ಅಮೆರಿಕದ ಅಟ್ಲಾಂಟಾದಲ್ಲಿ ಶ್ರೀಕೃಷ್ಣ ದೇವಾಲಯ ನಿರ್ಮಾಣಕ್ಕೆ ಪುತ್ತಿಗೆ ಶ್ರೀಗಳಿಂದ ಶಂಕುಸ್ಥಾಪನೆ

ಅಮೆರಿಕದ ಅಟ್ಲಾಂಟಾದಲ್ಲಿ ಭಕ್ತರ ಸಹಕಾರದಿಂದ ಖರೀದಿಸಿದ ಆರು ಎಕರೆ ಜಾಗದಲ್ಲಿ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಪುತ್ತಿಗೆ ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು. ದೇವಾಲಯದ ಗರ್ಭಗುಡಿಯ ಕೆಳಗೆ ಭಕ್ತರ ಹೆಸರಿನಲ್ಲಿ ಶ್ಲೋಕಗಳನ್ನು ಬರೆದಿರುವ 700 ಇಟ್ಟಿಗೆಗಳನ್ನು ಇಡಲಾಗುತ್ತದೆ. ಇದು ಪುತ್ತಿಗೆ ಶ್ರೀಗಳ ಕೋಟಿಗೀತ ಬರಹ ಯೋಜನೆಯ ಭಾಗವಾಗಿರಲಿದೆ.

ಅಮೆರಿಕದ ಅಟ್ಲಾಂಟಾದಲ್ಲಿ ಶ್ರೀಕೃಷ್ಣ ದೇವಾಲಯ ನಿರ್ಮಾಣಕ್ಕೆ ಪುತ್ತಿಗೆ ಶ್ರೀಗಳಿಂದ ಶಂಕುಸ್ಥಾಪನೆ
ಶಂಕುಸ್ಥಾಪನೆ
Image Credit source: Daijiworld

Updated on: Nov 08, 2023 | 10:15 AM

ಅಮೆರಿಕದ ಅಟ್ಲಾಂಟಾದಲ್ಲಿ ಭಕ್ತರ ಸಹಕಾರದಿಂದ ಖರೀದಿಸಿದ ಆರು ಎಕರೆ ಜಾಗದಲ್ಲಿ ಬೃಹತ್ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕೆ ಪುತ್ತಿಗೆ ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು. ದೇವಾಲಯದ ಗರ್ಭಗುಡಿಯ ಕೆಳಗೆ ಭಕ್ತರ ಹೆಸರಿನಲ್ಲಿ ಶ್ಲೋಕಗಳನ್ನು ಬರೆದಿರುವ 700 ಇಟ್ಟಿಗೆಗಳನ್ನು ಇಡಲಾಗುತ್ತದೆ. ಇದು ಪುತ್ತಿಗೆ ಶ್ರೀಗಳ ಕೋಟಿಗೀತ ಬರಹ ಯೋಜನೆಯ ಭಾಗವಾಗಿರಲಿದೆ.

ಉಡುಪಿಯ ಹೆರ್ಗ ವೇದವ್ಯಾಸ ಭಟ್ ಶಂಕುಸ್ಥಾಪನೆ ವೈದಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ದೇವಸ್ಥಾನದ ಪ್ರಧಾನ ಅರ್ಚಕ ಜಯಪ್ರಸಾದ್ ಅಮ್ಮಣ್ಣಾಯ ನೇತೃತ್ವದಲ್ಲಿ ನಡೆಯುತ್ತಿರುವ ಯೋಜನೆಯ ವಿವರಗಳನ್ನು ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ವಿವರಿಸಿದರು.

ಮತ್ತಷ್ಟು ಓದಿ: Bhuvaneshwari Temple in Mysore palace: ಮೈಸೂರಿನಲ್ಲಿ ತಾಯಿ ಭುವನೇಶ್ವರಿ ವಿಶೇಷ ದೇಗುಲದ ಒಳನೋಟ ಇಲ್ಲಿದೆ

ವಿದ್ವಾನ್ ಕೇಶವ ರಾವ್ ತಾಡಿಪತ್ರಿ, ಬಾಲಕೃಷ್ಣ ಭಟ್, ಹರೀಶ್ ಭಟ್, ಅಜಯ್, ಮುರಳಿ, ಶ್ರೀಕಾಂತ್ ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:14 am, Wed, 8 November 23