AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಠಪೂರ್ತಿ ಕುಡಿದು ಐಫೆಲ್ ಟವರ್ ಏರಿ ಮಲಗಿದ ಇಬ್ಬರು ಅಮೆರಿಕನ್ನರು

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ವಿಶ್ವದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಳೆದ ವರ್ಷ, ಸುಮಾರು 6.2 ಮಿಲಿಯನ್ ಪ್ರವಾಸಿಗರು ಈ ಗೋಪುರವನ್ನು ನೋಡಲು ಬಂದಿದ್ದರು. ರಾತ್ರಿ ಕಂಠಪೂರ್ತಿ ಕುಡಿದು ಇಬ್ಬರು ಅಮೆರಿಕನ್ನರು ಐಫೆಲ್ ಟವರ್ ಏರಿ ಮಲಗಿರುವ ಘಟನೆ ಬೆಳಕಿಗೆ ಬಂದಿದೆ. ಐಫೆಲ್ ಟವರ್​ಗೆ ಅಷ್ಟೊಂದು ಭದ್ರತೆ ಇದ್ದರೂ ಆ ಭದ್ರತಾ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ಐಫೆಲ್ ಟವರ್ ಏರಿದ್ದಾರೆ.

ಕಂಠಪೂರ್ತಿ ಕುಡಿದು ಐಫೆಲ್ ಟವರ್ ಏರಿ ಮಲಗಿದ ಇಬ್ಬರು ಅಮೆರಿಕನ್ನರು
ಐಫೆಲ್ ಟವರ್Image Credit source: NDTV
Follow us
ನಯನಾ ರಾಜೀವ್
|

Updated on: Sep 01, 2023 | 7:50 AM

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್(Eiffel Tower) ವಿಶ್ವದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಳೆದ ವರ್ಷ, ಸುಮಾರು 6.2 ಮಿಲಿಯನ್ ಪ್ರವಾಸಿಗರು ಈ ಗೋಪುರವನ್ನು ನೋಡಲು ಬಂದಿದ್ದರು. ರಾತ್ರಿ ಕಂಠಪೂರ್ತಿ ಕುಡಿದು ಇಬ್ಬರು ಅಮೆರಿಕನ್ನರು ಐಫೆಲ್ ಟವರ್ ಏರಿ ಮಲಗಿರುವ ಘಟನೆ ಬೆಳಕಿಗೆ ಬಂದಿದೆ. ಐಫೆಲ್ ಟವರ್​ಗೆ ಅಷ್ಟೊಂದು ಭದ್ರತೆ ಇದ್ದರೂ ಆ ಭದ್ರತಾ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ಐಫೆಲ್ ಟವರ್ ಏರಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಐಫೆಲ್ ಟವರ್ ಬಾಗಿಲು ತೆರೆಯುವ ಮುಂಚಿತವಾಗಿಯೇ ಇಬ್ಬರು ಟವರ್ ಮೇಲೆ ಓಡಾಡುತ್ತಿರುವುದು ಕಂಡುಬಂತು. ಅವರು ಮದ್ಯಪಾನ ಮಾಡಿದ್ದರಿಂದ ಕೆಳಗೆ ಇಳಿಯಲಾಗದೆ ಅಲ್ಲೇ ಉಳಿದಿದ್ದಾರೆ.

ಸಾಮಾನ್ಯವಾಗಿ ಐಫೆಲ್ ಟವರ್‌ನ ಎರಡನೇ ಮತ್ತು ಮೂರನೇ ಹಂತಗಳನ್ನು ಸಾರ್ವಜನಿಕರಿಗೆ ಮುಚ್ಚಲಾಗುತ್ತದೆ. ಆದರೆ ಕುಡಿದ ಅಮೇರಿಕನ್ನರು ಇಡೀ ರಾತ್ರಿ ಈ ಎರಡು ಗೋಪುರಗಳ ನಡುವೆ ನಕ್ಷತ್ರಗಳ ಕೆಳಗೆ ಕಳೆದಿದ್ದಾರೆ. ಆದರೆ ಯಾವುದೇ ರೀತಿ ಗಲಾಟೆಯನ್ನು ಅವರು ಮಾಡಲಿಲ್ಲ.

ಇಬ್ಬರೂ ಪ್ರವಾಸಿಗರು ಕಳೆದ ಭಾನುವಾರ ರಾತ್ರಿ 10:40 ರ ಸುಮಾರಿಗೆ ಪ್ರವೇಶ ಟಿಕೆಟ್‌ಗಳನ್ನು ಖರೀದಿಸಿದ್ದರು ಎಂದು ಹೇಳಲಾಗಿದೆ. ಆದರೆ ಅವರು ಭದ್ರತಾ ಸಿಬ್ಬಂದಿಯನ್ನು ತಪ್ಪಿಸಿ ಟವರ್ ಏರಿದರು. ವರದಿಯ ಪ್ರಕಾರ, ಅಪಾಯಕಾರಿ ಎತ್ತರದಿಂದ ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಯ ವಿಶೇಷ ತಂಡವನ್ನು ಕಳುಹಿಸಲಾಗಿದೆ.

ಮತ್ತಷ್ಟು ಓದಿ: Eiffel Tower: ಐಫೆಲ್ ಟವರ್‌ಗೆ ಬಾಂಬ್ ಬೆದರಿಕೆ ಕರೆ: ಸಾರ್ವಜನಿಕರ ಪ್ರವೇಶ ನಿರ್ಬಂಧ

ಇದಾದ ನಂತರ ಇಬ್ಬರನ್ನೂ ಪ್ಯಾರಿಸ್ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಯಿತು. ಈ ಬಗ್ಗೆ ಕ್ರಿಮಿನಲ್ ದೂರು ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂತಹ ಕ್ರಮದಿಂದಾಗಿ ಸೋಮವಾರ ನಿತ್ಯ ತೆರೆಯುತ್ತಿದ್ದ ಟವರ್ ಬೆಳಗ್ಗೆ ಒಂದು ಗಂಟೆ ತಡವಾಯಿತು.

ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸರು ಒಂದೇ ಮಹಡಿಯಲ್ಲಿರುವ ರೆಸ್ಟೋರೆಂಟ್ ಸೇರಿದಂತೆ ಇಡೀ ಪ್ರದೇಶವನ್ನು ಕೂಲಂಕಷವಾಗಿ ತನಿಖೆ ನಡೆಸಿದರು.

ಐಫೆಲ್ ಟವರ್ ಅನ್ನು ‘ಲಾ ಡೇಮ್ ಡಿ ಫೆರ್’ (ಫ್ರೆಂಚ್‌ನಲ್ಲಿ ಐರನ್ ಲೇಡಿ) ಎಂದೂ ಕರೆಯುತ್ತಾರೆ, ಇದು 330 ಮೀಟರ್ (1,083 ಅಡಿ) ಎತ್ತರವಾಗಿದೆ ಮತ್ತು ಪ್ಯಾರಿಸ್‌ನ ಅತ್ಯಂತ ಎತ್ತರದ ರಚನೆಯಾಗಿದೆ. ಇದರ ನಿರ್ಮಾಣ ಕಾರ್ಯವು ಜನವರಿ 1887 ರಲ್ಲಿ ಪ್ರಾರಂಭವಾಯಿತು ಮತ್ತು ಮಾರ್ಚ್ 31, 1889 ರಂದು ಪೂರ್ಣಗೊಂಡಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು