AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

26 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಪಕ್ಕದ ಮನೆಯಲ್ಲಿ ಪತ್ತೆ

26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಪಕ್ಕದ ಮನೆಯಲ್ಲೇ ಪತ್ತೆಯಾಗಿರುವ ಘಟನೆ ಅಲ್ಜೀರಿಯಾದಲ್ಲಿ ನಡೆದಿದೆ. 1998 ರಲ್ಲಿ ಅಲ್ಜೀರಿಯನ್ ಅಂತರ್ಯುದ್ಧದ ಸಮಯದಲ್ಲಿ ಓಮರ್ ಬಿ ಎಂದು ಗುರುತಿಸಲಾದ ವ್ಯಕ್ತಿ 19 ನೇ ವಯಸ್ಸಿನಲ್ಲಿ ಕಣ್ಮರೆಯಾಗಿದ್ದರು ಮತ್ತು ಅವನ ಕುಟುಂಬವು ಅವನನ್ನು ಅಪಹರಿಸಲಾಗಿದೆ ಅಥವಾ ಮೃತಪಟ್ಟಿರಬಹುದು ಎಂದು ಊಹಿಸಿದ್ದರು.

26 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಪಕ್ಕದ ಮನೆಯಲ್ಲಿ ಪತ್ತೆ
ಅಲ್ಜೀರಿಯಾ ಪೊಲೀಸ್​
ನಯನಾ ರಾಜೀವ್
|

Updated on: May 15, 2024 | 9:17 AM

Share

ಕಳೆದ 26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಅಲ್ಜೀರಿಯಾದ ವ್ಯಕ್ತಿ ತನ್ನ ಪಕ್ಕದ ಮನೆಯಲ್ಲೇ ಪತ್ತೆಯಾಗಿದ್ದಾರೆ. ಇಷ್ಟೊಂದು ವರ್ಷ ಅಲ್ಲಿಯೇ ಇದ್ದರೂ ಅವರ ಕುಟುಂಬ ಸದಸ್ಯರ ಕಣ್ಣಿಗೆ ಒಂದು ಬಾರಿಯೂ ಕಾಣಿಸಿಕೊಂಡಿರಲಿಲ್ಲ.  1998 ರಲ್ಲಿ ಅಲ್ಜೀರಿಯನ್ ಅಂತರ್ಯುದ್ಧದ ಸಮಯದಲ್ಲಿ ಓಮರ್ ಬಿ ಎಂದು ಗುರುತಿಸಲಾದ ವ್ಯಕ್ತಿ 19 ನೇ ವಯಸ್ಸಿನಲ್ಲಿ ಕಣ್ಮರೆಯಾಗಿದ್ದರು ಮತ್ತು ಅವನ ಕುಟುಂಬವು ಅವನನ್ನು ಅಪಹರಿಸಲಾಗಿದೆ ಅಥವಾ ಮೃತಪಟ್ಟಿರಬಹುದು ಎಂದು ಊಹಿಸಿದ್ದರು.

ಪಿತ್ರಾರ್ಜಿತ ಆಸ್ತಿ ವಿವಾದದ ಕಾರಣದಿಂದ ಸಹೋದರನ ಫೋಟೊವನ್ನು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಇದಾದ ಬಳಿಕ ಈಗ 45 ವರ್ಷ ವಯಸ್ಸಿನವನಾಗಿರುವವ್ಯಕ್ತಿ ಕೇವಲ 200 ಮೀಟರ್ ದೂರದಲ್ಲಿರುವ ಡಿಜೆಲ್ಫಾ ನಗರದಲ್ಲಿ ಕಂಡುಬಂದಿದ್ದಾರೆ.

61 ವರ್ಷದ ವ್ಯಕ್ತಿಯೊಬ್ಬ ಓಮರ್​ನನ್ನು ಬಂಧಿಸಿಟ್ಟುಕೊಂಡಿದ್ದ, ಪೊಲೀಸರನ್ನು ಕಾಣುತ್ತಿದ್ದಂತೆಯೇ ಓಡಿ ಹೋಗಲು ಪ್ರಯತ್ನಿಸಿದ್ದ, ಇದೀಗ ಆತನನ್ನು ಬಂಧಿಸಲಾಗಿದೆ.  ತನ್ನ ಅಪಹರಿಸಿ ತನ್ನ ಮೇಲೆ ಮಾಟ ಮಾಡಿದ ಕಾರಣ ನನಗೆ ಯಾರಿಗೂ ಕರೆ ಮಾಡಲು ಸಾಧ್ಯವಾಗಿಲ್ಲ ಎಂದು ಅಪಹರಣಕ್ಕೊಳಗಾದ ವ್ಯಕ್ತಿ ಹೇಳಿದ್ದಾರೆ.

ಮತ್ತಷ್ಟು ಓದಿ: ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್​ಕಾಲ್​ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ

ತನಿಖೆ ಮುಂದುವರೆದಿದೆ, ವ್ಯಕ್ತಿಯನ್ನು ಮಾನಸಿಕ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆ ವ್ಯಕ್ತಿ ಓಮರ್​ನನ್ನು ಬಂಧಿಸಿಟ್ಟಿದ್ದು ಏಕೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ