ಇಸ್ಲಾಮಾಬಾದ್ ಮಾರ್ಚ್ 19: ಪಾಕಿಸ್ತಾನ (Pakistan) ಅಫ್ಘಾನಿಸ್ತಾನದ (Afghanistan) ಮೇಲೆ ರಾತ್ರೋರಾತ್ರಿ ವೈಮಾನಿಕ ದಾಳಿ ನಡೆಸಿದ್ದರ ಬೆನ್ನಲ್ಲೇ ತಾಲಿಬಾನ್ ಗಡಿಯಾದ್ಯಂತ ಗುಂಡು ಹಾರಿಸಿದೆ ಎಂದು ಅಲ್ ಜಜೀರಾ ಮಾಧ್ಯಮ ವರದಿ ಮಾಡಿದೆ. ಸೋಮವಾರ ರಾತ್ರಿಯ ದಾಳಿಯ ನಂತರ ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವೆ ಸೋಮವಾರ ಉದ್ವಿಗ್ನತೆ ಉಂಟಾಯಿತು. ಗಡಿ ಪ್ರದೇಶಗಳಲ್ಲಿ ಅಡಗಿರುವ ಸಶಸ್ತ್ರ ಗುಂಪುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ. ಈ ದಾಳಿಯಲ್ಲಿ ಎಂಟು ಮಹಿಳೆಯರು ಮತ್ತು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ತಾಲಿಬಾನ್ ಹೇಳಿದೆ.
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಸೋಮವಾರದ ನಂತರ ಪಾಕಿಸ್ತಾನದ ನೆಲೆಗಳ ಮೇಲೆ ಗಡಿಯುದ್ದಕ್ಕೂ ಗುಂಡಿನ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಇಸ್ಲಾಮಾಬಾದ್ ಈ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
“ಪ್ರತಿಕಾರ” ದಾಳಿಗಳು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಅಥವಾ ಪಾಕಿಸ್ತಾನಿ ತಾಲಿಬಾನ್ ಕಮಾಂಡರ್‌ಗಳ ಅಡಗುತಾಣಗಳನ್ನು ಗುರಿಯಾಗಿಸಿದ್ದವು. ಅವು ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಾಯೋಜಿಸಲಾಗುತ್ತಿದೆ ಮತ್ತು ಗಡಿಯಾಚೆಯಿಂದ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ಮಿಲಿಟರಿ ಮತ್ತು ವಿದೇಶಾಂಗ ಸಚಿವಾಲಯದ ಮೂಲಗಳು ಅಲ್ ಜಜೀರಾಗೆ ತಿಳಿಸಿವೆ.
ಆದಾಗ್ಯೂ, ಶನಿವಾರದಂದು ಆತ್ಮಹತ್ಯಾ ಬಾಂಬರ್‌ಗಳ ಗುಂಪು ಪಾಕಿಸ್ತಾನದ ಉತ್ತರ ವಜೀರಿಸ್ತಾನ್ ಜಿಲ್ಲೆಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಮಿಲಿಟರಿ ಚೆಕ್ ಪೋಸ್ಟ್ ಅನ್ನು ಗುರಿಯಾಗಿಸಿಕೊಂಡಿದ್ದು ಇದು ನೆರೆಯ ಅಫ್ಘಾನಿಸ್ತಾನದಲ್ಲಿ ಏಳು ಸೈನಿಕರ ಸಾವಿಗೆ ಕಾರಣವಾಗಿದೆ.
ಅಫ್ಘಾನಿಸ್ತಾನದ ಮಧ್ಯಂತರ ಸರ್ಕಾರವು ಪಾಕಿಸ್ತಾನಿ ಜೆಟ್‌ಗಳು ಪಕ್ಟಿಕಾ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿನ “ಸಾಮಾನ್ಯ ಜನರ” ಮನೆಗಳ ಮೇಲೆ ದಾಳಿ ಎಂದು ಹೇಳಿದೆ. ಈ ದಾಳಿಯಲ್ಲಿ ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ. ಇದರಲ್ಲಿ ಐದು ಮಹಿಳೆಯರು ಮತ್ತು ಮೂರು ಮಕ್ಕಳು ಸೇರಿದ್ದಾರೆ.
ಅಫ್ಘಾನಿಸ್ತಾನ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ X ನಲ್ಲಿ ನೀಡಿದ ಹೇಳಿಕೆಯಲ್ಲಿ, ಅವರು ಗುರಿಯಾಗಿರಿಸಿಕೊಂಡಿದ್ದಾರೆ ಎಂದು ಹೇಳಿಕೊಂಡ ಪಾಕಿಸ್ತಾನದ ವ್ಯಕ್ತಿ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ . ಅಫ್ಘಾನಿಸ್ತಾನದ ಭೂಪ್ರದೇಶದ ಉಲ್ಲಂಘನೆಯಾದ “ಅಜಾಗರೂಕ ಕ್ರಮ” ವನ್ನು ಕಾಬೂಲ್ “ಬಲವಾಗಿ ಖಂಡಿಸುತ್ತದೆ” ಎಂದು ಅವರು ಹೇಳಿದ್ದಾರೆ.
په افغانستان باندې د پاکستاني الوتکو د تجاوز په اړه د اسلامي امارت د ویاند څرګندونې https://t.co/pbCqKiJF36 pic.twitter.com/OZYsWWojLh
— Zabihullah (..ذبـــــیح الله م ) (@Zabehulah_M33) March 18, 2024
“ವಿಶ್ವದ ಮಹಾಶಕ್ತಿಗಳ ವಿರುದ್ಧ ಸ್ವಾತಂತ್ರ್ಯ ಹೋರಾಟದ ಸುದೀರ್ಘ ಅನುಭವವನ್ನು ಹೊಂದಿರುವ ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್, ತನ್ನ ಪ್ರದೇಶವನ್ನು ಆಕ್ರಮಿಸಲು ಯಾರನ್ನೂ ಅನುಮತಿಸುವುದಿಲ್ಲ” ಎಂದು ಪೋಸ್ಟ್ ನಲ್ಲಿ ಹೇಳಿದೆ.
2021 ರಲ್ಲಿ ತಾಲಿಬಾನ್ ಸರ್ಕಾರವು ಅಧಿಕಾರವನ್ನು ವಶಪಡಿಸಿಕೊಂಡ ನಂತರ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದೆ. ಇಸ್ಲಾಮಾಬಾದ್ ಪ್ರತಿಕೂಲ ಸಶಸ್ತ್ರ ಗುಂಪುಗಳು ಗಡಿಯಾಚೆಯಿಂದ ನಿಯಮಿತವಾಗಿ ದಾಳಿ ನಡೆಸುತ್ತವೆ ಎಂದು ಹೇಳಿಕೊಂಡಿದೆ.
ಅಫ್ಘಾನಿಸ್ತಾನವು ಏಪ್ರಿಲ್ 2022 ರಲ್ಲಿ ದೇಶದ ಪೂರ್ವದಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಲ್ಲಿ 47 ಜನರನ್ನು ಕೊಂದಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ವಿವೇಕ್ ರಾಮಸ್ವಾಮಿ ಪರಿಗಣಿಸದಿರಲು ಡೊನಾಲ್ಡ್ ಟ್ರಂಪ್ ನಿರ್ಧಾರ
ಸೋಮವಾರದ ದಾಳಿ ಎರಡು ದಿನಗಳ ಹಿಂದೆ ನಡೆದ ಆತ್ಮಹತ್ಯಾ ದಾಳಿಗೆ ಸಂಬಂಧಿಸಿರಬಹುದು ಎಂದು ವಿಶ್ಲೇಷಕರು ಸೂಚಿಸುತ್ತಾರೆ. ಈ ದಾಳಿಗೆ ಹೊಸದಾಗಿ ರಚಿಸಲಾದ ಜೈಶ್-ಎ-ಫುರ್ಸಾನ್-ಎ-ಮುಹಮ್ಮದ್, ಪಾಕಿಸ್ತಾನಿ ತಾಲಿಬಾನ್ ಬಣದ ನಾಯಕ ಹಫೀಜ್ ಗುಲ್ ಬಹದ್ದೂರ್ ನೇತೃತ್ವ ವಹಿಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಪಾಕಿಸ್ತಾನದೊಳಗೆ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಶಸ್ತ್ರ ಗುಂಪುಗಳು ಆಫ್ಘನ್ ನೆಲವನ್ನು ಬಳಸುತ್ತಿವೆ ಎಂಬ ಹೇಳಿಕೆಯನ್ನು ಪುನರಾವರ್ತಿಸಿದರು. “ನಮ್ಮ ವಿರುದ್ಧದ ಭಯೋತ್ಪಾದನೆಯನ್ನು ಹೆಚ್ಚಾಗಿ ಅಫ್ಘಾನಿಸ್ತಾನದಿಂದ ನಡೆಸಲಾಗುತ್ತಿದೆ” ಎಂದು ಅವರು ಹೇಳಿದ್ದು, ಅಫ್ಘಾನ್ ತಾಲಿಬಾನ್ ಈ ಆರೋಪವನ್ನು ನಿರಾಕರಿಸಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ