ಈ ನರ್ಸ್​​​ ವಿಶ್ವದಲ್ಲೇ ಅತ್ಯಂತ ಉದ್ದನೆಯ ಜಡೆ ಹೊಂದಿದ್ದಾರೆ! ಎಷ್ಟು ಉದ್ದ ಇರಬಹುದು?

|

Updated on: Sep 02, 2023 | 11:50 AM

ಟೆನ್ನೆಸ್ಸೀ ಮಹಿಳೆ ತಮಿ ಮನಿಸ್ ನವೆಂಬರ್ 1989 ರಲ್ಲಿ ಒಮ್ಮೆ ಅಚಾನಕ್ಕಾಗಿ ಅಚಾತುರ್ಯದಿಂದ ತಮ್ಮ ತಲೆಗೂದಲನ್ನು ಕತ್ತರಿಸಿದ್ದರು ಮತ್ತು ಅದರಿಂದ ಆಕೆಗೆ ವಿಷಾದವೂ ಆಯಿತಂತೆ. ಆದ್ದರಿಂದ ಅವರು ಮುಂದೆ ಎಂದಿಗೂ ತಮ್ಮ ತಲೆಗೂದಲಲ್ಲಿ ಕತ್ತರಿ ಆಡಿಸದೆ ಅದನ್ನು ಸೊಂಪಾಗಿ ಬೆಳೆಯಲು ಪ್ರಾರಂಭಿಸಿದರಂತೆ. ಅಂದಿನಿಂದ ಅದನ್ನು ಟ್ರಿಮ್ ಸಹ ಮಾಡಲಿಲ್ಲವಂತೆ. ತಮ್ಮ ಉತ್ತಮ ವಂಶವಾಹಿಯಿಂದಾಗಿ ಮತ್ತು ಅರ್ಗಾನ್ ಎಣ್ಣೆಯ ಫಲವಾಗಿ ಉದ್ದನೆಯ ಜಡೆ ಸಾಧ್ಯವಾಗಿದೆ ಎಂದು ಹೇಳುತ್ತಾರೆ.

ಈ ನರ್ಸ್​​​ ವಿಶ್ವದಲ್ಲೇ ಅತ್ಯಂತ ಉದ್ದನೆಯ ಜಡೆ ಹೊಂದಿದ್ದಾರೆ! ಎಷ್ಟು ಉದ್ದ ಇರಬಹುದು?
ಈ ನರ್ಸ್​​​ ವಿಶ್ವದಲ್ಲೇ ಅತ್ಯಂತ ಉದ್ದನೆಯ ಜಡೆ ಇದೆ!
Follow us on

58 ವರ್ಷದ ಟೆನ್ನೆಸ್ಸೀ ಮಹಿಳೆ (Tennessee woman) ವಿಶ್ವದ ಅತಿ ಉದ್ದದ ಉದ್ದನೆಯ ಜಡೆ (Braid) ಹೊಂದಿರುವ ದಾಖಲೆಯನ್ನು ನಿರ್ಮಿಸಿದ್ದಾರೆ. ಟೆನ್ನೆಸ್ಸೀ ನಾಕ್ಸ್‌ವಿಲ್ಲೆ ನಿವಾಸಿ ತಮಿ ಮನಿಸ್ (Tami Manis) 5 ಅಡಿ, 8 ಇಂಚಿನ (172.72 cm) ಜಡೆ ಹೊಂದಿದ್ದಾರೆ. ಇದು ಸರಾಸರಿ ಮನುಷ್ಯನ ಎತ್ತರವಾಗಿದೆ ಎಂಬುದು ಗಮನಾರ್ಹ. ಸಾರ್ವಜನಿಕ ಆರೋಗ್ಯ ಶುಶ್ರೂಷಕಿಯಾಗಿರುವ ಮನಿಸ್ ಅವರು 1980rಲ್ಲಿ ಅಮೆರಿಕನ್ ರಾಕ್ ಬ್ಯಾಂಡ್ ‘ಟಿಲ್ ಟ್ಯೂಡೇಸ್’ನ ಸಂಗೀತ ವೀಡಿಯೋದಿಂದ ಸ್ಫೂರ್ತಿ ಹೊಂದಿ, 33 ವರ್ಷಗಳಿಂದ ತಮ್ಮ ತಲೆ ಕೂದಲನ್ನು ಕತ್ತರಿಸಿಲ್ಲ. ಟೆನ್ನೆಸ್ಸೀ ಮಹಿಳೆ ತಮಿ ಮನಿಸ್ ಅವರ ಈ ನೀಳ ಕೇಶವಿನ್ಯಾಸವು (world longest competitive mullet) 2024 ರ ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಲ್ಲಿ (Guinness World Records book) ದಾಖಲಾಗಲಿದೆ.

ಸುಮಾರು ನಾಲ್ಕು ದಶಕಗಳ ಹಿಂದೆ ವಾಯ್ಸ್ ಕ್ಯಾರಿ ಹಾಡಿನ ಮ್ಯೂಸಿಕ್ ವೀಡಿಯೊವನ್ನು ಮೊದಲ ಬಾರಿಗೆ ವೀಕ್ಷಿಸಿದಾಗಿನಿಂದ ತಮ್ಮ ಜಡೆ ಪಯಣ ಪ್ರಾರಂಭವಾಯಿತು ಎಂದು ಮನಿಸ್ ಹೇಳಿದರು. ಚಿಕ್ಕ ಹುಡುಗಿಯಾಗಿದ್ದಾಗಲೇ ಇಂತಹ ಅಪೂರ್ವ ಕೇಶರಾಶಿ ನನ್ನದಾಗಿತ್ತು. ನಾನು ನಿಜವಾಗಿಯೂ ಅದನ್ನು ಬಯಸುತ್ತೇನೆ ಎಂದು ಅವರು ಗಿನ್ನೆಸ್ ವರ್ಲ್ಡ್ ಆಫ್ ರೆಕಾರ್ಡ್ಸ್ಗೆ ತಿಳಿಸಿದ್ದಾರೆ.

ಈ ಮಧ್ಯೆ, ನವೆಂಬರ್ 1989 ರಲ್ಲಿ ಒಮ್ಮೆ ಅವರು ಅಚಾನಕ್ಕಾಗಿ ಅಚಾತುರ್ಯದಿಂದ ತಮ್ಮ ತಲೆಗೂದಲನ್ನು ಕತ್ತರಿಸಿದ್ದರು ಮತ್ತು ಅದರಿಂದ ಆಕೆಗೆ ವಿಷಾದವೂ ಆಯಿತಂತೆ. ಆದ್ದರಿಂದ ಅವರು ಮುಂದೆ ಎಂದಿಗೂ ತಮ್ಮ ತಲೆಗೂದಲಲ್ಲಿ ಕತ್ತರಿ ಆಡಿಸದೆ ಅದನ್ನು ಸೊಂಪಾಗಿ ಬೆಳೆಯಲು ಪ್ರಾರಂಭಿಸಿದರಂತೆ. ಅಂದಿನಿಂದ ಅದನ್ನು ಟ್ರಿಮ್ ಸಹ ಮಾಡಲಿಲ್ಲವಂತೆ.

Also Read: ಅದೊಂದು ವಿಲಕ್ಷಣ ಪ್ರಪಂಚವಿತ್ತು, ಅಲ್ಲಿ ಅಣ್ಣ-ತಂಗಿ ಮದುವೆಯಾಗುತ್ತಿದ್ದರು! ಯಾವುದಪ್ಪಾ ಆ ವಿಚಿತ್ರ ದೇಶ? ಯಾಕೆ ಹಾಗೆ

ಅಂದಹಾಗೆ ಇದು 1980 ರ ದಶಕ ಮತ್ತು 1990 ರ ದಶಕದ ಆರಂಭದಲ್ಲಿ ಡು ಜೋರ್ ಶೈಲಿಯಾಗಿದ್ದು, ಬಿಲ್ಲಿ ರೇ ಸೈರಸ್, ಮಾರಿಯೋ ಲೋಪೆಜ್ ಮತ್ತು ಪ್ಯಾಟ್ರಿಕ್ ಸ್ವೇಜ್ ಅವರಂತಹ ತಾರೆಗಳಿಂದ ಜನಪ್ರಿಯವಾಯಿತು. ಇಷ್ಟು ದಿನ ಅದನ್ನು ಹೇಗೆ ಬೆಳೆಸಲು ಸಾಧ್ಯವಾಯಿತು ಎಂಬುದಕ್ಕೆ, ಮನಿಸ್ ತಮ್ಮ ಉತ್ತಮ ವಂಶವಾಹಿಯಿಂದಾಗಿ ಮತ್ತು ಅರ್ಗಾನ್ ಎಣ್ಣೆಯ ಫಲವಾಗಿ ಇದು ಸಾಧ್ಯವಾಗಿದೆ ಎಂದು ಹೇಳುತ್ತಾರೆ.

ಆದರೆ ನೀಳಕೇಶರಾಶಿಯನ್ನು ಪೋಷಿಸುವುದು ಯಾವಾಗಲೂ ಸುಲಭವಲ್ಲ. ತನಗಿಂತ ಉದ್ದವಾಗಿರುವ ತಲೆಗೂದಲನ್ನು ಹೆಚ್ಚಾಗಿ ಹೆಣೆಯುತ್ತೇನೆ, ಅಂದವಾದ ಜಡೆ ಹಾಕಿಕೊಳ್ಳುತ್ತೇನೆ. ಹಾಗಾಗಿ ಅದನ್ನು ಪಾಲಿಸಿ, ಪೋಷಿಸುವುದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ