ನೀವು ಪಾಕಿಸ್ತಾನದಲ್ಲಿದ್ದಿದ್ದರೆ ಇಷ್ಟೊತ್ತಿಗೆ ನಿಮ್ಮನ್ನು ಕಿಡ್ನ್ಯಾಪ್ ಮಾಡ್ತಿದ್ದೆ, ಕ್ಯಾಬ್ ಡ್ರೈವರ್ ಮಾತು ಕೇಳಿ ಬೆಚ್ಚಿಬಿದ್ದ ಕೆನಡಾ ಮಹಿಳೆ
ಪಾಕಿಸ್ತಾನಿ ಕ್ಯಾಬ್ ಚಾಲಕನೊಬ್ಬ ಕೆನಡಾದ ಮಹಿಳಾ ಪ್ರಯಾಣಿಕರೊಬ್ಬರ ಬಳಿ ಒಂದೊಮ್ಮೆ ನೀವು ಪಾಕಿಸ್ತಾನದಲ್ಲಿದ್ದಿದ್ದರೆ ಇಷ್ಟೊತ್ತಿಗೆ ಕಿಡ್ನ್ಯಾಪ್ ಮಾಡುತ್ತಿದ್ದೆ ಎಂದು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೀವು ಒಂದೊಮ್ಮೆ ಪಾಕಿಸ್ತಾನ(Pakistan)ದಲ್ಲಿದ್ದಿದ್ದರೆ ಇಷ್ಟೊತ್ತಿಗೆ ನಿಮ್ಮನ್ನು ಕಿಡ್ನ್ಯಾಪ್(Kidnap) ಮಾಡುತ್ತಿದ್ದೆ ಎಂದ ಪಾಕಿಸ್ತಾನಿ ಕ್ಯಾಬ್ ಚಾಲಕನ ಮಾತು ಕೇಳಿ ಒಮ್ಮೆ ಕೆನಡಾ ಮಹಿಳೆ ದಿಗ್ಭ್ರಮೆಗೊಂಡರು. ಪಾಕಿಸ್ತಾನಿ ಚಾಲಕನ ಈ ಮಾತು ಆ ಸಮಯದಲ್ಲಿ ಭಯ ಉಂಟು ಮಾಡುವುದರ ಜತೆಗೆ ಆಕ್ರೋಶವನ್ನೂ ಹುಟ್ಟುಹಾಕಿತ್ತು.
ಪಾಕಿಸ್ತಾನದಲ್ಲಿ ಹೀಗೆ ಈ ಸಮಯದಲ್ಲಿ ಒಂಟಿಯಾಗಿ ಸಿಕ್ಕಿದ್ದರೆ ಅಪಹರಿಸುತ್ತಿದ್ದರು, ಕೆನಡಾದಲ್ಲಿ ಕಾನೂನು ಕಠಿಣವಾಗಿರುವ ಕಾರಣ ಯಾರಿಂದಲೂ ಹೆಣ್ಣುಮಕ್ಕಳನ್ನು ಮುಟ್ಟಲು ಸಾಧ್ಯವಿಲ್ಲ ಎನ್ನುವ ಮಾತನಾಡಿದ್ದಾನೆ.
ಈ ವೀಡಿಯೊ ತ್ವರಿತವಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಶೇರ್ ಮಾಡಲಾಯಿತು, ವ್ಯಾಪಕ ಖಂಡನೆ ಕೂಡ ವ್ಯಕ್ತವಾಯಿತು ಮತ್ತು ಪಾಕಿಸ್ತಾನಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡವೂ ಕೇಳಿಬಂದಿತ್ತು. ಕೆಲವು ಸಂಸ್ಕೃತಿಗಳಲ್ಲಿ ಆಳವಾಗಿ ಬೇರೂರಿರುವ ಸ್ತ್ರೀದ್ವೇಷ ಮತ್ತು ಮಹಿಳಾ ಸುರಕ್ಷತೆಯ ಕೊರತೆಯನ್ನು ಎತ್ತಿ ತೋರಿಸಿದ್ದಾರೆ.
ಅವರು ಪ್ರಪಂಚದ ಯಾವುದೇ ಭಾಗದಲ್ಲಿ ವಾಸಿಸಬಹುದು, ಅವರ ಮನಸ್ಥಿತಿ ಒಂದೇ ಆಗಿರುತ್ತದೆ ಎಂದು ಕೆಲವರು ಹೇಳಿದ್ದಾರೆ. ಇದು ಪಾಕಿಸ್ತಾನಿ ಜನರ ಮನಸ್ಥಿತಿಯನ್ನು ತೋರಿಸುತ್ತದೆ. ಮಹಿಳೆಯರಿಗೆ ಗೌರವವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ಓದಿ: ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ, ಅಣು ಬಾಂಬ್ ಇಟ್ಕೊಂಡಿದೆ: ರಾಜನಾಥ್ ಸಿಂಗ್ಗೆ ಟಾಂಟ್ ಕೊಟ್ಟ ಫಾರೂಕ್ ಅಬ್ದುಲ್ಲಾ
ಇನ್ನೂ ಕೆಲವರು ಪಾಕಿಸ್ತಾನಿ ಚಾಲಕನ ಪರವಾಗಿ ಮಾತನಾಡಿದ್ದು, ಇದು ಮುಸ್ಲಿಮರು ಅಥವಾ ಯಾವುದರ ಬಗ್ಗೆ ಅಲ್ಲ. ಅವರು ಕೇವಲ ಪಾಕಿಸ್ತಾನದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ವಿವರಿಸಿದ್ದಾರೆ ಎಂದು ಹೇಳಿದ್ದಾರೆ.
ವಿಡಿಯೋ ಇಲ್ಲಿದೆ
“…If you were in Islamic Pakistan, I would have kidnapped you to have you (maal-e-ghanimat)…”
– Pakistani Islamist cabbie to a Canadian non-Muslim girl
Abduction, r@pe, and conversion are what Pakistani Hindus girls go through every day.pic.twitter.com/lAKEBiCzyo
— Pakistan Untold (@pakistan_untold) May 14, 2024
ಅವರು ಹಿಂದೂ, ಕ್ರಿಶ್ಚಿಯನ್ ಅಥವಾ ಮುಸ್ಲಿಂ ಆಗಿರಬಹುದು ಮತ್ತು ಯಾರಾದರೂ ಅಪರಾಧ ಮಾಡಬಹುದು ಮತ್ತು ಅದರಿಂದ ಅಲ್ಲಿ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಪಾಕಿಸ್ತಾನದಂತಹ ದೇಶಗಳಲ್ಲಿ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಇದು ತುಂಬಾ ಸಾಮಾನ್ಯವಾಗಿದೆ ಎಂದು ಇನ್ನೂ ಕೆಲವರು ವಾದಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ