ಚಂದ್ರಯಾನ 3 ಉಡಾವಣೆಗೊಂಡು ವಾರದ ಬಳಿಕ ಚಂದ್ರನತ್ತ ಹೊರಟ ರಷ್ಯಾದ ಬಾಹ್ಯಾಕಾಶ ನೌಕೆ
ಚಂದ್ರಯಾನ 3 ಉಡಾವಣೆಗೊಂಡು ವಾರದ ಬಳಿಕ ಚಂದ್ರನತ್ತ ರಷ್ಯಾದ ಬಾಹ್ಯಾಕಾಶ ನೌಕೆ ಹೊರಟಿದೆ. ಅದೂ ಕೂಡ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯುವ ದಿನವೇ ಅಂದರೆ ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲಿದೆ.
ಚಂದ್ರಯಾನ 3 ಉಡಾವಣೆಗೊಂಡು ವಾರದ ಬಳಿಕ ಚಂದ್ರನತ್ತ ರಷ್ಯಾದ ಬಾಹ್ಯಾಕಾಶ ನೌಕೆ ಹೊರಟಿದೆ. ಅದೂ ಕೂಡ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಇಳಿಯುವ ದಿನವೇ ಅಂದರೆ ಆಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲಿದೆ. ಸುಮಾರು 50 ವರ್ಷಗಳ ನಂತರ ರಷ್ಯಾ ಮತ್ತೆ ಚಂದ್ರನ ಅಂಗಳಕ್ಕೆ ಇಳಿಯಲು ಪ್ರಯತ್ನಿಸುತ್ತಿದೆ. 1976 ರ ನಂತರ ರಷ್ಯಾ ತನ್ನ ಮೊದಲ ಲೂನಾ -25 ಮೂನ್ ಲ್ಯಾಂಡರ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಸೋಯುಜ್-2 ರಾಕೆಟ್ ಸಹಾಯದಿಂದ ಲೂನಾ-25 ಅನ್ನು ಉಡಾವಣೆ ಮಾಡಿತ್ತು.
ಭಾರತವು ಚಂದ್ರಯಾನ-3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು, ಅದರ ನಂತರ ಈಗ ರಷ್ಯಾ ಕೂಡ ಚಂದ್ರನ ಮಿಷನ್ ಅನ್ನು ಪ್ರಾರಂಭಿಸಿದೆ. ಉಡಾವಣೆಯಾದ ಸುಮಾರು 564 ಸೆಕೆಂಡುಗಳ ನಂತರ ಫ್ರಿಗೇಟ್ ಬೂಸ್ಟರ್ ರಾಕೆಟ್‌ನ ಮೂರನೇ ಹಂತದಿಂದ ಬೇರ್ಪಟ್ಟಿತು. ಉಡಾವಣೆಯಾದ ಸುಮಾರು ಒಂದು ಗಂಟೆಯ ನಂತರ, ಲೂನಾ-25 ಬಾಹ್ಯಾಕಾಶ ನೌಕೆಯು ಬೂಸ್ಟರ್‌ನಿಂದ ಬೇರ್ಪಡುತ್ತದೆ.
ಬಾಹ್ಯಾಕಾಶ ನೌಕೆಯು ನೀರು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಹುಡುಕುತ್ತದೆ, ಅದೇ ಸಮಯದಲ್ಲಿ, ಲ್ಯಾಂಡರ್‌ನಲ್ಲಿ ಅನೇಕ ಕ್ಯಾಮೆರಾಗಳಿವೆ, ಇದು ಟೈಮ್‌ಲ್ಯಾಪ್ಸ್ ತುಣುಕನ್ನು ಮತ್ತು ಲ್ಯಾಂಡಿಂಗ್‌ನ ಅದ್ಭುತ ಚಿತ್ರಗಳನ್ನು ಸೆರೆಹಿಡಿಯುತ್ತದೆ.
ಒಂದೊಮ್ಮೆ ವಿಕ್ರಂ ಲ್ಯಾಂಡರ್ ಮತ್ತೆ ರಷ್ಯಾದ ನೌಕೆ ನಡುವೆ ಘರ್ಷಣೆ ಉಂಟಾದರೆ ಎನ್ನುವ ಭಯ ಬೇಡ ಎರಡೂ ಬೇರೆ ಬೇರೆ ಪ್ರದೇಶಗಳಲ್ಲಿ ಲ್ಯಾಂಡಿಂಗ್ ಆಗಲಿದೆ.
ಐದು ದಿನಗಳಲ್ಲಿ ನೌಕೆಯು ಚಂದ್ರನ ಕಕ್ಷೆಯನ್ನು ತಲುಪಲಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯುವ ಮೊದಲು ಅದು ಸರಿಯಾದ ಸ್ಥಳವನ್ನು ಆಯ್ಕೆ ಮಾಡಲು ಮೂರರಿಂದ ಏಳು ದಿನಗಳನ್ನು ತೆಗೆದುಕೊಳ್ಳುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:30 am, Fri, 11 August 23