ಇಸ್ಲಾಮಾಬಾದ್ ಮೇ 14: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (Pakistan-occupied Kashmir) ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪಾಕಿಸ್ತಾನಿ ಸೇನೆಯ ಅಧೀನದಲ್ಲಿರುವ ಅರೆಸೇನಾ ಪಡೆ ಪಾಕಿಸ್ತಾನಿ ರೇಂಜರ್‌ಗಳು (Pakistani Rangers) ಸೋಮವಾರ ಗುಂಡಿನ ದಾಳಿ ನಡೆಸಿದ್ದರಿಂದ ಕನಿಷ್ಠ ಮೂವರು ನಾಗರಿಕರು ಸಾವಿಗೀಡಾಗಿದ್ದಾರೆ. ಈ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಹೆಚ್ಚುತ್ತಿರುವ ಘರ್ಷಣೆಗಳ ನಡುವೆ ಇಸ್ಲಾಮಾಬಾದ್‌ನಲ್ಲಿ ತುರ್ತು ಸಭೆ ನಡೆದ ನಂತರ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರು ಈ ಪ್ರದೇಶಕ್ಕೆ ತಕ್ಷಣವೇ 23 ಶತಕೋಟಿ ಪಿಕೆಆರ್ ಬಿಡುಗಡೆಯನ್ನು ಘೋಷಿಸಿದ ದಿನದಂದು ಈ ಘಟನೆ ಸಂಭವಿಸಿದೆ. ಏರುತ್ತಿರುವ ವಿದ್ಯುತ್ ಬಿಲ್‌ಗಳು ಮತ್ತು ಹಿಟ್ಟಿನ ಬೆಲೆಗಳ ವಿರುದ್ಧ ಪ್ರತಿಭಟಿಸಲು ಒಂದು ವರ್ಷದ ಹಿಂದೆ ಪ್ರಾರಂಭವಾದ ಅಸಹಕಾರ ಚಳವಳಿಯಿಂದ ಇತ್ತೀಚಿನ ಉದ್ವಿಗ್ನತೆ ಉಂಟಾಗಿದೆ ಎಂದು ಪಾಕಿಸ್ತಾನದ ಫ್ರೈಡೇ ಟೈಮ್ಸ್ ವರದಿ ಮಾಡಿದೆ.
ಶುಕ್ರವಾರ ನಡೆದ ಶಾಂತಿಯುತ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದಾಗ ಸ್ಥಳೀಯ ಪೊಲೀಸರು ಮತ್ತು ಫೆಡರಲ್ ಪಡೆಗಳಾದ ಫ್ರಾಂಟಿಯರ್ ಮತ್ತು ಪಂಜಾಬ್ ಕಾನ್‌ಸ್ಟಾಬ್ಯುಲರಿಗಳು ಇಸ್ಲಾಮಾಬಾದ್‌ನಿಂದ ಚೀನಾದ ಕೆಲಸಗಾರರನ್ನು ರಕ್ಷಿಸಲು ಕಳುಹಿಸಿದ್ದು, ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿತು. ಶನಿವಾರ, ಪಿಒಕೆಯಲ್ಲಿ ಮುಷ್ಕರದ ಸಮಯದಲ್ಲಿ ಪೊಲೀಸರು ಮತ್ತು ನಾಗರಿಕರ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿತ್ತು. ಡಾನ್ ವರದಿ ಮಾಡಿದಂತೆ, ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸಾವಿಗೀಡಾಗಿದ್ದು 90 ಕ್ಕೂ ಹೆಚ್ಚು ಜನರು ಗಾಯಗೊಂಡರು.
#WATCH | Major unrest in Pakistan-occupied Kashmir’s (PoK) Muzaffarabad due to clashes between protestors and authorities.
This comes amid a wheel-jam strike that is continuing for the fourth consecutive day in Pakistan-occupied Kashmir (PoK).
The Awami Action Committee called… pic.twitter.com/sEvFQvbmPv
— ANI (@ANI) May 14, 2024
ಲಾಠಿ, ಅಶ್ರುವಾಯು ಮತ್ತು ರಸ್ತೆ ತಡೆ ಒಳಗೊಂಡ ಪ್ರತಿಭಟನಾಕಾರರ ವಿರುದ್ಧ ತೀವ್ರವಾದ ಪೊಲೀಸ್ ಕ್ರಮದ ದಿನದ ನಂತರ, ಶನಿವಾರದಂದು ನಾಗರಿಕರು ಪೊಲೀಸ್ ಅಧಿಕಾರಿಗಳನ್ನು ಬೆನ್ನಟ್ಟುವ ಮತ್ತು ದಾಳಿ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೇಂಜರ್‌ಗಳನ್ನು ಕರೆಸಲಾಯಿತು, ಪ್ರಧಾನ ಮಂತ್ರಿಯ ಘೋಷಣೆಯ ನಂತರ ಹಿಂತಿರುಗಬೇಕಿತ್ತು. ಬ್ರ್ಯಾಕೋಟ್ ಮೂಲಕ ಚಲಿಸುವ ಬದಲು ಅವರು ಕೊಹಾಲಾ ಮೂಲಕ ನಿರ್ಗಮಿಸಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಅವರು ಮುಜಫರಾಬಾದ್ ತಲುಪುತ್ತಿದ್ದಂತೆ, ಶೋರಾನ್ ಡ ನಕ್ಕಾ ಗ್ರಾಮದ ಬಳಿ ಕಲ್ಲು ತೂರಾಟ ನಡೆದಿದೆ. ಅದಕ್ಕೆ ಅವರು ಅಶ್ರುವಾಯು ಮತ್ತು ಗುಂಡಿನ ಮೂಲಕ ಪ್ರತಿಕ್ರಿಯಿಸಿದರು.
ಮುಜಫರಾಬಾದ್-ಬ್ರಾಕೋಟ್ ರಸ್ತೆಯಲ್ಲಿ ಮೂರು ರೇಂಜರ್ ವಾಹನಗಳಿಗೆ ಬೆಂಕಿ ಹಚ್ಚಿರುವುದನ್ನು ವೈರಲ್ ವಿಡಿಯೊಗಳು ತೋರಿಸಿವೆ.
ಅರಬ್ ನ್ಯೂಸ್‌ನೊಂದಿಗೆ ಮಾತನಾಡಿದ ಪಿಒಕೆ ಸರ್ಕಾರದ ವಕ್ತಾರ ಅಬ್ದುಲ್ ಮಜೀದ್ ಖಾನ್, “ವಿದ್ಯುತ್ ಮತ್ತು ಗೋಧಿ ಬೆಲೆಗಳನ್ನು ಕಡಿಮೆ ಮಾಡಲು ಅಧಿಸೂಚನೆಗಳನ್ನು ಹೊರಡಿಸಿದ ಹೊರತಾಗಿಯೂ, ಇತರ ಬೇಡಿಕೆಗಳನ್ನು ಪರಿಹರಿಸುವ ಜೊತೆಗೆ, ಪ್ರತಿಭಟನಾಕಾರರು ರೇಂಜರ್ಸ್ ಬೆಂಗಾವಲು ಪಡೆ ಮೇಲೆ ದಾಳಿ ಮಾಡಿದರು, ಇದು ಗುಂಡಿನ ವಿನಿಮಯಕ್ಕೆ ಕಾರಣವಾಯಿತು. ಈ ಸಂಘರ್ಷದಲ್ಲಿ ಮೂವು ನಾಗರಿಕರು ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾಗಿವೆ.
ವರದಿಗಳ ಪ್ರಕಾರ, ಹೊಸ ವಿದ್ಯುತ್ ದರವು 1 ರಿಂದ 100 ಯೂನಿಟ್‌ಗಳಿಗೆ ಪ್ರತಿ ಯೂನಿಟ್‌ಗೆ ₹ 3, 100 ರಿಂದ 300 ಯೂನಿಟ್‌ಗಳಿಗೆ ಪ್ರತಿ ಯೂನಿಟ್‌ಗೆ ₹ 5 ಮತ್ತು 300 ಕ್ಕೂ ಹೆಚ್ಚು ಯೂನಿಟ್‌ಗಳಿಗೆ ₹ 6 ಎಂದು ನಿಗದಿಪಡಿಸಲಾಗಿದೆ. ವಾಣಿಜ್ಯ ದರಗಳು 300 ಯೂನಿಟ್‌ಗಳವರೆಗೆ ಪ್ರತಿ ಯೂನಿಟ್‌ಗೆ ₹10 ಮತ್ತು ಅದಕ್ಕೂ ಮೀರಿದ ಪ್ರತಿ ಯೂನಿಟ್‌ಗೆ ₹15 ವಿಧಿಸಲಾಗಿದೆ. ಹೆಚ್ಚುವರಿಯಾಗಿ 20 ಕೆಜಿ ಹಿಟ್ಟಿನ ಚೀಲ ಈಗ , ₹1550ರಿಂದ ₹1000 ಆಗಿ, 40 ಕೆಜಿ ಚೀಲ ₹3100ರಿಂದ ₹2000ಆಗಿ ಕಡಿಮೆಯಾಗಿದೆ.
ಇದನ್ನೂ ಓದಿ: ಡಿವೋರ್ಸ್ ಬಳಿಕ ಗೇಟ್ಸ್ ಫೌಂಡೇಶನ್ಗೆ ರಾಜೀನಾಮೆ ಕೊಟ್ಟ ಮೆಲಿಂಡಾ; ಲಕ್ಷ ಕೋಟಿ ರೂ ಗಿಟ್ಟಿಸಿದ ಬಿಲ್ ಗೇಟ್ಸ್ ಹೆಂಡತಿ
ಜಮ್ಮು ಕಾಶ್ಮೀರ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (ಜೆಎಎಸಿ) ಬ್ಯಾನರ್ ಅಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ವ್ಯಾಪಾರಿಗಳ ನೇತೃತ್ವದಲ್ಲಿ ನಡೆದಿವೆ. ಪ್ರತಿಭಟನಕಾರರು ವಿದ್ಯುತ್ ಸೌಲಭ್ಯಗಳು, ಸಬ್ಸಿಡಿ ಗೋಧಿ ಮತ್ತು ಗಣ್ಯರಿಗೆ ಸವಲತ್ತುಗಳನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಮೇ 9 ಮತ್ತು 10 ರಂದು JAAC ಯೋಜಿತ ಲಾಂಗ್ ಮಾರ್ಚ್ ಅನ್ನು ತಡೆಯಲು ಪೊಲೀಸರು ಸುಮಾರು 70 ಕಾರ್ಯಕರ್ತರನ್ನು ಬಂಧಿಸಿದರು. ಇದು ದಾಡಿಯಾಲ್‌ನಲ್ಲಿ ತೀವ್ರ ಘರ್ಷಣೆಗೆ ಕಾರಣವಾಯಿತು ಮತ್ತು ದೊಡ್ಡ ಪ್ರಮಾಣದ ಮುಷ್ಕರಕ್ಕೆ ಕಾರಣವಾಯಿತು.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ