ಭಯೋತ್ಪಾದನೆ ನಮ್ಮ ವ್ಯವಸ್ಥೆಯ ಭಾಗವಾಗಿಬಿಟ್ಟಿದೆ, ಅದನ್ನು ಅಳಿಸಿಹಾಕಲು ಒಂದು ಬ್ಲೂಪ್ರಿಂಟ್ ಬೇಕು: ಸಂತೋಷ್ ಲಾಡ್

ಅರುಣ್​ ಕುಮಾರ್​ ಬೆಳ್ಳಿ

Updated on: Apr 24, 2025 | 4:14 PM

ಭಯೋತ್ಪಾದಕರ ಕೃತ್ಯಗಳಿಂದ ಅಮಾಯಕ ಜನ ಸಾಯುತ್ತಿದ್ದಾರೆ, ಆದರೆ ಈ ಕೃತ್ಯಗಳೊಂದಿಗೆ ಸಮುದಾಯಗಳನ್ನು ಥಳುಕು ಹಾಕುವುದು ಬೇಡ ಎನ್ನುವ ಸಚಿವ ಲಾಡ್ ತಾನು ಯಾವುದೇ ಸಮುದಾಯವನ್ನು ಸಮರ್ಥನೆ ಮಾಡುವ ಪ್ರಯತ್ನ ಮಾಡುತ್ತಿಲ್ಲ, ನಡೆದಿರುವುದು ನೀಚ ಕೃತ್ಯವೇ, ಆದರೆ ಜಮ್ಮು ಮತ್ತು ಕಾಶ್ಮೀರದ ಸಂಸ್ಕೃತಿ ಬಹಳ ಅದ್ಭುತವಾಗಿದೆ ಮತ್ತು ಅಲ್ಲಿ ವಾಸ ಮಾಡುವ ಜನ ಬಹಳ ಚೆನ್ನಾಗಿದ್ದಾರೆ ಎಂದರು.

ದೇವನಹಳ್ಳಿ, ಏಪ್ರಿಲ್ 23: ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದ 178 ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದಿರುವ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗದಂತೆ ಕರ್ನಾಟಕದ ಜನರಲ್ಲಿ ಮನವಿ ಮಾಡಿಕೊಂಡರು. ಉಗ್ರರ ಕೃತ್ಯದ ಬಳಿಕ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಎಲ್ಲ ಕ್ರಮಗಳನ್ನ ಸ್ವಾಗತಸಿದ ಅವರು, ತಮ್ಮ ಪಕ್ಷ ಕೇಂದ್ರದೊಂದಿಗಿದೆ ಎಂದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಭಯೋತ್ಪಾದಕ ಕೃತ್ಯಗಳು ನಡೆದಿವೆ, ಭಯೋತ್ಪಾದನೆ ನಮ್ಮ ವ್ಯವಸ್ಥೆಯ ಒಂದು ಭಾಗವಾಗಿಬಿಟ್ಟಿದೆ, ಹಾಗಾಗಿ ಇದನ್ನು ಅಳಸಿಹಾಕಲು ಒಂದು ನೀಲಿನಕ್ಷೆಯನ್ನು ರೂಪಿಸಬೇಕಿದೆ ಎಂದು ಲಾಡ್ ಹೇಳಿದರು.

ಇದನ್ನೂ ಓದಿ:  ಪಹಲ್ಗಾಮ್‌ನ ಸ್ಥಳೀಯ ಜನ ತುಂಬಾನೇ ಫ್ರೆಂಡ್ಲಿ ಆಗ್ತಿದ್ರು; ಕಾಶ್ಮೀರ ಪ್ರವಾಸದ ಅನುಭವ ಹಂಚಿಕೊಂಡ ಮಂಗಳೂರಿನ ದಂಪತಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.