AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳನಲ್ಲಿ 50 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಜೀವಿಯ ಕುರುಹು, ಆಕಸ್ಮಿಕವಾಗಿ ನಾಸಾ ಅದನ್ನು ನಾಶಮಾಡಿತ್ತು: ವಿಜ್ಞಾನಿ

ವೈಕಿಂಗ್ ಲ್ಯಾಂಡರ್‌ಗಳು ಅಲ್ಪ ಪ್ರಮಾಣದ ಕ್ಲೋರಿನೇಟೆಡ್ ಆರ್ಗಾನಿಕ್ಸ್ ಸಹ ಗುರುತಿಸಿದ್ದವು, ಅವುಗಳು ಭೂಮಿಯ ಮಾಲಿನ್ಯವಾಗಿದೆ ಎಂದು ಆರಂಭದಲ್ಲಿ ನಂಬಲಾಗಿತ್ತು. ಆದರೆ ನಂತರದ ಕಾರ್ಯಾಚರಣೆಗಳು ಕ್ಲೋರಿನೇಟೆಡ್ ರೂಪದಲ್ಲಿ ಮಂಗಳ ಗ್ರಹದಲ್ಲಿ ಸ್ಥಳೀಯ ಸಾವಯವ ಸಂಯುಕ್ತಗಳ ಉಪಸ್ಥಿತಿಯನ್ನು ದೃಢಪಡಿಸಿದೆ ಎಂದು ವಿಜ್ಞಾನಿ ಬಿಗ್ ಥಿಂಕ್‌ನಲ್ಲಿ ಅಂಕಣದಲ್ಲಿ ಬರೆದಿದ್ದಾರೆ.

ಮಂಗಳನಲ್ಲಿ 50 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಜೀವಿಯ ಕುರುಹು, ಆಕಸ್ಮಿಕವಾಗಿ ನಾಸಾ ಅದನ್ನು ನಾಶಮಾಡಿತ್ತು: ವಿಜ್ಞಾನಿ
ಮಂಗಳನಲ್ಲಿ ಕ್ಯೂರಿಯಾಸಿಟಿ ರೋವರ್Image Credit source: NASA handout via Reuters
Follow us
ರಶ್ಮಿ ಕಲ್ಲಕಟ್ಟ
|

Updated on:Aug 31, 2023 | 2:22 PM

ವಾಷಿಂಗ್ಟನ್ ಆಗಸ್ಟ್ 31: 50 ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ (Mars) ಅನ್ಯಗ್ರಹ ಜೀವಿಗಳನ್ನು ಕಂಡುಹಿಡಿಯಲಾಯಿತು.ಆದರೆ ನಾಸಾ ಅದನ್ನು ಆಕಸ್ಮಿಕವಾಗಿ ನಾಶಪಡಿಸಿದೆ ಎಂದು ಬರ್ಲಿನ್ ತಾಂತ್ರಿಕ ವಿಶ್ವವಿದ್ಯಾಲಯದ ಖಗೋಳವಿಜ್ಞಾನ ಪ್ರಾಧ್ಯಾಪಕ ಮತ್ತು ಅಧ್ಯಾಪಕ ಸದಸ್ಯ ಡಿರ್ಕ್ ಶುಲ್ಜೆ-ಮಕುಚ್ ಹೇಳಿದ್ದಾರೆ. ಕ್ಯೂರಿಯಾಸಿಟಿ ರೋವರ್ (Curiosity rover) ಉಡಾವಣೆ ಮೊದಲು ನಾಸಾ (NASA) 1970 ರ ದಶಕದ ಮಧ್ಯಭಾಗದಲ್ಲಿ ವೈಕಿಂಗ್ ಕಾರ್ಯಕ್ರಮವನ್ನು (Viking programme) ಪ್ರಾರಂಭಿಸಿತು. ಇದು ಮಂಗಳದ ಮೇಲ್ಮೈಗೆ ಎರಡು ಲ್ಯಾಂಡರ್ಗಳನ್ನು ಕಳುಹಿಸಿತು. ಈ ಕಾರ್ಯಾಚರಣೆಯು ಮಂಗಳದ ಮೇಲ್ಮೈಯ ಮೊದಲ ನೋಟಗಳನ್ನು ನೀಡಲು ನಿರ್ವಹಿಸುತ್ತಿದೆ. ಇದು ಮಂಗಳನಲ್ಲಿ ಜೀವಿಗಳು ಇತ್ತೇ ಎಂಬ ಕುರುಹು ಪರಿಶೀಲಿಸಲು ಅದರ ಮಣ್ಣಿನ ಜೈವಿಕ ವಿಶ್ಲೇಷಣೆಯನ್ನು ಸಹ ನಡೆಸಿತು.

ಶುಲ್ಜ್-ಮಕುಚ್ ಪ್ರಕಾರ, ಮಿಷನ್‌ನ ಸಂಶೋಧನೆಗಳು ನೀರಿನ ಪರಿಣಾಮಗಳಿಗೆ ಅನುಗುಣವಾಗಿ ಹಲವಾರು ಭೂವೈಜ್ಞಾನಿಕ ರಚನೆಗಳನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ಮಂಗಳದ ಜ್ವಾಲಾಮುಖಿಗಳು ಮತ್ತು ಅವುಗಳ ಇಳಿಜಾರುಗಳು ಹವಾಯಿಯಲ್ಲಿನ ಜ್ವಾಲಾಮುಖಿಗಳಿಗೆ ನಿಕಟ ಹೋಲಿಕೆಯನ್ನು ಹೊಂದಿವೆ. ಇವು ಈ ಹಿಂದೆ ಮಳೆಗೆ ಒಡ್ಡಿಕೊಂಡಿವೆ ಎಂಬುದನ್ನು ತೋರಿಸುತ್ತದೆ.

ವೈಕಿಂಗ್ ಲ್ಯಾಂಡರ್‌ಗಳು ಅಲ್ಪ ಪ್ರಮಾಣದ ಕ್ಲೋರಿನೇಟೆಡ್ ಆರ್ಗಾನಿಕ್ಸ್ ಸಹ ಗುರುತಿಸಿದ್ದವು, ಅವುಗಳು ಭೂಮಿಯ ಮಾಲಿನ್ಯವಾಗಿದೆ ಎಂದು ಆರಂಭದಲ್ಲಿ ನಂಬಲಾಗಿತ್ತು. ಆದರೆ ನಂತರದ ಕಾರ್ಯಾಚರಣೆಗಳು ಕ್ಲೋರಿನೇಟೆಡ್ ರೂಪದಲ್ಲಿ ಮಂಗಳ ಗ್ರಹದಲ್ಲಿ ಸ್ಥಳೀಯ ಸಾವಯವ ಸಂಯುಕ್ತಗಳ ಉಪಸ್ಥಿತಿಯನ್ನು ದೃಢಪಡಿಸಿದೆ ಎಂದು ವಿಜ್ಞಾನಿ ಬಿಗ್ ಥಿಂಕ್‌ನಲ್ಲಿ ಅಂಕಣದಲ್ಲಿ ಬರೆದಿದ್ದಾರೆ.

ಆರಂಭಿಕ ವೈಕಿಂಗ್ ಪ್ರಯೋಗಗಳ ಭಾಗವಾಗಿ, ನೀರಿಗೆ ಪೋಷಕಾಂಶಗಳನ್ನು ಬೆರೆಸಲಾಯಿತು. ವಿಕಿರಣಶೀಲ ಇಂಗಾಲವನ್ನು ಕೆಂಪು ಮಂಗಳದ ಮಣ್ಣಿನಲ್ಲಿ ಬಿಡಲಾಯಿತು. ಊಹೆಯ ಪ್ರಕಾರ, ಮಂಗಳ ಗ್ರಹದಲ್ಲಿ ಸಂಭಾವ್ಯ ಸೂಕ್ಷ್ಮಜೀವಿಗಳಿದ್ದರೆ, ಅವು ಪೋಷಕಾಂಶಗಳನ್ನು ಬಳಸುತ್ತವೆ ಮತ್ತು ವಿಕಿರಣಶೀಲ ಇಂಗಾಲವನ್ನು ಅನಿಲವಾಗಿ ಬಿಡುಗಡೆ ಮಾಡುತ್ತವೆ. ಆದರೆ ಆರಂಭಿಕ ಫಲಿತಾಂಶಗಳು ಈ ವಿಕಿರಣಶೀಲ ಅನಿಲದ ಹೊರಸೂಸುವಿಕೆಯನ್ನು ಸೂಚಿಸಿದರೆ, ಉಳಿದ ಫಲಿತಾಂಶಗಳು ಅನಿರ್ದಿಷ್ಟವಾಗಿಯೇ ಉಳಿದಿವೆ.

ಈ ಪ್ರಕ್ರಿಯೆ ಈ ಸಂಭಾವ್ಯ ಸೂಕ್ಷ್ಮಜೀವಿಗಳ ಮೇಲೆ ಹೇರಿಕೆ ಆಗಿ ಅವುಗಳ ಮರಣಕ್ಕೆ ಕಾರಣವಾಗಬಹುದೆಂದು ಶುಲ್ಜ್-ಮಕುಚ್ ಹೇಳಿದ್ದಾರೆ. “ಭೂಮಿಯು ನೀರಿನ ಗ್ರಹವಾಗಿರುವುದರಿಂದ, ನೀರನ್ನು ಹಾಕುವುದು ಅತ್ಯಂತ ಶುಷ್ಕ ಮಂಗಳದ ಪರಿಸರದಲ್ಲಿ ತನ್ನನ್ನು ತಾನೇ ತೋರಿಸಲು ಜೀವವನ್ನು ಪ್ರೇರೇಪಿಸುತ್ತದೆ ಎಂದು ಸಮಂಜಸವಾಗಿ ತೋರುತ್ತದೆ. ಆ ವಿಧಾನವು ತುಂಬಾ ಒಳ್ಳೆಯದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳ ಗ್ರಹದ ಮೇಲೆ ಭವಿಷ್ಯದಲ್ಲಿ ಜೀವನ ಹೀಗಿರಬಹುದು? ಸಂಶೋಧನೆಗಾಗಿ ಕೃತಕ ಮಂಗಳ’ ಆವಾಸಸ್ಥಾನವನ್ನು ಅನಾವರಣಗೊಳಿಸಿದ ನಾಸಾ

ಈ ಪ್ರಯೋಗಗಳಿಂದ ಸಂಗ್ರಹಿಸಲಾದ ಮಂಗಳದ ಸೂಕ್ಷ್ಮಜೀವಿಗಳನ್ನು ನೋಡಿದರೆ ಅಷ್ಟು ಪ್ರಮಾಣದ ನೀರನ್ನು ನಿಭಾಯಿಸಲು ಸಾಧ್ಯವಾಗದೆ ಅವು ಸ್ವಲ್ಪ ಸಮಯದ ನಂತರ ಸತ್ತವು. ಮರುಭೂಮಿಯಲ್ಲಿ ಅರೆ ಸತ್ತಿರುವ ನಿಮ್ಮನ್ನು ಅನ್ಯಲೋಕದ ಬಾಹ್ಯಾಕಾಶ ನೌಕೆಯು ಕಂಡುಹಿಡಿದಂತೆ. ಮನುಷ್ಯರಿಗೆ ನೀರು ಬೇಕು, ಆದರೆ ಅವನನ್ನು ಸಮುದ್ರದ ಮಧ್ಯದಲ್ಲಿ ಇಟ್ಟರೆ ಏನು ಪ್ರಯೋಜನ? ಮಂಗಳನಲ್ಲಿ ಜೀವಿಗಳ ಪತ್ತೆಗಾಗಿ ಹೊಸ ಮಿಷನ್ ಬೇಕು ಎಂದು ವಿಜ್ಞಾನಿ ಕರೆ ನೀಡಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Thu, 31 August 23

ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ