ಪಾಕಿಸ್ತಾನದ ಪೊಲೀಸ್​ ಠಾಣೆಯಲ್ಲಿ ಆತ್ಮಾಹುತಿ ದಾಳಿ, ನಾಲ್ವರು ಸಾವು, 28 ಮಂದಿಗೆ ಗಾಯ

ಪಾಕಿಸ್ತಾನದ ಪೊಲೀಸ್​ ಠಾಣೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಪರಿಣಾಮ ನಾಲ್ವರು ಗಾಯಗೊಂಡಿದ್ದು, 28 ಮಂದಿಗೆ ಗಂಭೀರ ಗಾಯಗಳಾಗಿವೆ.

ಪಾಕಿಸ್ತಾನದ ಪೊಲೀಸ್​ ಠಾಣೆಯಲ್ಲಿ ಆತ್ಮಾಹುತಿ ದಾಳಿ, ನಾಲ್ವರು ಸಾವು, 28 ಮಂದಿಗೆ ಗಾಯ
Image Credit source: Hindustan Times

Updated on: Dec 12, 2023 | 11:54 AM

ಪಾಕಿಸ್ತಾನದ ಪೊಲೀಸ್​ ಠಾಣೆಯಲ್ಲಿ ಆತ್ಮಾಹುತಿ  ದಾಳಿ ನಡೆದಿದ್ದು, ಪರಿಣಾಮ ನಾಲ್ವರು ಗಾಯಗೊಂಡಿದ್ದು, 28 ಮಂದಿಗೆ ಗಂಭೀರ ಗಾಯಗಳಾಗಿವೆ. ಭದ್ರತಾ ಪಡೆಗಳು ಮತ್ತು ಇತರ ಉಗ್ರರ ನಡುವಿನ ಗುಂಡಿನ ಚಕಮಕಿ ಇನ್ನೂ ಮುಂದುವರೆದಿದೆ, ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ದಾಳಿ ನಡೆದಿದೆ. ದೇಶದಲ್ಲಿ ಹೊಸದಾಗಿ ರೂಪುಗೊಂಡ ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾದ ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನವು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಉಗ್ರರು ಸ್ಫೋಟಕ ತುಂಬಿದ ವಾಹನವನ್ನು ಪೊಲೀಸ್ ಠಾಣೆಯ ಮುಖ್ಯ ಗೇಟ್‌ಗೆ ನುಗ್ಗಿಸಿ ಬಂದೂಕುಗಳಿಂದ ಗುಂಡು ಹಾರಿಸಲು ಪ್ರಾರಂಭಿಸಿದರು ಎಂಬುದು ತಿಳಿದುಬಂದಿದೆ.

ಜನವರಿಯಲ್ಲಿ ಪೇಶಾವರದ ಮಸೀದಿಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬರ್ ಕನಿಷ್ಠ 101 ಜನರನ್ನು ಕೊಂದ ಘಟನೆ ನಡೆದಿತ್ತು,  ಈ ಪ್ರಾಂತ್ಯವು ಮಾರಣಾಂತಿಕ ದಾಳಿಗೆ ಸಾಕ್ಷಿಯಾಗಿತ್ತು.

ಮತ್ತಷ್ಟು ಓದಿ: Pakistan Bomb Blast: ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ; ಮೂವರು ಸಾವು, 30ಕ್ಕೂ ಹೆಚ್ಚು ಮಂದಿಗೆ ಗಾಯ

2022 ರಿಂದ ಭದ್ರತಾ ಪಡೆಗಳ ಮೇಲೆ ದಾಳಿಯನ್ನು ಹೆಚ್ಚಿಸಿರುವ ತಾಲಿಬಾನಿಗಳ ಮೇಲೆ ಅನುಮಾನ ಮೂಡಿತ್ತು. ಟಿಟಿಪಿ, ಪ್ರತ್ಯೇಕ ಗುಂಪಾಗಿದ್ದರೂ, ಅಫ್ಘಾನ್ ತಾಲಿಬಾನ್‌ನೊಂದಿಗೆ ನಿಕಟ ಮೈತ್ರಿ ಹೊಂದಿದೆ.

 

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:47 am, Tue, 12 December 23