Taiwan Earthquake: ತೈವಾನ್​ನಲ್ಲಿ ಪ್ರಬಲ ಭೂಕಂಪ, 5.9 ತೀವ್ರತೆ ದಾಖಲು

ತೈವಾನ್​ನಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.9 ಎಂದು ಅಳೆಯಲಾಗಿದೆ. ಭೂಕಂಪದಿಂದಾಗಿ ತೈವಾನ್​ನಲ್ಲಿ ಕಟ್ಟಡಗಳು ನಲುಗಿವೆ, ಭೂಕಂಪದ ಭೀತಿಯಿಂದ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಇದುವರೆಗೆ ಯಾವುದೇ ಆಸ್ತಿ ನಷ್ಟದ ಕುರಿತು ವರದಿಯಾಗಿಲ್ಲ. ತೈವಾನ್​ನ ರಾಜಧಾನಿ ತೈಪೆ ಸೇರಿದಂತೆ ಇಡೀ ದ್ವೀಪದಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿವೆ.

Taiwan Earthquake: ತೈವಾನ್​ನಲ್ಲಿ ಪ್ರಬಲ ಭೂಕಂಪ, 5.9 ತೀವ್ರತೆ ದಾಖಲು
ಭೂಕಂಪ
Image Credit source: Times Now

Updated on: Oct 24, 2023 | 8:11 AM

ತೈವಾನ್​ನಲ್ಲಿ ಪ್ರಬಲ ಭೂಕಂಪ(Earthquake)ದ ಅನುಭವವಾಗಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.9 ಎಂದು ಅಳೆಯಲಾಗಿದೆ. ಭೂಕಂಪದಿಂದಾಗಿ ತೈವಾನ್​ನಲ್ಲಿ ಕಟ್ಟಡಗಳು ನಲುಗಿವೆ, ಭೂಕಂಪದ ಭೀತಿಯಿಂದ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಇದುವರೆಗೆ ಯಾವುದೇ ಆಸ್ತಿ ನಷ್ಟದ ಕುರಿತು ವರದಿಯಾಗಿಲ್ಲ. ತೈವಾನ್​ನ ರಾಜಧಾನಿ ತೈಪೆ ಸೇರಿದಂತೆ ಇಡೀ ದ್ವೀಪದಲ್ಲಿ ಪ್ರಬಲ ಭೂಕಂಪಗಳು ಸಂಭವಿಸಿವೆ.

ಭೂಕಂಪದ ಕೇಂದ್ರಬಿಂದು ದ್ವೀಪದ ಪೂರ್ವ ಕರಾವಳಿಯ ಸಮುದ್ರದಲ್ಲಿದೆ ಎಂದು ತೈವಾನ್ ಹವಾಮಾನ ಇಲಾಖೆ ತಿಳಿಸಿದೆ. ಅಕ್ಟೋಬರ್ 22 ರಂದು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭೂಕಂಪ ಸಂಭವಿಸಿತ್ತು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪ ದಾಖಲಾಗಿತ್ತು. ಧಾಡಿಂಗ್‌ ಅನ್ನು ಭೂಕಂಪನದ ಕೇಂದ್ರಬಿಂದು ಎಂದು ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ ಹೇಳಿತ್ತು.

ಬೆಳಗ್ಗೆ 7:39 ಕ್ಕೆ ಭೂಕಂಪವು ದಾಖಲಾಗಿದೆ ಮತ್ತು ಅದರ ಕಂಪನಗಳು ಬಾಗ್ಮತಿ ಮತ್ತು ಗಂಡಕಿ ಪ್ರಾಂತ್ಯಗಳ ಇತರ ಜಿಲ್ಲೆಗಳಲ್ಲಿ ಅನುಭವವಾಗಿದೆ. ನೇಪಾಳದಲ್ಲಿ ಭೂಕಂಪವು ಸಾಮಾನ್ಯ ಸಂಗತಿಯಾಗಿದೆ.

ಮತ್ತಷ್ಟು ಓದಿ: Nepal Earthquake: ನೇಪಾಳದ ಕಠ್ಮಂಡುವಿನಲ್ಲಿ 5.3 ತೀವ್ರತೆಯ ಪ್ರಬಲ ಭೂಕಂಪ

ಟಿಬೆಟಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳು ಸಂಧಿಸುವ ಸ್ಥಳದಲ್ಲಿ ಭೂಕಂಪ ಉಂಟಾಗುತ್ತದೆ ಹಾಗೂ ಪ್ರತಿ ಶತಮಾನಕ್ಕೂ ಎರಡು ಮೀಟರ್‌ಗಳು ಒಂದಕ್ಕೊಂದು ಹತ್ತಿರವಾಗುತ್ತವೆ, ಇದು ಭೂಕಂಪಗಳ ರೂಪದಲ್ಲಿ ಬಿಡುಗಡೆಯಾಗುವ ಒತ್ತಡಕ್ಕೆ ಕಾರಣವಾಗುತ್ತದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ