AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pakistan election: ಸಮ್ಮಿಶ್ರ ಸರ್ಕಾರ ರಚನೆಗೆ ಒಪ್ಪಿದ ಶೆಹಬಾಜ್ ಷರೀಫ್, ಬಿಲಾವಲ್ ಭುಟ್ಟೋ ಜರ್ದಾರಿ

ಗುರುವಾರ ಪಾಸಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದ್ದು, 265 ಸ್ಪರ್ಧಿಸಿರುವ ಸ್ಥಾನಗಳ ಮತ ಎಣಿಕೆ ಸಂಜೆ 5 ಗಂಟೆಗೆ ಮತದಾನ ಮುಗಿದ ನಂತರ ಪ್ರಾರಂಭವಾಯಿತು. ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಅವರ ಸಹೋದರ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪಂಜಾಬ್ ಹಂಗಾಮಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಅವರ ನಿವಾಸದಲ್ಲಿ ಪಿಪಿಪಿ ಉನ್ನತ ನಾಯಕರನ್ನು ಭೇಟಿಯಾಗಿದ್ದಾರೆ

Pakistan election: ಸಮ್ಮಿಶ್ರ ಸರ್ಕಾರ ರಚನೆಗೆ ಒಪ್ಪಿದ ಶೆಹಬಾಜ್ ಷರೀಫ್, ಬಿಲಾವಲ್ ಭುಟ್ಟೋ ಜರ್ದಾರಿ
ಬಿಲಾವಲ್ ಭುಟ್ಟೋ ಜರ್ದಾರಿ - ಶೆಹಬಾಜ್ ಷರೀಫ್
ರಶ್ಮಿ ಕಲ್ಲಕಟ್ಟ
|

Updated on: Feb 10, 2024 | 12:58 PM

Share

ಲಾಹೋರ್ ಫೆಬ್ರುವರಿ 10: ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಕೇಂದ್ರ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಒಪ್ಪಿಕೊಂಡಿವೆ. ಶೆಹಬಾಜ್ ಷರೀಫ್ (Shehbaz Sharif) ಬಿಲಾವಲ್ ಭುಟ್ಟೊ ಮತ್ತು ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಭೇಟಿಯಾದ ನಂತರ, ಪಾಕಿಸ್ತಾನದಲ್ಲಿ ಒಟ್ಟಿಗೆ ಕೆಲಸ ಮಾಡಲು ಅವರನ್ನು ಆಹ್ವಾನಿಸಿದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನದಲ್ಲಿನ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಅದೇ ವೇಳೆ ಮತ ಎಣಿಕೆ ಪ್ರಕ್ರಿಯೆಯು ವಿಳಂಬವಾಗಿದ್ದು ಶನಿವಾರ ಪೂರ್ಣಗೊಳ್ಳಲಿದೆ.

ಗುರುವಾರ ಸಾರ್ವತ್ರಿಕ ಚುನಾವಣೆ ನಡೆದಿದ್ದು, 265 ಸ್ಪರ್ಧಿಸಿರುವ ಸ್ಥಾನಗಳ ಮತ ಎಣಿಕೆ ಸಂಜೆ 5 ಗಂಟೆಗೆ ಮತದಾನ ಮುಗಿದ ನಂತರ ಪ್ರಾರಂಭವಾಯಿತು. ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಷರೀಫ್ ಅವರ ಸಹೋದರ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಪಂಜಾಬ್ ಹಂಗಾಮಿ ಮುಖ್ಯಮಂತ್ರಿ ಮೊಹ್ಸಿನ್ ನಖ್ವಿ ಅವರ ನಿವಾಸದಲ್ಲಿ ಪಿಪಿಪಿ ಉನ್ನತ ನಾಯಕರನ್ನು ಭೇಟಿಯಾಗಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಶೆಹಬಾಜ್ ಷರೀಫ್ ಅವರು ಜರ್ದಾರಿ ಅವರೊಂದಿಗೆ ಭವಿಷ್ಯದ ಸರ್ಕಾರ ರಚನೆಯ ಬಗ್ಗೆ ಚರ್ಚಿಸಿದ್ದು ನವಾಜ್ ಷರೀಫ್ ಅವರ ಸಂದೇಶವನ್ನು ರವಾನಿಸಿದರು ಎಂದು ಪಕ್ಷದ ಮೂಲಗಳು ಮಾಧ್ಯಮಗಳಿಗೆ  ತಿಳಿಸಿವೆ. 45 ನಿಮಿಷಗಳ ಸಭೆಯಲ್ಲಿ, ಶೆಹಬಾಜ್ ಷರೀಫ್ ಪಾಕಿಸ್ತಾನದಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಗಾಗಿ PML-N ನಾಯಕತ್ವದೊಂದಿಗೆ ಕೈಜೋಡಿಸಲು ಬಿಲಾವಲ್ ಭುಟ್ಟೋ ಮತ್ತು ಅವರ ತಂದೆ ಆಸಿಫ್ ಅಲಿ ಜರ್ದಾರಿ ಅವರನ್ನು ಕೇಳಿದರು.

ಪಂಜಾಬ್ ಮತ್ತು ಕೇಂದ್ರದಲ್ಲಿ ಸರ್ಕಾರ ರಚಿಸಲು ಇಬ್ಬರೂ ಪಿಪಿಪಿ ನಾಯಕರು ಒಪ್ಪಿಕೊಂಡಿದ್ದಾರೆ. ಎರಡೂ ಪಕ್ಷಗಳು ಮುಂದಿನ ಸಭೆಯಲ್ಲಿ ತಮ್ಮದೇ ಆದ ಅಭಿಪ್ರಾಯಗಳನ್ನು ಮಂಡಿಸಲಿದ್ದು, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ, ಯಾರು ಯಾವ ಕಚೇರಿಯನ್ನು ವಹಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಎಲ್ಲ ವಿಷಯಗಳನ್ನು ನಿರ್ಧರಿಸಲಾಗುವುದು ಎಂದು ವರದಿ ಹೇಳಿದೆ.

ಶುಕ್ರವಾರದಂದು, ನವಾಜ್ ಷರೀಫ್ ಅವರು ತಮ್ಮ ಮಾಜಿ ಮಿತ್ರಪಕ್ಷಗಳಾದ ಪಿಪಿಪಿ, ಜಮಿಯತ್ ಉಲೇಮಾ-ಎ-ಇಸ್ಲಾಂ (ಎಫ್) ಮತ್ತು ಮುತ್ತಹಿದಾ ಕ್ವಾಮಿ ಮೂವ್ಮೆಂಟ್ (ಪಾಕಿಸ್ತಾನ) ಸಹಾಯದಿಂದ ಏಕೀಕೃತ ಸರ್ಕಾರವನ್ನು ರಚಿಸುವ ಉದ್ದೇಶವನ್ನು ಘೋಷಿಸಿದರು.

ಸೇನೆಯ ಬೆಂಬಲಿತ PML-N 71 ಸ್ಥಾನಗಳನ್ನು ಪಡೆದುಕೊಂಡಿದ್ದು PPP 53 ಸ್ಥಾನಗಳನ್ನು ಪಡೆದುಕೊಂಡಿತು. ಉಳಿದಲ ಸ್ಥಾನಗಳು ಸಣ್ಣ ಪಕ್ಷಗಳು ಗೆದ್ವೆದಿವೆ. ಚುನಾಯಿತ 266 ಸೀಟುಗಳ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 15  ಸೀಟುಗಳ ಫಲಿತಾಂಶ ಇನ್ನೂ ಘೋಷಣೆಯಾಗಬೇಕಿದೆ.

ಏತನ್ಮಧ್ಯೆ, ಅನಿಶ್ಚಿತ ಆರ್ಥಿಕತೆ ಮತ್ತು ಇಮ್ರಾನ್ ಖಾನ್ ಅವರ ಅಧಿಕಾರದಿಂದ ಹೊರಹಾಕಲ್ಪಟ್ಟ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ PML-N ನ “ಗೆಲುವು” ಎಂದು ನವಾಜ್ ಷರೀಫ್ ಹೇಳಿದ್ದಾರೆ. ಲಾಹೋರ್‌ನ ಮಾಡೆಲ್ ಟೌನ್‌ನಲ್ಲಿ ಆವೇಶಭರಿತ ಭಾಷಣದಲ್ಲಿ ನವಾಜ್ ಷರೀಫ್, “ಇಂದು ಫಜ್ಲುರ್ ರೆಹಮಾನ್, ಖಾಲಿದ್ ಮಕ್ಬೂಲ್ ಸಿದ್ದಿಕಿ ಮತ್ತು ಆಸಿಫ್ ಅಲಿ ಜರ್ದಾರಿ ಅವರನ್ನು ಭೇಟಿ ಮಾಡಲು ನಾನು ಶೆಹಬಾಜ್ ಷರೀಫ್ ಅವರನ್ನು ನಿಯೋಜಿಸಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Pakistan Election Results: ಲಾಹೋರ್ ಭದ್ರಕೋಟೆಯಲ್ಲಿ ನವಾಜ್ ಷರೀಫ್ ಕುಟುಂಬಕ್ಕೆ ಗೆಲುವು

ಏತನ್ಮಧ್ಯೆ, ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷವು ಶನಿವಾರ ಬಿಡುಗಡೆ ಮಾಡಿದ ಎಐ-ರಚಿಸಿದ ವಿಡಿಯೊದಲ್ಲಿ ಅವರು ದೇಶದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ತಿಂಗಳ ಅವಧಿಯ ದಮನವನ್ನು ಧಿಕ್ಕರಿಸಿತು, ಅದು ಪ್ರಚಾರವನ್ನು ದುರ್ಬಲಗೊಳಿಸಿತು. ಗುರುವಾರದ ಮತದಾನದಲ್ಲಿ ಅಭ್ಯರ್ಥಿಗಳನ್ನು ಸ್ವತಂತ್ರವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿತು. ನಿಧಾನಗತಿಯ ಎಣಿಕೆ ಪ್ರಕ್ರಿಯೆಯು ಶನಿವಾರ ಬೆಳಿಗ್ಗೆ ವೇಳೆಗೆ ಸ್ವತಂತ್ರರು ಕನಿಷ್ಠ 99 ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ತೋರಿಸಿದೆ. ಅವರಲ್ಲಿ 88 ಇಮ್ರಾನ್ ಖಾನ್‌ಗೆ ನಿಷ್ಠರಾಗಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ