Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾವೈರಸ್​​ನ ಹೊಸ ತಳಿ ಎರಿಸ್​​ನ್ನು ‘ಕುತೂಹಲಕಾರಿ ರೂಪಾಂತರಿ’ ಎಂದು ವರ್ಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ

ಕೊವಿಡ್-19 ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿನ ಟೆಕ್ನಿಕಲ್ ಲೀಡ್, ಮಾರಿಯಾ ವ್ಯಾನ್ ಕೆರ್ಖೋವ್, EG.5 ಹೆಚ್ಚಿದ ಪ್ರಸರಣವನ್ನು ಹೊಂದಿದೆ. ಆದರೆ ಇದು ಇತರ ಓಮಿಕ್ರಾನ್ ರೂಪಾಂತರಗಳಿಗಿಂತ ಹೆಚ್ಚು ತೀವ್ರವಾಗಿಲ್ಲ ಎಂದು ಹೇಳಿದರು. 2021 ರ ಅಂತ್ಯದಿಂದ ಪ್ರಸರಣದಲ್ಲಿರುವ ಒಮಿಕ್ರಾನ್​ನ ಇತರ ಉಪವರ್ಗಗಳಿಗೆ ಹೋಲಿಸಿದರೆ EG.5 ನ ತೀವ್ರತೆಯ ಬದಲಾವಣೆಯನ್ನು ನಾವು ಪತ್ತೆಹಚ್ಚುವುದಿಲ್ಲ ಎಂದು ಅವರು ಹೇಳಿದರು.

ಕೊರೊನಾವೈರಸ್​​ನ ಹೊಸ ತಳಿ ಎರಿಸ್​​ನ್ನು 'ಕುತೂಹಲಕಾರಿ ರೂಪಾಂತರಿ' ಎಂದು ವರ್ಗೀಕರಿಸಿದ ವಿಶ್ವ ಆರೋಗ್ಯ ಸಂಸ್ಥೆ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on: Aug 11, 2023 | 2:31 PM

ದೆಹಲಿ ಆಗಸ್ಟ್ 11: ವಿಶ್ವ ಆರೋಗ್ಯ ಸಂಸ್ಥೆಯು (WHO) ಅಮೆರಿಕ ಮತ್ತು ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೊನಾವೈರಸ್​​​ನ (Coronavirus) ಹೊಸ ತಳಿ EG.5 ಅಥವಾ ಎರಿಸ್ (Eris) ಅನ್ನು ” ಕುತೂಹಲಕಾರಿ ರೂಪಾಂತರಿ “(variant of interest) ಎಂದು ವರ್ಗೀಕರಿಸಿದೆ. ಇದು ಇತರ ರೂಪಾಂತರಿಗಳಿಗಿಂತ ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುವುದಿಲ್ಲ ಎಂದು ಹೇಳಿದೆ. ಅಂದಾಜು ಶೇ17 ಕ್ಕಿಂತ ಹೆಚ್ಚು ಪ್ರಕರಣಗಳೊಂದಿಗೆ ಅಮೆರಿಕದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ವೇಗವಾಗಿ ಹರಡುವ ರೂಪಾಂತರವು ಚೀನಾ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಕೆನಡಾದಲ್ಲಿಯೂ ಪತ್ತೆಯಾಗಿದೆ.

“ಒಟ್ಟಾರೆಯಾಗಿ, ಲಭ್ಯವಿರುವ ಪುರಾವೆಗಳ ಪ್ರಕಾರ EG.5 ಇತರ ಪ್ರಸ್ತುತ ಪರಿಚಲನೆಯಲ್ಲಿರುವ Omicron ವಂಶಾವಳಿಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಸಾರ್ವಜನಿಕ ಆರೋಗ್ಯ ಅಪಾಯಗಳನ್ನು ಹೊಂದಿದೆ ಎಂದು ಸೂಚಿಸುವುದಿಲ್ಲ. EG.5 ನಿಂದ ಉಂಟಾಗುವ ಅಪಾಯದ ಬಗ್ಗೆ ಹೆಚ್ಚು ಸಮಗ್ರವಾದ ಮೌಲ್ಯಮಾಪನದ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಕೊವಿಡ್​​ನಿಂದಾಗಿ ಜಾಗತಿಕವಾಗಿ 6.9 ದಶಲಕ್ಷಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ವೈರಸ್ ಹೊರಹೊಮ್ಮಿದಾಗಿನಿಂದ 768 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. WHO ಮಾರ್ಚ್ 2020 ರಲ್ಲಿ ಸಾಂಕ್ರಾಮಿಕ ರೋಗ ಉಲ್ಬಮವಾಗಿರುವುದನ್ನು ಘೋಷಿಸಿತ,. ಈ ವರ್ಷದ ಮೇ ತಿಂಗಳಲ್ಲಿ ಕೊವಿಡ್-19 ಗಾಗಿ ಜಾಗತಿಕ ತುರ್ತು ಸ್ಥಿತಿಯನ್ನು ಕೊನೆಗೊಳಿಸಿತು.

ಕೊವಿಡ್-19 ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿನ ಟೆಕ್ನಿಕಲ್ ಲೀಡ್, ಮಾರಿಯಾ ವ್ಯಾನ್ ಕೆರ್ಖೋವ್, EG.5 ಹೆಚ್ಚಿದ ಪ್ರಸರಣವನ್ನು ಹೊಂದಿದೆ. ಆದರೆ ಇದು ಇತರ ಓಮಿಕ್ರಾನ್ ರೂಪಾಂತರಗಳಿಗಿಂತ ಹೆಚ್ಚು ತೀವ್ರವಾಗಿಲ್ಲ ಎಂದು ಹೇಳಿದರು. 2021 ರ ಅಂತ್ಯದಿಂದ ಪ್ರಸರಣದಲ್ಲಿರುವ ಒಮಿಕ್ರಾನ್​ನ ಇತರ ಉಪವರ್ಗಗಳಿಗೆ ಹೋಲಿಸಿದರೆ EG.5 ನ ತೀವ್ರತೆಯ ಬದಲಾವಣೆಯನ್ನು ನಾವು ಪತ್ತೆಹಚ್ಚುವುದಿಲ್ಲ ಎಂದು ಅವರು ಹೇಳಿದರು.

ಅನೇಕ ದೇಶಗಳು ಕೋವಿಡ್-19 ಡೇಟಾವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡುತ್ತಿಲ್ಲ ಎಂದು ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ವಿಷಾದಿಸಿದ್ದಾರೆ. ವೈರಸ್‌ಗೆ ಸಂಬಂಧಿಸಿದ ಆಸ್ಪತ್ರೆಗಳು ಮತ್ತು ಐಸಿಯು ದಾಖಲಾತಿಗಳನ್ನು ಕೇವಲ ಶೇ11 ಮಾತ್ರ ವರದಿ ಮಾಡಿದ್ದಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮತ್ತೆ ಕೋವಿಡ್ ಆತಂಕ; ಯುಕೆಯಾದ್ಯಂತ ಹರಡಿದೆ ಹೊಸ ತಳಿ ಎರಿಸ್: ವರದಿ

ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್​​ಗಾಗಿ ಸ್ಥಾಯಿ ಶಿಫಾರಸುಗಳ ಗುಂಪನ್ನು ಮಾಡಿದ್ದು ಇದರಲ್ಲಿ ಕೋವಿಡ್ ಡೇಟಾ, ನಿರ್ದಿಷ್ಟವಾಗಿ ಮರಣದ ಡೇಟಾ, ಅನಾರೋಗ್ಯದ ಡೇಟಾ, ಮತ್ತು ವ್ಯಾಕ್ಸಿನೇಷನ್ ಬಗ್ಗೆ ವರದಿ ಮಾಡುವುದನ್ನು ಮುಂದುವರಿಸಲು ದೇಶಗಳನ್ನು ಒತ್ತಾಯಿಸಿತು. ಅನೇಕ ದೇಶಗಳ ಡೇಟಾದ ಅನುಪಸ್ಥಿತಿಯು ವೈರಸ್ ವಿರುದ್ಧ ಹೋರಾಡುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ ಎಂದು ವ್ಯಾನ್ ಕೆರ್ಖೋವ್ ಹೇಳಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ, ನಾವು ನಿರೀಕ್ಷಿಸಲು ಅಥವಾ ಕಾರ್ಯನಿರ್ವಹಿಸಲು ಅಥವಾ ಹೆಚ್ಚು ಚುರುಕಾಗಿರಲು ಉತ್ತಮ ಪರಿಸ್ಥಿತಿಯಲ್ಲಿದ್ದೆವು ಎಂದು ಅವರು ಹೇಳಿದರು. ಈಗ ಅದನ್ನು ಮಾಡುವುದು ಕಾರ್ಯ ವಿಳಂಬವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್