೀನಿಯರು ಹಾಗೂ 5 ವರ್ಷದ ಬಾಲಕ ಮತ್ತು ಸೈನಿಕರು ಸೇರಿದಂತೆ 13 ಜನ ಇಸ್ರೇಲಿಯನ್ನರು ಸಾವಿಗೀಡಾಗಿದ್ದಾರೆ.

ಖಾನ್​ ಯೂನೆಸ್​ನಲ್ಲಿನ ಭಯೋತ್ಪಾದಕರಿಗೆ ಸೌಲಭ್ಯಗಳನ್ನು ಒದಗಿಸುವ ಜತೆಗೆ ಸಭೆಗಳು ನಡೆಯುತ್ತಿದ್ದ ಸ್ಥಳವನ್ನು ಗುರುಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ 12 ವರ್ಷಗಳ ಬೆಂಜಮಿನ್​ ನೆತನ್ಯಾಹು ಅವರ ಅಧಿಕಾರ ಕೊನೆಗೊಂಡಿತು. ಇಸ್ರೇಲ್​ನಲ್ಲಿ ನೆತನ್ಯಾಹು ಸರಕಾರದ ಬಳಿಕ ಹೊಸ ಸರ್ಕಾರ ಬಂದ ಕೂಡಲೇ ಈ ದಾಳಿ ನಡೆದಿದೆ.

ಇದನ್ನೂ ಓದಿ:

ಇಸ್ರೇಲ್: ರಾಜಕೀಯದ ಗೊಂದಲಕ್ಕೆ ಮೈತ್ರಿಯ ಮುಲಾಮು, ಸರ್ಕಾರದ ಭಾಗವಾದ ಅರಬ್ ಪಕ್ಷ

ಇಸ್ರೇಲ್​ ನೂತನ ಪ್ರಧಾನಿ ನಫ್ತಾಲಿ ಬೆನೆಟ್​​ರಿಗೆ ಅಭಿನಂದನೆ, ಮಾಜಿ ಪ್ರಧಾನಿ ಬೆಂಜಮಿನ್​ ನೆತನ್ಯಾಹೂರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ

Published On - 10:38 am, Wed, 16 June 21

Follow Us
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ
ಮಡಿಕೇರಿಯ ಸ್ಟೋನ್ ಹಿಲ್‌ನಲ್ಲಿ ಭೂಕುಸಿತ
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ಬೆಂಗಳೂರಿಗರೇ ಎಚ್ಚರ: ಮನೆಗೆ ಕನ್ನ ಹಾಕಲು ಎಂಟ್ರಿ ಕೊಟ್ಟಿದೆ ಚಡ್ಡಿ ಗ್ಯಾಂಗ್
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು
ರಾಧಿಕಾ ಪಂಡಿತ್ ಯಶ್ ಅವರ ಅತಿ ದೊಡ್ಡ ಶಕ್ತಿ; ನಯನತಾರಾ ಭಾವುಕ ಮಾತು
ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಡಿಕೆಶಿ!
ಅಧಿವೇಶನಕ್ಕೂ ಮುನ್ನ ಖಾತೆ ಹಂಚಿಕೆಯಾಗದಿದ್ರೆ ಏನ್ಮಾಡ್ತಾರಂತೆ ಡಿಕೆಶಿ!