Operation Sindoor; ನಾಗರಿಕರಿಗೆ ತೊಂದರೆಯಾಗದಂತೆ ಕೇವಲ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗಿದೆ: ಡಾ ಮಂಜುನಾಥ್
ಭಾರತವು ಪಾಕಿಸ್ತಾನದ ಮೇಲೆ ಯುದ್ಧ ಸಾರಿಲ್ಲ, ಇಂದು ಬೆಳಗ್ಗೆ ನಡೆದಿದ್ದು ಉಗ್ರರ ನೆಲೆಗಳ ಮೇಲೆ ದಾಳಿ, ಸಾಂಪ್ರದಾಯಿಕ ಯುದ್ಧ ಶುರುವಾಗಿಲ್ಲ, ವಿಶ್ವದ ಅತಿ ದೊಡ್ಡ ಸಮಸ್ಯೆಯಾಗಿರುವ ಭಯೋತ್ಪಾದನೆಯನ್ನು ಮಟ್ಟಹಾಕಲು ಭಾರತ ದಿಟ್ಟ ಹೆಜ್ಜೆಯನ್ನಿಟ್ಟಿದೆ, ಭಯೋತ್ಪಾದಕರು ನಿರಂತರವಾಗಿ ಭಾರತವನ್ನು ಕಾಡುತ್ತಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಎಂದು ಡಾ ಮಂಜುನಾಥ್ ಹೇಳಿದರು.
ರಾಮನಗರ, ಮೇ 7: ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಇವತ್ತು ಐತಿಹಾಸಿಕ ದಿನ, ಪಾಕಿಸ್ತಾನದಲ್ಲಿದ್ದ 9 ಉಗ್ರರ ತಾಣಗಳನ್ನು ಭಾರತದ ವಾಯುಸೇನೆ (Indian Air Force) ಟಾರ್ಗೆಟ್ ಮಾಡಿಕೊಂಡು ನೆಲಸಮಗೊಳಿಸಿದೆ, ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅತ್ಯಂತ ಕರಾರುವಕ್ಕಾಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆದಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿಎನ್ ಮಂಜುನಾಥ್ ಹೇಳಿದರು. ದಾಳಿ ನಡೆಸುವ ಮೊದಲು ಭಾರತವು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ರಾಜತಾಂತ್ರಿಕ ಹೋರಾಟ ನಡೆಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶ್ವಾಸ ಗಳಿಸಿಕೊಂಡು ಪಾಕಿಸ್ತಾನವನ್ನು ಐಸೋಲೇಟ್ ಮಾಡಿತು ಮತ್ತು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತ್ತಿನಲ್ಲಿಡುವ ಮೂಲಕವೂ ಭರ್ಜರಿ ಯಶಕಂಡಿತು ಎಂದು ಮಂಜುನಾಥ್ ಹೇಳಿದರು.
ಇದನ್ನೂ ಓದಿ: ಪಾಕಿಸ್ತಾನ ದಾಳಿ ಮಾಡಿದರೆ ಪ್ರತಿದಾಳಿಗೆ ಸಿದ್ಧ; ಜಾಗತಿಕ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಅಜಿತ್ ದೋವಲ್ ಮಾಹಿತಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

