ಭಯೋತ್ಪಾದನೆಯ ಮೂಲಕ ಇತರ ದೇಶಗಳನ್ನು ನಾಶ ಮಾಡಲು ಸದಾ ಹಾತೊರೆಯುತ್ತಿರುವ ಪಾಕಿಸ್ತಾನ ಇದೀಗ ಭಯೋತ್ಪಾದನೆಯ ಮೂಲಕ ವಿನಾಶದತ್ತ ಸಾಗುತ್ತಿದೆ. ಪ್ರತಿ ದಿನ ಭಯೋತ್ಪಾದಕರ ದಾಳಿಯಿಂದಾಗಿ ಸರ್ಕಾರದ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು ಹುಟ್ಟಿಕೊಂಡಿವೆ.
ಇದೀಗ ಮತ್ತೆ ವಜೀರಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಮೇಲೆ ಉಗ್ರರ ದಾಳಿ ನಡೆದಿದೆ. ಇದರಲ್ಲಿ ಪಾಕಿಸ್ತಾನದ 6 ಪಾಕ್ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭಯೋತ್ಪಾದಕ ದಾಳಿಯ ಹೊಣೆಯನ್ನು ತೆಹ್ರೀಕ್-ಎ-ತಾಲಿಬಾನ್ (ಟಿಟಿಪಿ) ಹೊತ್ತುಕೊಂಡಿದೆ.
ಪಾಕಿಸ್ತಾನದ ಮಾಧ್ಯಮ ವರದಿಯ ಪ್ರಕಾರ, ಟಿಟಿಪಿ ಯೋಧರು ಮೇಲಿನ ದಕ್ಷಿಣ ವಜಿರಿಸ್ತಾನದ ಲಾಧಾ ಬಳಿ ಪಾಕಿಸ್ತಾನದ ಸೇನಾ ಪೋಸ್ಟ್ ಮೇಲೆ ಕ್ರೂರ ದಾಳಿ ನಡೆಸಿದರು. ಆರು ಯೋಧರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 4 ಜನರ ಸ್ಥಿತಿ ಚಿಂತಾಜನಕವಾಗಿದೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ದಾಳಿಯ ಹೊಣೆ ಹೊತ್ತುಕೊಂಡಿದೆ.
ಶಾಂತಿಯನ್ನು ತರಲು ನಿರಂತರ ಪ್ರಯತ್ನಗಳ ಹೊರತಾಗಿಯೂ, ವಜಿರಿಸ್ತಾನದಲ್ಲಿ ಸೇನೆಯ ಕಡೆಗೆ ಪರಿಸ್ಥಿತಿ ಗಂಭೀರವಾಗುತ್ತಿರುವುದು ಆತಂಕಕಾರಿಯಾಗಿದೆ. ಕಳೆದ ಒಂದು ತಿಂಗಳಲ್ಲಿ, ಪಾಕಿಸ್ತಾನದಲ್ಲಿ 10 ಕ್ಕೂ ಹೆಚ್ಚು ಸೇನಾ ಸಿಬ್ಬಂದಿಗಳ ಮೇಲೆ ಭಯೋತ್ಪಾದಕ ದಾಳಿಗಳು ವರದಿಯಾಗಿವೆ. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಯೋಧರು ಮೃತಪಟ್ಟಿದ್ದಾರೆ.
ಅಂತಾರಅಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ