AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

China Map Controversy: ಭಾರತ ಹೊರತುಪಡಿಸಿ ಚೀನಾದ ಹೊಸ ನಕ್ಷೆಯನ್ನು ತಿರಸ್ಕರಿಸಿದ ದೇಶಗಳಿವು

ಚೀನಾದ ಹೊಸ ನಕ್ಷೆಯು ಭಾರತವನ್ನು ಮಾತ್ರವಲ್ಲದೆ ಇತರ ಹಲವು ದೇಶಗಳನ್ನೂ ಕೆರಳಿಸಿದೆ. ಭಾರತದೊಂದಿಗೆ, ಫಿಲಿಪೈನ್ಸ್, ಮಲೇಷ್ಯಾ, ವಿಯೆಟ್ನಾಂ ಮತ್ತು ತೈವಾನ್ ಸರ್ಕಾರಗಳು ಗುರುವಾರ ಚೀನಾದ ಹೊಸ ರಾಷ್ಟ್ರೀಯ ನಕ್ಷೆಯನ್ನು ತಿರಸ್ಕರಿಸಿವೆ. ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ತಮ್ಮದೆಂದು ಚೀನಾದ ಸ್ಟ್ಯಾಂಡರ್ಡ್ ಮ್ಯಾಪ್​ನಲ್ಲಿ ಪ್ರಸ್ತಾಪಿಸಿರುವ ಬಗ್ಗೆ ಭಾರತ ಮಂಗಳವಾರ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ.

China Map Controversy: ಭಾರತ ಹೊರತುಪಡಿಸಿ ಚೀನಾದ ಹೊಸ ನಕ್ಷೆಯನ್ನು ತಿರಸ್ಕರಿಸಿದ ದೇಶಗಳಿವು
ಚೀನಾ
Follow us
ನಯನಾ ರಾಜೀವ್
|

Updated on: Sep 01, 2023 | 12:42 PM

ಚೀನಾ(China)ದ ಹೊಸ ನಕ್ಷೆ(Map)ಯು ಭಾರತವನ್ನು ಮಾತ್ರವಲ್ಲದೆ ಇತರ ಹಲವು ದೇಶಗಳನ್ನೂ ಕೆರಳಿಸಿದೆ. ಭಾರತದೊಂದಿಗೆ, ಫಿಲಿಪೈನ್ಸ್, ಮಲೇಷ್ಯಾ, ವಿಯೆಟ್ನಾಂ ಮತ್ತು ತೈವಾನ್ ಸರ್ಕಾರಗಳು ಗುರುವಾರ ಚೀನಾದ ಹೊಸ ರಾಷ್ಟ್ರೀಯ ನಕ್ಷೆಯನ್ನು ತಿರಸ್ಕರಿಸಿವೆ. ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ತಮ್ಮದೆಂದು ಚೀನಾದ ಸ್ಟ್ಯಾಂಡರ್ಡ್ ಮ್ಯಾಪ್​ನಲ್ಲಿ ಪ್ರಸ್ತಾಪಿಸಿರುವ ಬಗ್ಗೆ ಭಾರತ ಮಂಗಳವಾರ ತೀವ್ರ ಪ್ರತಿಭಟನೆಯನ್ನು ದಾಖಲಿಸಿದೆ.

ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯವು ಆಗಸ್ಟ್ 28 ರಂದು ವಿವಾದಾತ್ಮಕ ನಕ್ಷೆಯನ್ನು ಬಿಡುಗಡೆ ಮಾಡಿತು. ಚೀನಾದ ಹೊಸ ಅಧಿಕೃತ ನಕ್ಷೆಯು ಸ್ಪ್ರಾಟ್ಲಿ ಮತ್ತು ಪ್ಯಾರಾಸೆಲ್ ದ್ವೀಪಗಳ ಮೇಲಿನ ತನ್ನ ಸಾರ್ವಭೌಮತ್ವವನ್ನು ಮತ್ತು ಅದರ ನೀರಿನ ಮೇಲಿನ ನ್ಯಾಯವ್ಯಾಪ್ತಿಯನ್ನು ಉಲ್ಲಂಘಿಸುತ್ತದೆ ಎಂದು ವಿಯೆಟ್ನಾಂ ಹೇಳಿಕೊಂಡಿದೆ.

ಭಾರತದ ಗಡಿಯಲ್ಲಿ ಸದಾ ತಗಾದೆ ತೆಗೆಯುತ್ತಿರುವ ಚೀನಾ ಹೊಸ ಮ್ಯಾಪ್​ನಲ್ಲಿ ಭಾರತದ ಅರುಣಾಚಲಪ್ರದೇಶ ಹಾಗೂ ವಿವಾದಿತ ಅಕ್ಸಾಯ್ ಚಿನ್ ಪ್ರದೇಶವನ್ನು ತನ್ನದೆಂಬಂತೆ ಬಿಂಬಿಸಿತ್ತು. ಚೀನಾದ ಈ ನಡೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರಾಜಕೀಯ ಸಂಚಲನ ಮೂಡಿಸಿದೆ. ಚೀನಾ ಅತಿಕ್ರಮಣವಾಗಲಿ ಅಥವಾ ಭಾರತದ ಭೂಭಾಗವನ್ನು ತನ್ನದೆಂದು ಹೇಳಿಕೊಂಡಿರುವುದು ಇದೇ ಮೊದಲ ಸಲವಲ್ಲ,. ಪ್ರತಿ ಬಾರಿಯೂ ಭಾರತ ಇದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿರೋಧ ತೋರುತ್ತಿದೆ.

ಮತ್ತಷ್ಟು ಓದಿ: ಚೀನಾದ ಹೊಸ ಮ್ಯಾಪ್​​ನಲ್ಲಿ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಸೇರ್ಪಡೆ

ಕೆಲವು ತಿಂಗಳುಗಳ ಹಿಂದೆ ತೈವಾನ್ ಹಾಗೂ ದಕ್ಷಿಣ ಸಮುದ್ರವು ತನ್ನದೆಂದು ಹೊಸ ಭೂಪಟವನ್ನು ಸಿದ್ಧಪಡಿಸಿತ್ತು, 1962ರ ಯುದ್ಧದ ಸಮಯದಲ್ಲಿ ಅಕ್ಸಾಯ್ ಚಿನ್ ಪ್ರದೇಶವನ್ನು ಚೀನಾ ತನ್ನದೆಂದು ಬಿಂಬಿಸಿಕೊಂಡಿತ್ತು. ಇದಲ್ಲದೆ ಅರುಣಾಚಲ ಪ್ರದೇಶವನ್ನು ಕೂಡ ತನ್ನದೆಂದು ಹೇಳಿತ್ತು.

ಈ ನಡೆಯಿಂದಾಗಿ ವಿಯೆಟ್ನಾಂ, ಫಿಲಿಪೈನ್ಸ್, ಮಲೇಷ್ಯಾ, ಬ್ರೂನಿ ಮತ್ತು ತೈವಾನ್ ದೇಶಗಳಿಂದಲೂ ಚೀನಾ ವಿರೋಧ ಎದುರಿಸುತ್ತಿದೆ. ಫಿಲಿಪೈನ್ಸ್​ ಚೀನಾಗೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಹಾಗೂ ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ತನ್ನ ಬಾಧ್ಯತೆಗಳಿಗೆ ಬದ್ಧವಾಗಿರಲು ಕರೆ ನೀಡಿತು.

ಚೀನಾದ ಯು ಆಕಾರದ ರೇಖೆಯು ಅದರ ಹೈವಾನ್ ದ್ವೀಪದ ದಕ್ಷಿಣಕ್ಕೆ 1500 ಕಿ.ಮೀ ಸಾಗುತ್ತದೆ, ಮತ್ತು ವಿಯೆಟ್ನಾಂ, ಫಿಲಿಪೈನ್ಸ್​, ಮಲೇಷ್ಯಾ, ಬ್ರೂನಿ ಹಾಗೂ ಇಂಡೋನೇಷ್ಯಾದ ವಿಶೇಷ ಆರ್ಥಿಕ ವಲಯದ ಮೂಲಕ ಬೇರ್ಪಡುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ