Eiffel Tower: ಐಫೆಲ್ ಟವರ್‌ಗೆ ಬಾಂಬ್ ಬೆದರಿಕೆ ಕರೆ: ಸಾರ್ವಜನಿಕರ ಪ್ರವೇಶ ನಿರ್ಬಂಧ
Bomb threat: ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರದಲ್ಲಿರುವ ಐಫೆಲ್ ಟವರ್‌ಗೆ ಶನಿವಾರ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆ ಮುನ್ನೆಚ್ಚರಿಕೆಯಾಗಿ ಐಫೆಲ್ ಟವರ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಪ್ಯಾರಿಸ್, ಆಗಸ್ಟ್ 12: ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಗರದಲ್ಲಿರುವ ಐಫೆಲ್ ಟವರ್‌ಗೆ (Eiffel Tower) ಶನಿವಾರ ಬಾಂಬ್ ಬೆದರಿಕೆ ಕರೆ ಬಂದ ಹಿನ್ನಲೆ ಮುನ್ನೆಚ್ಚರಿಕೆಯಾಗಿ ಐಫೆಲ್ ಟವರ್‌ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಐಫೆಲ್ ಟವರ್ನ ಎಲ್ಲಾ ಮೂರು ಮಹಡಿಗಳನ್ನು ಸದ್ಯ ತೆರವು ಮಾಡಲಾಗಿದೆ. ಬಾಂಬ್ ನಿಷ್ಕ್ರಿಯ ತಜ್ಞರು ಮತ್ತು ಪೊಲೀಸರ ತಂಡವು ಒಂದು ಮಹಡಿಯಲ್ಲಿ ರೆಸ್ಟೋರೆಂಟ್ ಸೇರಿದಂತೆ ಸುತ್ತಮುತ್ತ ಪ್ರದೇಶದ ಮೇಲೆ ಕಣ್ಗಾವಲು ವಹಿಸಿದ್ದಾರೆ.
ಐಫೆಲ್ ಟವರ್ನ ದಕ್ಷಿಣ ಭಾಗದಲ್ಲಿ ಪೊಲೀಸ್ ಠಾಣೆ ಇದೆ. ಆವರಣದೊಳಗೆ ಪ್ರವೇಶಿಸಲು ಅನುಮತಿಸುವ ಮೊದಲು ಅಧಿಕಾರಿಗಳು ವಿಡಿಯೋ ಕಣ್ಗಾವಲು ಮತ್ತು ಸಂದರ್ಶಕರ ಭದ್ರತಾ ತಪಾಸಣೆಗಳನ್ನು ಕೈಗೊಳ್ಳುತ್ತಾರೆ.
ಇದನ್ನೂ ಓದಿ: ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಅನ್ವರ್-ಉಲ್-ಹಕ್ ಕಾಕರ್ ನೇಮಕ
ಜನವರಿ 1887 ರಲ್ಲಿ ಐಫೆಲ್ ಟವರ್ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು, ಮಾರ್ಚ್ 31, 1889 ರಂದು ಪೂರ್ಣಗೊಳಿಸಲಾಯಿತು. ಇದು 1889 ರ ವಿಶ್ವ ಮೇಳದ ಸಮಯದಲ್ಲಿ ಎರಡು ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದರು.
ಎಎನ್ಐ ಟ್ವೀಟ್
ಬಾಂಬ್ ಬೆದರಿಕೆಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಅನ್ನು ಶನಿವಾರ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ ಎಂದು ಫ್ರೆಂಚ್ ಪೊಲೀಸ್ ಮೂಲವೊಂದು ಮಾಹಿತಿ ನೀಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
The Eiffel Tower in Paris was closed to the public on Saturday after being evacuated as a precautionary measure following a bomb threat, a French police source said, reports Reuters
— ANI (@ANI) August 12, 2023
ಇದನ್ನೂ ಓದಿ: ಕೊರೊನಾವೈರಸ್ನ ಹೊಸ ತಳಿ ಎರಿಸ್ನ್ನು ‘ಕುತೂಹಲಕಾರಿ ರೂಪಾಂತರಿ’ ಎಂದು ವರ್ಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ
ಘಟನೆಯ ಎರಡು ಗಂಟೆಗಳ ನಂತರ ಪ್ರವಾಸಿಗರನ್ನು ಮತ್ತೆ ಐಫೆಲ್ ಟವರ್ ಭೇಟಿಗೆ ಅನುಮತಿಸಲಾಗಿದೆ ಎಂದು ಫ್ರೆಂಚ್ ಪೊಲೀಸ್ ಮೂಲವನ್ನು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಇದು ತಪ್ಪು ಕರೆ, ಪ್ರವಾಸಿಗರನ್ನು ಮತ್ತೆ ಐಫೆಲ್ ಟವರ್‌ಗೆ ಭೇಟಿ ನೀಡಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:50 pm, Sat, 12 August 23