ಇಸ್ರೇಲ್ ನೂತನ ಪ್ರಧಾನಿ ನಫ್ತಾಲಿ ಬೆನೆಟ್ರಿಗೆ ಅಭಿನಂದನೆ, ಮಾಜಿ ಪ್ರಧಾನಿ ಬೆಂಜಮಿನ್ ನೆತನ್ಯಾಹೂರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ
Narendra Modi: ಇಬ್ಬರೂ ನಾಯಕರಿಗೂ ಟ್ವೀಟ್ ಮೂಲಕವೇ ಅಭಿನಂದನೆ, ಕೃತಜ್ಞತೆ ಸಲ್ಲಿಸಿ, ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಸ್ಮರಿಸಿದ್ದಾರೆ.
ಜೆರುಸೇಲಂ: ಇಸ್ರೇಲ್ನ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಫ್ತಾಲಿ ಬೆನೆಟ್ರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ ಹಿಂದಿನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಬ್ಬರೂ ನಾಯಕರಿಗೂ ಟ್ವೀಟ್ ಮೂಲಕವೇ ಅಭಿನಂದನೆ, ಕೃತಜ್ಞತೆ ಸಲ್ಲಿಸಿ, ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸ್ಮರಿಸಿದ್ದಾರೆ.
ಇಸ್ರೇಲ್ನ ನೂತನ ಪ್ರಧಾನಮಂತ್ರಿ ನಫ್ತಾಲಿ ಬೆನೆಟ್ರಿಗೆ ಅಭಿನಂದನೆಗಳು. ಭಾರತ-ಇಸ್ರೇಲ್ ರಾಜತಾಂತ್ರಿಕ ಸಂಬಂಧದ ಉನ್ನತೀಕರಣದ 30ನೇ ವರ್ಷವನ್ನು ಮುಂದಿನ ವರ್ಷ ನಾವು ಆಚರಿಸಲಿದ್ದೇವೆ. ಆ ಹೊತ್ತಲ್ಲಿ ನಿಮ್ಮನ್ನು ಭೇಟಿಯಾಗಲು ಮತ್ತು ನಮ್ಮೆರಡು ದೇಶಗಳ ನಡುವಿನ ಕಾರ್ಯತಂತ್ರವನ್ನು ವಿಸ್ತರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಹಾಗೇ ಇನ್ನೊಂದು ಟ್ವೀಟ್ ಮೂಲಕ ಬೆಂಜಮಿನ್ ನೆತನ್ಯಾಹುರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇಸ್ರೇಲ್ನ ಪ್ರಧಾನಿಯಾಗಿ, ಯಶಸ್ವಿಯಾಗಿ ನಿಮ್ಮ ಅಧಿಕಾರ ಅವಧಿಯನ್ನು ಸಂಪೂರ್ಣಗೊಳಿಸಿದ್ದೀರಿ. ಭಾರತ-ಇಸ್ರೇಲ್ ರಾಷ್ಟ್ರಗಳ ಕಾರ್ಯತಂತ್ರ ಸಹಭಾಗಿತ್ವದ ಬಗ್ಗೆ ನಿಮಗೆ ವೈಯಕ್ತಿಕವಾಗಿ ಇದ್ದ ವಿಶೇಷ ಗಮನ ಮತ್ತು ನೀವದನ್ನು ಮುನ್ನಡೆಸಿದ ರೀತಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಬೆಂಜಮಿನ್ ನೇತನ್ಯಾಹೂ ಅವರ 12 ವರ್ಷದ ಅವಧಿ ನಿನ್ನೆಗೆ ಮುಗಿದು, ಇಂದು ಬೆಳಗ್ಗೆ ಇಸ್ರೇಲ್ನಲ್ಲಿ ನಫ್ತಾಲಿ ಬೆನೆಟ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆನೆಟ್, ನೇತನ್ಯಾಹೂ ಅವರ ಮಾಜಿ ಮಿತ್ರನೇ ಆಗಿದ್ದಾರೆ.
Excellency @naftalibennett, congratulations on becoming the Prime Minister of Israel. As we celebrate 30 years of the upgradation of diplomatic relations next year, I look forward to meeting you and deepening the strategic partnership between our two countries. @IsraeliPM
— Narendra Modi (@narendramodi) June 14, 2021
As you complete your successful tenure as the Prime Minister of the State of Israel, I convey my profound gratitude for your leadership and personal attention to India-Israel strategic partnership @netanyahu.
— Narendra Modi (@narendramodi) June 14, 2021
ಇದನ್ನೂ ಓದಿ: ಷೇರುಪೇಟೆಯಲ್ಲಿ ಪತರಗುಟ್ಟಿದ ಅದಾನಿ ಕಂಪನಿಯ ಷೇರು ಬೆಲೆ; ಮೂರು ಗಂಟೆಯಲ್ಲಿ 92 ಸಾವಿರ ಕೋಟಿ ರೂ ಗಂಟು ನಷ್ಟ
(PM Narendra Modi congratulates Israel Prime Minister Naftali Bennet)
Published On - 3:13 pm, Mon, 14 June 21