ಆಸ್ಟ್ರೇಲಿಯಾದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ; ಪೂಜೆ ಮಾಡಿ ಕುಣಿದು ಕುಪ್ಪಳಿಸಿದ ಅನಿವಾಸಿ ಕನ್ನಡಿಗರು

ಆಸ್ಟ್ರೇಲಿಯಾದಲ್ಲೂ ಕೂಡ ಅನಿವಾಸಿ ಕನ್ನಡಿಗರು ಶ್ರೀ ಗುರು ರಾಘವೇಂದ್ರ ರಾಯರ ಆರಾಧನ ಮಹೋತ್ಸವವನ್ನ ಆಸ್ಟ್ರೇಲಿಯಾದ ಪರ್ಥ್‌ನಲ್ಲಿ ಆಚರಣೆ ಮಾಡಿದ್ದಾರೆ. ಪರ್ಥ್‌ನ ಶ್ರೀ ಗುರು ರಾಘವೇಂದ್ರ ಸೇವ ಸಮಿತಿಯಿಂದ 11 ನೇ ಆರಾಧನ ಮಹೋತ್ಸವ ಜರುಗಿದೆ. ರಾಯರ ಆರಾಧನ ಮಹೋತ್ಸವದಲ್ಲಿ ಪ್ರಹ್ಲಾದ ರಾಯರು, ರಾಮ ಸೀತೆ, ಲಕ್ಷ್ಮಣ ಹನುಮನ ವಿಗ್ರಹಗಳಿಗೆ ಪೂಜೆ ಮತ್ತು ಅಭಿಷೇಕ ನೇರವೆರಿಸಲಾಗಿದೆ.

Follow us
TV9 Web
| Updated By: ಆಯೇಷಾ ಬಾನು

Updated on: Sep 03, 2023 | 9:42 AM

16ನೇ ಶತಮಾನದ ಸಂತ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ(Raghavendra Aradhana Mahotsava 2023) ಹಿನ್ನೆಲೆ ಮಂತ್ರಾಲಯ ಸೇರಿದಂತೆ ಪ್ರಪಂಚದಾದ್ಯಂತ ಬೃಂದಾವನಗಳಲ್ಲಿ ರಾಯರ ಆರಾಧನೆ ನಡೆಯುತ್ತಿದೆ. ಆಸ್ಟ್ರೇಲಿಯಾದಲ್ಲೂ ಕೂಡ ಅನಿವಾಸಿ ಕನ್ನಡಿಗರು ಶ್ರೀ ಗುರು ರಾಘವೇಂದ್ರ(Sri Guru Raghavendra Swamy) ರಾಯರ ಆರಾಧನ ಮಹೋತ್ಸವವನ್ನ ಆಸ್ಟ್ರೇಲಿಯಾದ ಪರ್ಥ್‌ನಲ್ಲಿ ಆಚರಣೆ ಮಾಡಿದ್ದಾರೆ. ಪರ್ಥ್‌ನ ಶ್ರೀ ಗುರು ರಾಘವೇಂದ್ರ ಸೇವ ಸಮಿತಿಯಿಂದ 11 ನೇ ಆರಾಧನ ಮಹೋತ್ಸವ ಜರುಗಿದೆ.

ರಾಯರ ಆರಾಧನ ಮಹೋತ್ಸವದಲ್ಲಿ ಪ್ರಹ್ಲಾದ ರಾಯರು, ರಾಮ ಸೀತೆ, ಲಕ್ಷ್ಮಣ ಹನುಮನ ವಿಗ್ರಹಗಳಿಗೆ ಪೂಜೆ ಮತ್ತು ಅಭಿಷೇಕ ನೇರವೆರಿಸಲಾಗಿದೆ.ಇನ್ನೂ ತುಳಸಿ ಪೂಜೆ ಮಂತ್ರಗೋಷಿಗಳಿಂದ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಕಲಾವಿದರಿಂದ ಭರತನಾಟ್ಯ ಆಯೋಜನೆ ಮಾಡಲಾಗಿತ್ತು.

ರಾಯಚೂರಿನ ವೃಂದಾವನದಲ್ಲಿ ಹಬ್ಬದ ಸಂಭ್ರಮ

ಇನ್ನು ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸಾರ್ವಭೌಮರು ವೃಂದಾವನಸ್ಥರಾದ ಮರುದಿನವನ್ನ ಮಂತ್ರಾಲಯದಲ್ಲಿ ಉತ್ತರರಾಧನೆಯಾಗಿ ಆಚರಿಸಲಾಗುತ್ತೆ. ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಹಿನ್ನೆಲೆ ರಾಯಚೂರಿನ ರಾಯರ ಮಠದಲ್ಲಿ ಸಂಭ್ರಮ ಮನೆ ಮಾಡಿದೆ. ಪೂರ್ವಾರಾಧನೆ ಅಂಗವಾಗಿ ತಮಿಳುನಾಡಿನ ಶ್ರೀ ಕ್ಷೇತ್ರ ಶ್ರೀರಂಗನ ಶ್ರೀರಂಗನಾಥ ದೇವಸ್ಥಾನ ಹಾಗೂ ಆಂಧ್ರಪ್ರದೇಶದ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದಿಂದ ಮಂತ್ರಾಲಯಕ್ಕೆ ಶೇಷ ವಸ್ತ್ರವನ್ನು ರಾಯರಿಗೆ ಸಮರ್ಪಿಸಿಲಾಗಿದೆ.

ಶ್ರೀ ಮಠದಲ್ಲಿ ಪಾರಾಯಣ, ನೈರ್ಮಲ್ಯ ವಿಸರ್ಜನೆ, ಮೂಲರಾಮದೇವರ ಪೂಜೆಗಳನ್ನ ನೆರವೇರಿಸಲಾಗಿದೆ. ಜೊತೆಗೆ ರಾಯರ ಮೂಲ ಬೃಂದಾವನಕ್ಕೆ ಶ್ರೀಗಳಾದ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಿದ್ರು. ನಂತ್ರ ಉತ್ತರಾಧನೆ ವೇಳೆ ಆಚರಿಸಲಾಗೋ ವಸಂತೋತ್ಸವದ ಅಂಗವಾಗಿ ಶ್ರೀಗಳು ರಾಯರಿಗೆ ಬಣ್ಣವನ್ನ ಅರ್ಪಿಸಿದ್ರು. ನಂತರ ಶ್ರೀಗಳು ಭಕ್ತರಿಗೆ, ಅರ್ಚಕರಿಗೆ ಬಣ್ಣವನ್ನ ಎರಚಿ ಬಣ್ಣದೋಕುಳಿ ಆಡೋ ಮೂಲಕ ವಸಂತೋತ್ಸವ ಆಚರಣೆ ಮಾಡಿದ್ರು. ಅಪಾರ ಭಕ್ತರು ಈ ವಸಂತೋತ್ಸವದಲ್ಲಿ ಭಾಗಿಯಾಗಿದ್ದರು.

ಉತ್ತರಾಧನೆ ಹಿನ್ನೆಲೆ ರಾಯರು ಪ್ರಹ್ಲಾದ್ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜ ಬೀದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿಯಿದೆ. ಹೀಗಾಗಿ ಗುರುರಾಯರನ್ನ ಪ್ರಹ್ಲಾದ್ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನಂತರ ಮಠದ ಮದ್ವದ್ವಾರ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸದತ್ತ ಶ್ರೀಗಳು ಆಗಮಿಸಿ ಪೂಜೆ ಸಲ್ಲಿಸಿದ್ರು. ನಂತರ ಶ್ರೀಗಳು ಭಕ್ತರಿಗೆ ಆಶಿರ್ವಚನೆ ಮಾಡಿದ್ರು. ಈ ಬಾರಿ ವಿಶೇಷವಾಗಿ ಚಂದ್ರಯಾನ 3 ಯಶಸ್ವಿಯಾಗಿದ್ದನ್ನ ನೆನೆದ್ರು. ಇದು ವಿಶ್ವದಲ್ಲೇ ಹೆಮ್ಮೆಯ ವಿಷಯ. ಹೀಗಾಗಿ ಚಂದ್ರಯಾನ 3 ರ ಮಾದರಿಯಲ್ಲಿ ಸೂರ್ಯನತ್ತ ಹೊರಟಿರೊ ಆದಿತ್ಯ ಎಲ್​1 ಕೂಡ ಯಶಸ್ವಿಯಾಗ್ಲಿ ಅಂತ ಹಾರೈಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ