ಲಾಕ್ಡೌನ್ನಿಂದ ಜಗತ್ತೇ ಕಂಗೆಟ್ಟಿದೆ, ಆದ್ರೆ ಇಲ್ಲೊಬ್ಬ ರಾತ್ರೋರಾತ್ರಿ ಕರೋಡ್ಪತಿ ಆಗಿಬಿಟ್ಟ!
ಅದೃಷ್ಟ ಅನ್ನೋದು ಯಾವಾಗ, ಹೇಗೆ ಬರುತ್ತೆ ಅಂತಾ ಹೇಳೋಕೆ ಆಗಲ್ಲ. ಕೊರೊನಾ ಲಾಕ್ಡೌನ್ನಿಂದ ಇಡೀ ಜಗತ್ತೇ ಆರ್ಥಿಕ ಹೊಡೆತದಿಂದ ಕಂಗೆಟ್ಟಿದೆ. ಇಂಥಾ ಟೈಮಲ್ಲಿ ತಾಂಜೇನಿಯಾದ ಗಣಿಗಾರಿಕೆ ವ್ಯಕ್ತಿಯೋರ್ವ, ರಾತ್ರೋ ರಾತ್ರಿ 30 ಲಕ್ಷದ 33 ಸಾವಿರ ಅಮೆರಿಕನ್ ಡಾಲರ್ ಅಂದ್ರೆ ಸುಮಾರು 25 ಕೋಟಿ ರೂ. ಸಂಪಾದಿಸುವ ಮೂಲಕ ಕರೋಡ್ ಪತಿಯಾಗಿದ್ದಾನೆ. ಈಸ್ಟ್ ಆಫ್ರಿಕಾದಲ್ಲಿ ಸೈನಿನು ಲೈಜರ್ಗೆ ಎರಡು ಜೆಮ್ಸ್ ಕಲ್ಲುಗಳು ಸಿಕ್ಕಿದ್ದಕ್ಕೆ ಗಣಿ ಖಾತೆ ಸಚಿವರೇ ಚೆಕ್ ವಿತರಿಸಿದ್ದಾರೆ. ಹಳಿ ಮೇಲೆ ಹೆರಿಗೆ ಕೊರೊನಾದಿಂದಾಗಿ ಅಲ್ಲಲ್ಲಿ […]
ಅದೃಷ್ಟ ಅನ್ನೋದು ಯಾವಾಗ, ಹೇಗೆ ಬರುತ್ತೆ ಅಂತಾ ಹೇಳೋಕೆ ಆಗಲ್ಲ. ಕೊರೊನಾ ಲಾಕ್ಡೌನ್ನಿಂದ ಇಡೀ ಜಗತ್ತೇ ಆರ್ಥಿಕ ಹೊಡೆತದಿಂದ ಕಂಗೆಟ್ಟಿದೆ. ಇಂಥಾ ಟೈಮಲ್ಲಿ ತಾಂಜೇನಿಯಾದ ಗಣಿಗಾರಿಕೆ ವ್ಯಕ್ತಿಯೋರ್ವ, ರಾತ್ರೋ ರಾತ್ರಿ 30 ಲಕ್ಷದ 33 ಸಾವಿರ ಅಮೆರಿಕನ್ ಡಾಲರ್ ಅಂದ್ರೆ ಸುಮಾರು 25 ಕೋಟಿ ರೂ. ಸಂಪಾದಿಸುವ ಮೂಲಕ ಕರೋಡ್ ಪತಿಯಾಗಿದ್ದಾನೆ. ಈಸ್ಟ್ ಆಫ್ರಿಕಾದಲ್ಲಿ ಸೈನಿನು ಲೈಜರ್ಗೆ ಎರಡು ಜೆಮ್ಸ್ ಕಲ್ಲುಗಳು ಸಿಕ್ಕಿದ್ದಕ್ಕೆ ಗಣಿ ಖಾತೆ ಸಚಿವರೇ ಚೆಕ್ ವಿತರಿಸಿದ್ದಾರೆ.
ಹಳಿ ಮೇಲೆ ಹೆರಿಗೆ ಕೊರೊನಾದಿಂದಾಗಿ ಅಲ್ಲಲ್ಲಿ ಲಾಕ್ ಆಗಿದ್ದ ಕಾರ್ಮಿಕರಿಗೆ ಶ್ರಮಿಕ್ ರೈಲಿನ ಮೂಲಕ ಹುಟ್ಟೂರಿನತ್ತ ಸೇರಿಸಲಾಗ್ತಿದೆ. ಆದ್ರೆ, ಇದೇ ಟೈಮಲ್ಲಿ ಗರ್ಭಿಣಿಯೊಬ್ಬರು ಸಂಚರಿಸುತ್ತಿದ್ದ ರೈಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 32 ವರ್ಷದ ಸೈರಾ ಫಾತಿಮಾ ಒಡಿಶಾದ ಖುರ್ದಾ ರಸ್ತೆ ಮಾರ್ಗದಲ್ಲಿ ಸಂಚರಿಸುವಾಗ ರೈಲಿನಲ್ಲಿ ಜನ್ಮ ನೀಡಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿರೋದಾಗಿ ರೈಲ್ವೆ ಸಚಿವ ಪಿಯೂಷ್ ಘೋಯಲ್ ಹೇಳಿದ್ದಾರೆ.
ಕೃಷಿ ದಂಪತಿ ಗಾನ ಖುಷಿ ಕಲೆ ಎಲ್ಲರನ್ನ ಕೈ ಬೀಸಿ ಕರೆಯುತ್ತೆ ಆದ್ರೆ ಕೆಲವರನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತೆ ಅನ್ನೋ ಮಾತಿದೆ. ಆದ್ರೆ, ಪಂಜಾಬ್ನ ಗ್ರಾಮವೊಂದರ ಈ ಕೃಷಿ ದಂಪತಿ 1962ರಲ್ಲಿ ರಿಲೀಸ್ ಆದ ಪ್ರೊಫೆಷರ್ ಸಿನಿಮಾದ ‘ಆವಾಜ್ ದೇಖೇ ಹಮೇ ತುಮ್ ಬುಲಾವೋ..’ ಹಾಡನ್ನ ಹೊಲದ ಬಳಿ ಇಬ್ಬರೂ ಹಾಡಿದ್ದಾರೆ. ಇವರ ಗಾನಸುಧೆಗೆ ಗಾಯಕಿ ರೇಖಾ ಭಾರಧ್ವಜ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಗುಲ್ ಪನಾಗ್ ಪುತ್ರನ ಸ್ಟೆಪ್ಸ್ ಬಿಟೌನ್ ನಟಿ ಗುಲ್ ಪನಾಗ್ ಮನೆಯಲ್ಲಿ ವರ್ಕೌಟ್ ಮಾಡ್ತಿದ್ದು, ಮಗನ ಜೊತೆ ಸೇರಿ ಡ್ಯಾನ್ಸ್ ಕೂಡ ಮಾಡ್ತಿದ್ದಾರೆ. 2 ವರ್ಷದ ನಿಹಾಲ್ ಅಮೆರಿಕದ ರಾಕ್ ಬಾಂಡ್ರ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ನಿಹಾಲ್ ಕೆಲ ಅಚ್ಚುಮೆಚ್ಚಿನ ಹಾಡುಗಳಿಗೆ ಮಾತ್ರ ಸ್ಟೆಪ್ಸ್ ಹಾಕ್ತಾನಂತೆ. ಇನ್ಸ್ಟಾಗ್ರಾಮ್ನಲ್ಲಿ ನಟಿ ವಿಡಿಯೋ ಷೇರ್ ಮಾಡಿದ್ದು, ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿದೆ.
ಡೆಲಿವರಿ ಮಹಿಳೆಯ ಮ್ಯಾರಥಾನ್ ಆನ್ಲೈನ್ನಲ್ಲಿ ಐಟಮ್ಸ್ ಡೆಲಿವರಿ ಮಾಡಲು ನಾನಾ ಆಫರ್ಗಳನ್ನ ಕಂಪನಿಯವರು ನೀಡ್ತಾರೆ. ಆದ್ರೆ, ಇಲ್ಲೊಬ್ಬ ಬಾಲಕ ಡೆಲಿವರಿ ಮಹಿಳೆಗೆ ಒಂದು ಸವಾಲ್ ಹಾಕಿದ್ದ. ಮನೆಯ ಹತ್ತಿರ ಡೆಲಿವರಿ ತಂದ ಮೇಲೆ, ಮೂರು ಬಾರಿ ಡೋರ್ ಬಡಿದು, ಅಬರಕ ಡಬರಾ ಅಂತಾ ಹೇಳಿ ಓಡಿ ಹೋಗಬೇಕು ಅಂತಾ. ಬಾಲಕನ ಸವಾಲು ಸ್ವೀಕರಿಸಿದ ಅಮೇಜನ್ ಡೆಲಿವರಿ ಮಹಿಳೆ, ಬಾಗಿಲು ಬಡಿದು ಮ್ಯಾರಥಾನ್ನಂತೆ ಓಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗ್ತಿದೆ.
Published On - 5:41 pm, Sat, 27 June 20